ಮಾಳ:- ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ದಿನಾಚರಣೆ.
ಮಹಾತ್ಮ ಗಾಂಧೀಜಿಯವರ 154ನೇ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ 119ನೇ ಜಯಂತಿಗಳನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೂಡಬೆಟ್ಟು ಮಾಳ ಇಲ್ಲಿ ಆಚರಿಸಲಾಯಿತು.
ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಶ್ರೀ ಕೃಷ್ಣ ಮೊಯ್ಲಿ ಗಾಂಧೀಜಿ ಮತ್ತು ಶಾಸ್ತ್ರಿಯವರ ತತ್ವ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಾದರಿ ಮತ್ತು ಸಮರ್ಥ ಪ್ರಜೆಗಳಾಗುವಂತೆ ಕರೆ ನೀಡಿದರು.ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಶ್ರೀ ಶಶಿಧರ್ ಭಟ್ ಆಶಯ ನುಡಿಗಳನ್ನು ಆಡಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪ್ರಭಾವತಿ ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಅರುಣ ಎಸ್ ಡಿ ಎಂ ಸಿ ಸದಸ್ಯರಾದ ಶ್ರೀ ಸುರೇಶ್ ಹಾಗೂ ಶ್ರೀಮತಿ ಆಶಾ ಹಾಜರಿದ್ದರು.
ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದಲ್ಲಿ ಸೇವೆ ಸಲ್ಲಿಸಿದ ಶ್ರೀಮತಿ ಅಕ್ಷತಾ ಪ್ರಭು ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ಅಕ್ಷತಾ ಅವರು ಶಾಲೆಯಲ್ಲಿ ಸೇವೆ ಸಲ್ಲಿಸಲು ಮತ್ತು ಮಕ್ಕಳ ಪ್ರೀತಿ ಗಳಿಸಲು ಅವಕಾಶ ನೀಡಿದ SDMC ಹಾಗೂ ಶಾಲೆಗೆಧನ್ಯವಾದ ಅರ್ಪಿಸಿದರು. ಮಕ್ಕಳೂ ಕೂಡ ಅಭಿನಂದಿಸಿದರು.
ಮುಖ್ಯ ಶಿಕ್ಷಕಿ ಶ್ರೀಮತಿ ಪ್ರಭಾವತಿ ಸ್ವಾಗತಿಸಿದರು, ಹಿರಿಯ ಸಹ ಶಿಕ್ಷಕ ಶ್ರೀ ರಾಧಾಕೃಷ್ಣ ಜೋಶಿ ನಿರೂಪಿಸಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಕುರಿತು ಮಾತನಾಡಿ ಧನ್ಯವಾದ ನೀಡಿದರು. ಶಾಲೆಯ ಶಿಕ್ಷಕರು,ಪಾಲಕರು, ಮಕ್ಕಳು,ಅಡುಗೆ ಸಿಬ್ಬಂದಿಯವರು ಹಾಜರಿದ್ದರು.

Post a Comment