ತೆಲಂಗಾಣದ ಹೈದರಾಬಾದ್ನಲ್ಲಿ ಚಲಿಸುತ್ತಿದ್ದ ಬುಲೆಟ್ ಸ್ಫೋಟದಿಂದಾಗಿ ದೊಡ್ಡ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಅನೇಕ ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಚಲಿಸುತ್ತಿದ್ದ ಬುಲೆಟ್ ಬೈಕ್ ಸ್ಫೋಟಗೊಂಡ ಘಟನೆ ಹೈದರಾಬಾದ್ನ ಭವಾನಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ವೋಲ್ಟಾ ಹೋಟೆಲ್ ಬಳಿ ನಡೆದಿದೆ.
ಅಕ್ಬರ್ ಫಂಕ್ಷನ್ ಹಾಲ್ ಬಳಿ ಬುಲೆಟ್ ಬೈಕ್ ನ ಇಂಧನ ಟ್ಯಾಂಕ್ ಸ್ಫೋಟಗೊಂಡ ಪರಿಣಾಮ 10 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಪ್ರಿನ್ಸೆಸ್ ಎಸ್ರಾ ಆಸ್ಪತ್ರೆಗೆ ದಾಖಲಿಸಲಾಗಿದೆ.
Post a Comment