ಬೋಂಬೆ ಬಂಟ್ಸ್ ಎಸೋಸಿಯೇಶನ್ ನ ಸಾಂಸ್ಕೃತಿಕ ಸಮಿತಿಯ ಆಯೋಜನೆಯಲ್ಲಿ , ಮೈತಿದಿ ತುಳು ನಾಟಕ
ನಾಟಕ, ಯಕ್ಷಗಾನ ಸಂಸ್ಕಾರವನ್ನು ಕಲಿಸುವಂತಹ ಕೆಲಸವನ್ನು ಮಾಡುತ್ತಿದೆ:ಸಿಎ ಸುರೇಂದ್ರ ಶೆಟ್ಟಿ
(ಚಿತ್ರ ವರದಿ ದಿನೇಶ್ ಕುಲಾಲ್ )
ಬೋಂಬೆ ಬಂಟ್ಸ್ ಎಸೋಸಿಯೇಶನ್, ತುಳುನಾಡಿನ ಸಂಸ್ಕೃತಿ ಕಲೆಗಳನ್ನು ಉಳಿಸಲು ಸದಾ ಸಹಕರಿಸುತ್ತಿದೆ ತುಳುನಾಡಿನ ನಾಟಕ ಯಕ್ಷಗಾನಗಳು ನಮ್ಮ ಮುಂದಿನ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕಲಿಸುವಂತಹ ಕೆಲಸವನ್ನು ಮಾಡುತ್ತಿದೆ ಇಂಥ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬೋಂಬೆ ಬಂಟ್ಸ್ ಎಸೋಸಿಯೇಶನ್ ಸದಾ ಪ್ರೋತ್ಸಾಹವನ್ನು ನೀಡುತ್ತಿದೆ. ಎಂದು ಬೋಂಬೆ ಬಂಟ್ಸ್ ಎಸೋಸಿಯೇಶನ್ ಅಧ್ಯಕ್ಷ ಸಿಎ ಸುರೇಂದ್ರ ಶೆಟ್ಟಿ ಅವರು ನುಡಿದರು.
ಅವರು ಅಕ್ಟೋಬರ್ 2ರಂದು ಬೋಂಬೆ ಬಂಟ್ಸ್ ಎಸೋಸಿಯೇಶನ್ ಮುಂಬಯಿ ಇದರ ಸಾಂಸ್ಕೃತಿಕ ಸಮಿತಿಯ ಆಯೋಜನೆಯಲ್ಲಿ , ನವಿಮುಂಬಯಿ,ಜೂಯಿ ನಗರ ದಲ್ಲಿರುವ ಬಂಟ್ಸ್ ಸೆಂಟರ್, ಶಶಿಕಲಾ ಮನಮೋಹನ್ ಶೆಟ್ಟಿ ಕಾಂಪ್ಲೆಕ್ಸ್ ನ, ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದಲ್ಲಿ, ಕಲಾಸಂಗಮ ಮಂಗಳೂರು ಇವರಿಂದ ಪ್ರಸಿದ್ಧ ರಂಗ ನಿರ್ದೇಶಕ ವಿಜಯಕುಮಾರ್ ಕೋಡಿಯಲ್ ಬೈಲ್ ಅವರು ರಚಿಸಿ ನಿರ್ದೇಶಿಸಿರುವ ಮೈತಿದಿ ತುಳು ಸಂಸಾರಿಕ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಿದ್ದರು. ವಿಜಯಕುಮಾರ್ ಕೋಡಿಯಲ್ ಬೈಲ್ ಸಮಾಜಕ್ಕೆ ಹಾಗೂ ಯುವಜನತೆಗೆ ಉತ್ತಮ ಸಂದೇಶವನ್ನು ನೀಡುವ ನಾಟಕಗಳನ್ನು ಹಾಗೂ ಧಾರ್ಮಿಕ ದೈವ ದೇವರುಗಳ ಅರಿವನ್ನು ಮೂಡಿಸುವಂಥ ನಾಟಕಗಳನ್ನು ಸದಾ ಪ್ರದೇಶಿಸುತ್ತಿರುವುದು ಅಭಿನಂದನಿಯ. ಇಂಥ ಕಲಾವಿದರನು ಪ್ರೋತ್ಸಾಹಿಸಬೇಕಾದು ನಮ್ಮೆಲ್ಲರ ಕರ್ತವ್ಯವಾಗಿದೆ. ತುಳುನಾಡಿನ ಸಂಸ್ಕಾರ ಸಂಸ್ಕೃತಿಯನ್ನು ತುಳು ಭಾಷೆಯನ್ನು ಉಳಿಸುವಲು ಇಂಥ ಕಲಾತಂಡಗಳು ಮುಂದೆ ಬರಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದೆ ಸಿಬಿಡಿಯ ರಮೇಶ್ ಶೆಟ್ಟಿ ಅವರು ಮಾತನಾಡಿ ಬೋಂಬೆ ಬಂಟ್ಸ್ ಎಸೋಸಿಯೇಶನ್ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ್ ವಿ ಶೆಟ್ಟಿ ಐಕಳ, ಅವರ ನೇತೃತ್ವದಲ್ಲಿ ಅತ್ಯುತ್ತಮ ಕಾರ್ಯಕ್ರಮಗಳು ನಡೆಯುತ್ತಿದ್ದು ಅವರು ತುಳುನಾಡಿನ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ನಿರಂತರ ಕೆಲಸ ಮಾಡುತ್ತಾರೆ ಎಂದರು.
ಪ್ರಾರಂಭದಲ್ಲಿ ಬೋಂಬೆ ಬಂಟ್ಸ್ ಎಸೋಸಿಯೇಶನ್ ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ವಿಶ್ವನಾಥ್ ವಿ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸುತ್ತಾ ಬೋಂಬೆ ಬಂಟ್ಸ್ ಎಸೋಸಿಯೇಶನ್ ಸಾಂಸ್ಕೃತಿಕ ವಿಭಾಗದ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಸಮಾಜಕ್ಕೆ ತುಳುನಾಡಿನ ಸಂಸ್ಕೃತಿಯ ಅರಿವು ಮೂಡಿಸುವುದರೊಂದಿಗೆ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದೆ. ಇಂಥ ಕಾರ್ಯಕ್ರಮಗಳಿಗೆ ಸಹಕರಿಸುವ ಎಲ್ಲಾ ದಾನಿಗಳಿಗೂ ಈ ಸಂದರ್ಭದಲ್ಲಿ ಅವರು ಕೃತಜ್ಞತೆಯನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಕಲಾಸಂಗಮ ತಂಡದ ರೂವಾರಿ ಪ್ರಸಿದ್ಧ ರಂಗ ನಿರ್ದೇಶಕ ವಿಜಯಕುಮಾರ್ ಕೋಡಿಯಲ್ ಬೈಲ್ ಅವರನ್ನು ಸನ್ಮಾನಿಸಲಾಯಿತು. ಹಾಗೂ ಕಲಾಸಂಗಮ ತಂಡದ ಮುಂಬೈ ಸಂಚಾಲಕರಾದ ಪ್ರಕಾಶ್ ಶೆಟ್ಟಿ ಸುರತ್ಕಲ್ ಅವರನ್ನು ಗೌರವಿಸಿದರು. ಅತಿಥಿಯಾಗಿ ಉಪಸ್ಥಿತರಿದ್ದ ರಮೇಶ್ ಶೆಟ್ಟಿ ಸಿಬಿಡಿ. ಹಾಗೂ ನ್ಯಾಯವಾದಿ ಪ್ರಕಾಶ್ ಎಲ್ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಪೇಟೆಮನೆ ಪ್ರಕಾಶ್ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು ವೇದಿಕೆಯಲ್ಲಿ ಬೋಂಬೆ ಬಂಟ್ಸ್ ಎಸೋಸಿಯೇಶನ್, ಉಪಾಧ್ಯಕ್ಷ ನ್ಯಾಯವಾದಿ ಡಿಕೆ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಐಕಳ ಕಿಶೋರ್ ಕೆ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ್ ವಿ ಶೆಟ್ಟಿ, ಗೌರವಕೋಶಾಧಿಕಾರಿ ಸಿಎ ವಿಶ್ವನಾಥ ಎಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಅಡ್ವಕೇಟ್ ಗುಣಕಾರ ಡಿ. ಶೆಟ್ಟಿ, ಜೊತೆ ಕೋಶಾಧಿಕಾರಿಯ ಸಿಎ ದಿವಾಕರ್ ಕೆ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ದೃಶ್ಯಾ ಕೆ. ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ತುಳು ಕನ್ನಡಿಗರು ಕಲಾಭಿಮಾನಿಗಳು ಈ ನಾಟಕ ಪ್ರದರ್ಶನದಲ್ಲಿ ಉಪಸ್ಥಿತರಿದ್ದರು.






Post a Comment