".

Header Ads

ಹಿರಿಯಡಕ : "ಸೈಬರ್ ಅಪರಾಧ ತಡೆ ಕಾಯ್ದೆ, ಪೋಕ್ಸ್ ಮತ್ತು ನೂತನ ಅಪರಾಧ ಸಂಹಿತೆಗಳ ಕುರಿತು ಅರಿವು ಕಾರ್ಯಕ್ರಮ"

 “ಯುವ ಸಮುದಾಯವು ಸೈಬರ್ ಅಪರಾಧಗಳ ಕುರಿತು ಜಾಗೃತರಾಗಬೇಕು” : ಸಂತೋಷ್



ಸಮಕಾಲೀನ ಜಗತ್ತಿನಲ್ಲಿ ತಂತ್ರಜ್ಞಾನದ ಬೆಳವಣಿಗೆಯಿಂದ ಅನೇಕ ಪುಯೋಜನಗಳನ್ನು ಪಡೆಯುತ್ತಿದಾಗಿಯೂ ಸಹ ಇದೇ ತಂತ್ರಜ್ಞಾನದ ದುರುಪಯೋಗದಿಂದ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು ಎಲ್ಲಾ ವರ್ಗಗಳ ಜನರೂ ವರ್ಗಗಳ ಜನರೂ ಇದರ ಬಲಿಪಶುಗಳಾಗುತ್ತಿದ್ದಾರೆ, ಯುವ ಸಮುದಾಯದ ಭಾಗವಾಗಿರುವ ವಿದ್ಯಾರ್ಥಿಗಳು ಈ ಕುರಿತು ಜಾಗೃತರಾಗಿ ಇತರರಲ್ಲಿಯೂ ಜಾಗೃತಿಯನ್ನು ಮೂಡಿಸಬೇಕು ಎಂದು ಹಿರಿಯಡಕ ಆರಕ್ಷಕ ಠಾಣೆಯ ಹೆಡ್ ಕಾನ್ ಸ್ಟೇಬಲ್  ಸಂತೋಷ್ ರವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಐ.ಕ್ಯೂ.ಎ.ಸಿ, ರಾಜ್ಯಶಾಸ್ತ್ರ ವಿಭಾಗ, ಮತ್ತು ಆರಕ್ಷಕ ಠಾಣೆ ಹಿರಿಯಡಕದ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡಕದಲ್ಲಿ ನಡೆದ "ಸೈಬರ್ ಅಪರಾಧ ತಡೆ ಕಾಯ್ದೆ, ಪೋಕ್ಸ್ ಮತ್ತು ನೂತನ ಅಪರಾಧ ಸಂಹಿತೆಗಳ ಕುರಿತು ಅರಿವು ಕಾರ್ಯಕ್ರಮ"ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಇವರು ಮಾತನಾಡಿದರು. ಜುಲೈ 1 2024 ರಿಂದ ನೂತನ ಭಾರತೀಯ ನ್ಯಾಯ ಸಂಹಿತೆ, ಭಾರತ ನಾಗರೀಕ ಸುರಕ್ಷಾ ಸಂಹಿತೆ, ಭಾರತ ಸಾಕ್ಷ್ಯ ಅಧಿನಿಯಮಗಳು ಜಾರಿಯಾಗಲಿದ್ದು ಬ್ರಿಟಿಷ್ ಕಾಲದಿಂದಲೂ ಅಸ್ತಿತ್ವದಲ್ಲಿದ್ದ ಅಪರಾಧ ಸಂಹಿತೆ ಅಧಿನಿಯಮಗಳಲ್ಲಿ ಗಮನಾರ್ಹ ಬದಲಾವಣೆಗಳಾಗುವುದರಿಂದ ಈ ಬಗ್ಗೆ ವಿದ್ಯಾರ್ಥಿ ಸಮುದಾಯಕ್ಕೆ ಅರಿವು ಮೂಡಿಸುವುದರ ಜೊತೆಗೆ ಸೈಬರ್ ಅಪರಾಧ ತಡೆ ಕಾಯ್ದೆ, ಪೋ ಕಾಯ್ದೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಾಯ್ದೆ, ಡ್ರಗ್ ನಿಷೇಧ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಸೀಮಾ ಜಿ.ಕೆ ಮಾತನಾಡಿ ಎಲ್ಲಾ ಕಾಯ್ದೆಗಳೂ ನಾಗರೀಕರ ಸಮಾಜದ ರಕ್ಷಣೆಗಾಗಿಯೇ ಇರುವುದರಿಂದ ವಿದ್ಯಾರ್ಥಿಗಳು ಈ ಬಗ್ಗೆ ಅರಿವು ಮೂಡಿಸಿಕೊಂಡು ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ ಸಂಚಾಲಕ ಪ್ರವೀಣ್ ಶೆಟ್ಟಿ, ಬೋಧಕ-ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೇಮಾ ಮತ್ತು ತಂಡ ಪ್ರಾರ್ಥಿಸಿದರು. ಸುಭಾಷ್ ಹೆಚ್ ಕೆ ನಿರೂಪಿಸಿ ಸ್ವಾಗತಿಸಿದರು. ಪ್ರವೀಣ್ ಶೆಟ್ಟಿ ವಂದಿಸಿದರು.

Powered by Blogger.