ನವಶಕ್ತಿ ಮಹಿಳಾ ವೇದಿಕೆ ರಿ ಕೊಲ್ಲೂರು ವತಿಯಿಂದ ಕನಕದಾಸರ ಜಯಂತಿ ಆಚರಣೆ
ನವಶಕ್ತಿ ಮಹಿಳಾ ವೇದಿಕೆ ರಿ ಕೊಲ್ಲೂರು ವತಿಯಿಂದ ಗುರುವಾರ ಕನಕದಾಸರ ಜಯಂತಿ ಆಚರಿಸಲಾಯಿತು.
ಶ್ರೇಷ್ಠ ಭಕ್ತ ಕನಕದಾಸ ಜಯಂತಿ ಅಂಗವಾಗಿ ನವಶಕ್ತಿ ವತಿಯಿಂದ ಕನಕದಾಸರ ಭಾವಚಿತ್ರಕ್ಕೆ ಸಂಘದ ಸದಸ್ಯೆ ಜಯಲಕ್ಷ್ಮಿ ಮೊಗವೀರ ದೀಪ ಬೆಳಗಿಸಿ ಪುಷ್ಪಾರ್ಚನೆ ಮೂಲಕ ಗೌರವ ನಮನ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷೆ ಗ್ರೀಷ್ಮಾ ಗಿರಿಧರ್ ಭಿಡೆ ಮಾತನಾಡಿ ಕನಕದಾಸರು ನಾಡಿನ ಉದ್ದಗಲಕ್ಕೂ ಕಾಲ್ನಡಿಗೆಯಲ್ಲಿ ಸಂಚರಿಸಿ ಭಕ್ತಿಭಾವ, ವೈರಾಗ್ಯಗಳನ್ನು ಸಾರಿ ಸಮಾಜವನ್ನು ಜಾಗೃತಿಗೊಳಿಸಿದರು ಎಂದು ತಿಳಿಸಿದರು.
ಈ ವೇಳೆ ಸಂಘದ ಉಪಾಧ್ಯಕ್ಷೆ ರತ್ನ ಮಾರಿಕಟ್ಟೆ, ಕಾರ್ಯದರ್ಶಿ ಜ್ಯೋತಿ ರಾಘವೇಂದ್ರ, ಸದಸ್ಯರಾದ ಸುಷ್ಮಾ, ರೂಪ , ಸುಗುಣ, ರತ್ನ ಮೊಗವೀರ ಮತ್ತು ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.

.jpeg)


Post a Comment