ಹಾಜಬ್ಬರ ಕನಸು ನನಸು: ಪದವಿಪೂರ್ವ ಶಿಕ್ಷಣ ಆರಂಭ
ಪದ್ಮಶ್ರೀ ಪುರಸ್ಕ್ಋತರಾದ ಹರೇಕಳ ಹಾಜಬ್ಬರು ಕಿತ್ತಲೆ ಹಣ್ಣು ಮಾರಾಟ ಮಾಡಿ ಅದರಲ್ಲಿ ಬಂದ ಹಣದಲ್ಲಿ ಹರೇಕಳದ ನ್ಯೂಪಡ್ಪು ಎನ್ನುವಲ್ಲಿ ಶಾಲೆಯೊಂದನ್ನು ಆರಂಭಿಸಿದರು.
ಬಳಿಕ ಫ್ರೌಡಶಾಲೆಯ ಕನಸು ಕೂಡ ನನಸಾಗಿದ್ದು, ಇದೀಗ ಅವರ ಮತ್ತೊಂದು ಮಹಾದಾಸೆ ಆಗಿದ್ದ ಪದವಿ ಪೂರ್ವ ಕಾಲೇಜಿನ ಕನಸೂ ಕೂಡ ನೆರವೇರಿದೆ. ಈ ವರ್ಷದಿಂದ ಅಂದರೆ ಜೂನ್ 1 ರಿಂದ ಪದವಿ ಪೂರ್ವ ತರಗತಿಗಳು ಆರಂಭವಾಗಲಿದೆ.
ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ ತರಗತಿಗಳು ನಡೆಯಲಿದ್ದು, ಪ್ರಾಂಶುಪಾಲರಾಗಿ ನಾಯಿಲಪದವು ಸರಕಾರಿ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ್ರದ ಉಪನ್ಯಾಸಕ ಅಬ್ದುಲ್ ರಝಾಕ್ ನಿಯೋಜನೆಗೊಂಡಿದ್ದಾರೆ. ಈಗಾಗಲೇ ಪಿಯುಸಿ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದೆ.
ನ್ಯೂಪಡ್ಪು ಶಾಲೆಯಿಂದ ಸಮೀಪದ ಹರೇಕಳ ದಗನೆಪಡ್ಪು ಬಳಿ ಕಾಲೇಜಿಗೆ 1.3 ಎಕ್ರೆ ಜಾಗ ಮೀಸಲಿಟ್ಟಿದ್ದು, ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ನೊಂದಾವಣೆಯಾಗಿದೆ.

Post a Comment