".

Header Ads

Bengaluru: ಸಿಲಿಕಾನ್ ಸಿಟಿ ಜನರಿಗೆ ಸರ್ಕಾರದಿಂದ 'ತೆರಿಗೆ ಭಾಗ್ಯ'! ಪ್ರತಿ ಮನೆಗೂ ತಿಂಗಳಿಗೆ ₹100

 

ರಾಜ್ಯ ಸರ್ಕಾರ ರಾಜಧಾನಿ ಬೆಂಗಳೂರಿನ (Bengaluru) ಜನರಿಗೆ ತೆರಿಗೆ ಭಾಗ್ಯ ನೀಡಲು ಮುಂದಾಗಿದೆ ಎನ್ನಲಾಗಿದೆ. ಇದರಂತೆ ರಾಜಧಾನಿಯ ಪ್ರತಿ ಮನೆಯಿಂದ ತಿಂಗಳಿಗೆ 100 ರೂಪಾಯಿಗಳ ಶುಲ್ಕ ವಿಧಿಸಲು ಮುಂದಾಗಿದೆಯಂತೆ. ಹೌದು, ಇತ್ತಿಚೆಗಷ್ಟೇ ರಾಜ್ಯ ಸರ್ಕಾರ (Karnataka Govt) ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿಯನ್ನು (Solid Waste Management Company) ಮಾಡಿತ್ತು.

ಈಗ ಕಂಪನಿಯಿಂದ ನೇರವಾಗಿ ಘನತ್ಯಾಜ್ಯ ಶುಲ್ಕ ವಿಧಿಸಲು (Solid waste fee) ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ.

ಕಳೆದ ನಾಲ್ಕು ವರ್ಷದಿಂದ ಘನತ್ಯಾಜ್ಯ ಶುಲ್ಕ ವಿಧಿಸುವ ಚರ್ಚೆ ನಡೆದಿತ್ತು. ಆದರೆ ಸಾರ್ವಜನಿಕರ ವಿರೋಧ ಹಿನ್ನೆಲೆಯಲ್ಲಿ ಕೈಬಿಡಲಾಗಿತ್ತು. ಈಗ ಮತ್ತೆ ಮನೆ ಮನೆಗೂ ಘನತ್ಯಾಜ್ಯ ಶುಲ್ಕ ವಿಧಿಸೋದಕ್ಕೆ ಸರ್ಕಾರ ಮುಂದಾಗಿದೆಯಂತೆ. ಬೇರೆ ರಾಜ್ಯಗಳ ವರದಿ ಆಧರಿಸಿ ಸರ್ಕಾರಕ್ಕೆ ಕಂಪನಿ ಪ್ರಸ್ತಾವನೆ ಕಳುಹಿಸಿದೆ. ದೇಶದ ಬೇರೆ ರಾಜ್ಯಗಳಲ್ಲಿ ಈಗಾಗಲೇ ಈ ತೆರಿಗೆ ಜಾರಿಯಲ್ಲಿದ್ದು, ಅದೇ ರೀತಿ ಬೆಂಗಳೂರಲ್ಲಿ ಜಾರಿ ಮಾಡೋದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆಯಂತೆ.

ವಸತಿ ಕಟ್ಟಡಗಳಿಗೆ ಮಾಸಿಕ 100 ರೂಪಾಯಿ

ಈ ಹಿಂದೆ ವಿದ್ಯುತ್ ಬಿಲ್ ಮೂಲಕ ಸೇವಾ ಶುಲ್ಕ ವಿಧಿಸುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಗೃಹ ಜ್ಯೋತಿ ಯೋಜನೆ ಹಿನ್ನೆಲೆ ಬಹುತೇಕ ಮಂದಿ ಬಿಲ್ ಪಾವತಿ ಮಾಡಿಲ್ಲ. ಈ ಹಿನ್ನೆಲೆ ಅಸ್ತಿ ತೆರಿಗೆಯೊಂದಿಗೆ ಘನತ್ಯಾಜ್ಯ ಸೇವಾ ಶುಲ್ಕ ವಿಧಿಸುವ ಮೂಲಕ ಹಣ ಸಂಗ್ರಹಕ್ಕೆ ಪ್ಲಾನ್ ನಡೆದಿದೆಯಂತೆ. ಸದ್ಯ ವಸತಿ ಕಟ್ಟಡಗಳಿಗೆ ಮಾಸಿಕ 100 ರೂಪಾಯಿ ಹಾಗೂ ವಾಣಿಜ್ಯ ಕಟ್ಟಡಗಳಿಗೆ 200 ರೂಪಾಯಿ ದರ ನಿಗದಿಗೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆಯಂತೆ.

ಒಂದು ಕಟ್ಟಡದಲ್ಲಿ 10 ಮನೆ ಇದ್ದರೆ, ಪ್ರತಿ ಮನೆಗೂ ಅಸ್ತಿ ತೆರಿಗೆ ಮೂಲಕ ಮಾಸಿಕ 100 ರೂಪಾಯಿ ಸಂಗ್ರಹ, ಅಸ್ತಿ ತೆರಿಗೆ ಮೂಲಕ ಸಂಗ್ರಹವಾದ ಹಣವನ್ನ ಬಿಬಿಎಂಪಿ ಕಂಪನಿಗೆ ವರ್ಗಾವಣೆ ಮಾಡಲು ತಯಾರಿ ನಡೆದಿದ್ದು, ನಗರದಲ್ಲಿ ಎಷ್ಟು ವಸತಿ, ವಾಣಿಜ್ಯ ಕಟ್ಟಡಗಳ ಕುರಿತು ಸರ್ವೆ ನಡೆಸಲು ಮುಂದಾಗಿದೆಯಂತೆ. ದರ ನಿಗದಿಯಾದರೆ ವಾರ್ಷಿಕ 800 ಕೋಟಿ ಘನತ್ಯಾಜ್ಯ ಕಂಪನಿಗೆ ಆದಾಯ ನಿರೀಕ್ಷೆ ಇದ್ದು, ಪ್ರಸ್ತಾವನೆ ಒಪ್ಪಿದಲ್ಲಿ ಘನತ್ಯಾಜ್ಯ ಸೇವಾ ಶುಲ್ಕ ಗ್ಯಾರಂಟಿ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ

ಕಸ ಸಂಗ್ರಹಕ್ಕೆ 100 ರೂಪಾಯಿ ನಿಗಧಿ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, 2016ರ ರೂಲ್ ಪ್ರಕಾರ ನೋಟಿಫಿಕೇಷನ್ ಆಗಿದೆ. ಆದರೆ ಅದಕ್ಕಿಂತ ಕಡಿಮೆ ಹಣ ವಸೂಲಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸರ್ಕಾರ ಅನುಮೋದನೆ ಕೊಟ್ಟ ಮೇಲೆ ಅದನ್ನ ನಿಗದಿ ಮಾಡುತ್ತೇವೆ. ನಮ್ಮ ರಾಜ್ಯದಲ್ಲೇ ಪಂಚಾಯಿತಿಗಳಲ್ಲಿ ಶುಲ್ಕ ವಸೂಲಾತಿ ನಡೆಯುತ್ತಿದೆ. ಈಗ ನಾವು ಕಡಿಮೆ ಶುಲ್ಕವನ್ನ ನಿಗದಿಗೆ ಪ್ರಸ್ತಾವನೆ ಕೊಟ್ಟಿದ್ದೇವೆ. ಸರ್ಕಾರ ಅನುಮತಿ ಕೊಟ್ಟರೇ ಶುಲ್ಕ ವಸೂಲಿ ಮಾಡ್ತೀವೆ ಎಂದು ತಿಳಿಸಿದ್ದಾರೆ.

Powered by Blogger.