".

Header Ads

ಉಡುಪಿ:-ಇನ್ಮುಂದೆ ಗೂಗಲ್‌ನಲ್ಲಿ ತುಳು ಟ್ರಾನ್ಸ್‌ಲೇಷನ್ ಲಭ್ಯ

 

ಗೂಗಲ್‌ನಲ್ಲಿ ಇನ್ನು ಮುಂದೆ 110 ಹೊಸ ಭಾಷೆಗಳಲ್ಲಿ ಅನುದಾನ ಮಾಡಿಕೊಳ್ಳಲು ಮಾಡಿಕೊಟ್ಟಿದೆ. ಈ ಹಿಂದೆ ದೇಶ- ವಿದೇಶದ 133 ಭಾಷೆಗಳಿಗೆ ಮಾತ್ರ ಗೂಗಲ್ ಅವಕಾಶ ಮಾಡಿಕೊಟ್ಟಿತ್ತು. ಅವಕಾಶವನ್ನು ಈ ಬಾರಿ ಹೊಸ ಭಾಷೆಗಳ ಆಗಮನದಲ್ಲಿ ಅವಿಭಜಿತ ಜಿಲ್ಲೆಯಲ್ಲಿರುವ ಪ್ರಮುಖ ಭಾಷೆ ತುಳುವಿಗೂ ಮನ್ನಣೆ ಸಿಕ್ಕಿದೆ.ಗೂಗಲ್ ಸಂಸ್ಥೆಯ ಹಿರಿಯ ಸಾಫ್ಟ್ ಯೀರ್ ಎಂಚ ಉಲ್ಲರ್ ವೇರ್ ಎಂಜಿನಿಯರ್ ಐಸಾಕ್ ಕ್ಯಾಸ್ಟೆಲ್ ಎನ್ನುವವರು ತಮ್ಮ ಬ್ಲಾಗ್‌ ಪೋಸ್ಟ್‌ನಲ್ಲಿ ಈ ಕುರಿತು ಅಧಿಕೃತವಾದ ಮಾಹಿತಿಯನ್ನು ನೀಡಿದ್ದಾರೆ.


ಈ ಹೊಸ ಭಾಷೆಗಳನ್ನು ನಾನಾ ದೇಶಗಳ ಮಿಲಿಯನ್‌ಗಿಂತಲೂ ಹೆಚ್ಚು ಜನರು ಮಾತನಾಡುತ್ತಾರೆ. ಇದರ ಜತೆಗೆ ಜಾಗತಿಕ ಜನಸಂಖ್ಯೆಯ ಸುಮಾರು 8 ಪ್ರತಿಶತದಷ್ಟು ಜನರು ದಿನನಿತ್ಯ ಮಾತನಾಡುತ್ತಾರೆ ಎಂದು ಅವರು ಮಾಹಿತಿಯಲ್ಲಿ ತಿಳಿಸಿದ್ದಾರೆ. ಇವರ ಪ್ರಕಟಣೆಯ ಜತೆಗೆ ಗೂಗಲ್ ಅನುವಾದಕ್ಕೆ 110 ಹೊಸ ಭಾಷೆಗಳಿಗೆ ಬೆಂಬಲವನ್ನು ವಿಸ್ತರಿಸುತ್ತಿದೆ ಎಂದು ಗೂಗಲ್ ಕಂಪನಿ ಜೂ.27ರಂದು ಘೋಷಣೆ ಮಾಡಿದೆ.
ಭಾಷೆಯ ಉಳಿವಿಗೆ ಕಾರಣವಾದ ಅರ್ಟಿಫಿಶೀಯಲ್ ಇಂಟೆಲಿಜೆನ್ಸಿ (ಎಐ) ಈ ಹೊಸ ಭಾಷೆಯ ಅನುವಾದಕ್ಕೆ ನೆರವಾಗಿದೆ. ಮುಖ್ಯವಾಗಿ ಎಐಯಿಂದ ಈ ಭಾಷೆಗಳನ್ನು ಸುಲಭದಲ್ಲಿ ಅನುವಾದಗಳನ್ನು ಮಾಡಿಕೊಳ್ಳಬಹುದು. ಈ ಮೂಲಕ ಕೃತಕ ಬುದ್ದಿಮತ್ತೆ ಭಾಷೆಯ ಉಳಿವಿಗೆ ಸಹಕಾರ ನೀಡಿದೆ ಎನ್ನುವುದು ಗೂಗಲ್ ಸಂಸ್ಥೆಯ ಮಾಹಿತಿ ನೀಡಿದೆ.
ಅನುದಾನದ 110 ಭಾಷೆಗಳಲ್ಲಿ ಸುಮಾರು ಕಾಲು ಭಾಗದಷ್ಟು ಭಾಷೆಗಳು ಆಫ್ರಿಕನ್ ಆಗಿದೆ. ಇದರ ಜತೆಗೆ ಭಾರತದ ಕೆಲವೊಂದು ಪ್ರಾದೇಶಿಕ ಜನರು ಮಾತನಾಡುವ ಭಾಷೆಗಳಿಗೂ ಮನ್ನಣೆ ನೀಡಿದರೆ ಕರ್ನಾಟಕದ ಏಕೈಕ ಅದರಲ್ಲೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಳಸುವ ತುಳು ಭಾಷೆಯನ್ನು ಪರಿಗಣಿಸಲಾಗಿದೆ ಎಂದು ಗೂಗಲ್ ಮಾಹಿತಿ ನೀಡಿದೆ.

Powered by Blogger.