ಬೆಂಗಳೂರು ಕಂಬಳ ಮೈದಾನದಲ್ಲಿ ತುಳುನಾಡಿನ ಆರಾಧನಾ ಸಂಕೇತಗಳನ್ನು ಪಿಓಪಿ ಯಲ್ಲಿ ತಯಾರಿಸಿ ಎಲ್ಲೆಂದರಲ್ಲಿ ಪ್ರದರ್ಶನವಾಗಿದೆ ,ಸಾಮಾಜಿಕ ಜಾಣತನದಲ್ಲಿ ತುಳುನಾಡಿನ ಜನರ ಅಕ್ರೋಶ
ಕಂಬಳ ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂತಹ ವ್ಯವಸ್ಥೆ ಬೆಂಗಳೂರು ಮೈದಾನದಲ್ಲಿ ಚೆನ್ನಾಗಿ ಆಗಿದೆ, ರಾಜಧಾನಿಯ ಅರಮನೆ ಮೈದಾನದಲ್ಲಿ ಬೆಂಗಳೂರು ಕಂಬಳ ಸಮಿತಿಯ ನೇತೃತ್ವದಲ್ಲಿ ಎರಡು ದಿನಗಳ ಕಾಲ ಯಶಸ್ವಿಯಾಗಿ ನಡೆದ 'ರಾಜ - ಮಹಾರಾಜ' ಜೋಡುಕರೆ ಕಂಬಳ ಕೂಟ ರವಿವಾರ ರಾತ್ರಿ ವಿದ್ಯುಕ್ತವಾಗಿ ತೆರೆ ಕಂಡಿದೆ. ಹಗ್ಗ ಕಿರಿಯ ವಿಭಾಗ, ಹಗ್ಗ ಹಿರಿಯ ವಿಭಾಗ, ಅಡ್ಡಹಲಗೆ ಕಂಬಳ, ಕನಹಲಗೆಯ ಕಂಬಳ ಹೀಗೆ ಹಲವು ವಿಭಾಗಗಳಲ್ಲಿ ಕೋಣಗಳು ಸ್ಪರ್ಧಿಸಿ ಚಿನ್ನದ ಪದಕ ಗೆದ್ದಿವೆ.
ಆದರೆ ನಮ್ಮ ಸಂಸ್ಕೃತಿಯ ನಮ್ಮ ಆರಾಧನಾ ಸಂಕೇತಗಳನ್ನು ಪಿಓಪಿ ಯಲ್ಲಿ ತಯಾರಿಸಿ ಎಲ್ಲೆಂದರಲ್ಲಿ ಪ್ರದರ್ಶನದ ವಸ್ತುವಾಗಿಸಿದರೆ ಪ್ರದರ್ಶನ ನೋಡಬಂದವರಿಗೆ ಅದೊಂದು ಕಟ್ಟೆ ಅಷ್ಟೇ.ಮಹತ್ವ, ಪಾವಿತ್ರ್ಯ ಗೊತ್ತಿಲ್ಲದಂತಾಗಿದೆ. ಇದು ಆಯೋಜಕರದ್ದು ತಪ್ಪು ಬೇರೆ ಊರಿನ ಜನರಿಗೆ ನಮ್ಮ ಶ್ರದ್ಧೆಯ ಬಗ್ಗೆ ಅಷ್ಟು ಗೊತ್ತಿಲ್ಲ ಇದನ್ನು ಸ್ಪರ್ಶ ಮಾಡುವಂತಿಲ್ಲ ಯಾವುದೇ ಫಲಕವನ್ನು ಅಳವಡಿಸಿಲ್ಲ.ಇಂತಹ ಬಹುದೊಡ್ಡ ತುಳುನಾಡಿನ ಸಂಸ್ಕೃತಿ ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ ಇದರ ಬಗ್ಗೆ ಸಾಮಾಜಿಕ ಜಾಣತನದಲ್ಲಿ ತುಳುನಾಡಿನ ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಪಾವಿತ್ರ್ಯತೆ ಅರಿಯದವರಿಗೆ ತಿಳಿ ಹೇಳುವುದು ಆಯೋಜಕರ ಕರ್ತವ್ಯ ವಾಗಿದೆ.
Post a Comment