ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂಡಬೆಟ್ಟು ಮಾಳ ಇಲ್ಲಿ ಕೆಂಪೇಗೌಡ ಅವರ 515 ನೇ ಜಯಂತಿ
ನಾಡಪ್ರಭು ಕೆಂಪೇಗೌಡ ಅವರ 515 ನೇ ಜನ್ಮ ಜಯಂತಿಯ ಪ್ರಯುಕ್ತ ಅವರ ಜೀವನ ಮತ್ತು ಸಾಧನೆ,ಕನ್ನಡ ಭಾಷೆ ಮತ್ತು ಸಾಹಿತ್ಯ ಲೋಕಕ್ಕೆ ಅವರ ಕೊಡುಗೆಗಳನ್ನು ಶಾಲೆಯ ಹಿರಿಯ ಶಿಕ್ಷಕ ಶ್ರೀ ರಾಧಾಕೃಷ್ಣ ಜೋಶಿ ಶಾಲೆಯ ಪ್ರಾರ್ಥನಾ ಸಭೆಯಲ್ಲಿ ತಿಳಿಸಿದರು.
ಮಾತ್ರವಲ್ಲದೇ ನಾಡು ಮತ್ತು ನುಡಿಗಾಗಿ ಹೋರಾಟ ಮಾಡಿದ ಅನೇಕ ಮಹಾತ್ಮರ ಜೀವನದ ಸಾರವನ್ನು ತಿಳಿದುಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರಭಾವತಿ ಸೇರಿದಂತೆ ಸಹ ಶಿಕ್ಷಕ ರು, ಮಕ್ಕಳು ಹಾಜರಿದ್ದರು.

Post a Comment