ಶ್ರೀ ದೇವಿ ಬಯಲಾಟ ಸಮಿತಿ ಹತ್ತು ಸಮಸ್ತರು ರಂಗನಪಲ್ಕೆ ಕೌಡೂರು ಇದರ ನೂತನ ಲೋಗೋ ಅನಾವರಣ
ಡಿಸೆಂಬರ್ 12 ರಂದು 7 ನೇ ವರ್ಷದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ
ಶ್ರೀ ದೇವಿ ಬಯಲಾಟ ಸಮಿತಿ ಹತ್ತು ಸಮಸ್ತರು ರಂಗನಪಲ್ಕೆ ಕೌಡೂರು ಇದರ ನೂತನ ಲಾಂಛನ (ಲೋಗೋ) ವನ್ನು ಎಲಿಯಾಳ ಶಾಲಾ ವಠಾರದಲ್ಲಿ ಅನಾವರಣಗೊಳಿಸಲಾಯಿತು.
ಈ ಸಂದರ್ಭ ಖ್ಯಾತ ದೈವ ನರ್ತಕರಾದ ದೇಜು ಪಾಣರ, ಊರಿನ ಪ್ರಮುಖರಾದ ಜಗದೀಶ್ ತೆಂಡೂಲ್ಕರ್, ಮನೋಜ್ ಶೆಟ್ಟಿ, ನಿಧೀಶ್ ಆಚಾರ್ಯ, ಸತ್ಯಮಣಿ ಶೆಟ್ಟಿ, ಬೈಲೂರು ಗ್ರಾಮ ಪಂಚಾಯತ್ ಸದಸ್ಯರಾದ ವಿಶ್ವೇಶ್ ದೇವಾಡಿಗ ಹಾಗೂ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಶ್ರೀ ದೇವಿ ಬಯಲಾಟ ಸಮಿತಿ ಹತ್ತು ಸಮಸ್ತರು ರಂಗನಪಲ್ಕೆ ಕೌಡೂರು ಇದರ ಸರ್ವ ಪದಾಧಿಕಾರಿಗಳು, ಹಾಗೂ ಸದಸ್ಯರ ನೇತೃತ್ವದಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನವು ಕಳೆದ 6 ವರ್ಷಗಳಿಂದ ಸತತವಾಗಿ ಅದ್ದೂರಿಯಾಗಿ ನಡೆದುಕೊಂಡು ಬಂದಿದೆ.
ಪ್ರಸ್ತುತ 7 ನೇ ವರ್ಷದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟವು ಇದೇ ಬರುವ ಡಿಸೆಂಬರ್ 2023 ರ 12ನೇ ತಾರೀಕಿನ ಮಂಗಳವಾರದಂದು ಅದ್ದೂರಿಯಾಗಿ ಎಲಿಯಾಳ ಶಾಲಾ ವಠಾರದಲ್ಲಿ ಜರುಗಲಿದೆ.


Post a Comment