".

Header Ads

ಮಳೆಗೆ ಮನೆಗೋಡೆ ಕುಸಿತ : ಕುತ್ತಾರಿನ ಒಂದೇ ಕುಟುಂಬದ ನಾಲ್ವರು ಸಾವು

 


ಮಳೆಗೆ ಮನೆಗೋಡೆ ಕುಸಿದು ಘೋರ ದುರಂತ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುತ್ತಾರು ಮದನಿ ನಗರದಲ್ಲಿ ನಡೆದಿದೆ.

ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಮನೆಗೋಡೆ ಕುಸಿದು ದುರಂತ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.

ಮೃತರನ್ನು ಯಾಸೀನ್‌, ಮರಿಯಮ್ಮ, ಮಕ್ಕಳಾದ ರಿಯಾನ್‌ ರಿಫಾನ್‌ ಎಂದು ಗುರುತಿಸಲಾಗಿದೆ.

ಅಬೂಬಕ್ಕರ್‌ ಎಂಬುವರಿಗೆ ಸೇರಿದ ಮನೆಯ ಗೋಡೆ ಕುಸಿದ ಪರಿಣಾಮ ಯಾಸೀರ್‌ ಮನೆ ಮೇಲೆ ಬಿದ್ದು ದುರಂತ ಸಂಭವಿಸಿದ್ದು, ಸದ್ಯ ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಮತ್ತೊಂದು ಮಗುವಿನ ಮೃತದೇಹದ ಪತ್ತೆ ಕಾರ್ಯ ನಡೆಯುತ್ತಿದೆ. ಉಳ್ಳಾಲ ಪೊಲೀಸ್‌ ಠಾಣ ವ್ಯಾಪ್ತಿಯಲಿ ಪ್ರಕರಣ ನಡೆದಿದೆ.

Powered by Blogger.