".

Header Ads

ಉಡುಪಿ :- ಜಿಲ್ಲೆಯಲ್ಲಿ ಗಾಳಿ -ಮಳೆಗೆ 167.63 ಕೋಟಿ ರೂ. ನಷ್ಟ..! ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ

 


ಈ ಬಾರಿ  ಅಧಿಕ ಮಳೆಯಾಗಿದ್ದರೂ, ಮಳೆಯೊಂದಿಗೆ ಗಾಳಿಯೂ ಸೇರಿದ್ದರಿಂದ ಆಗಿರುವ ಹಾನಿಯ ಪ್ರಮಾಣ ಅತ್ಯಧಿಕವಾಗಿದೆ. ಪ್ರಸ್ತುತ ವರ್ಷದ ಎಪ್ರಿಲ್‌ನಿಂದ ಈವರೆಗೆ ಹಾನಿಯಾದ ಮೂಲಸೌಕರ್ಯಗಳ ಅಂದಾಜು ನಷ್ಟ 167.63 ಕೋಟಿ ರೂ.ಗಳೆಂದು ಲೆಕ್ಕ ಹಾಕಲಾಗಿದೆ.

ಜಿಲ್ಲಾಧಿಕಾರಿ ಕಚೇರಿ ನೀಡಿರುವ ಮಾಹಿತಿಯಂತೆ ಮುಂಗಾರು ಮಳೆಯಿಂದಾಗಿ ಜಿಲ್ಲೆಯಲ್ಲಿ 40 ಮನೆಗಳು ಸಂಪೂರ್ಣ ಹಾಗೂ 541 ಮನೆಗಳಿಗೆ ಭಾಗಶ: ಹಾನಿಯಾಗಿದೆ.

ಇದರೊಂದಿಗೆ 59 ದನದ ಕೊಟ್ಟಿಗೆಗಳಿಗೂ ಹಾನಿಯಾಗಿದೆ. 62.3 ಹೆಕ್ಟೇರ್ ತೋಟಗಾರಿಕಾ ಬೆಳೆಗಲಿಗೆ, 141.39 ಹೆಕ್ಟೇರ್ ಕೃಷಿ ಬೆಳೆಗೂ ಹಾನಿಯುಂಟಾಗಿದೆ. ಭತ್ತದ ಕೃಷಿ ಭೂಮಿ ಈಗಲೂ ಜಲಾವೃತವಾಗಿದ್ದು ಅವುಗಳಿಗಾದ ಹಾನಿಯನ್ನು ಇನ್ನಷ್ಟೇ ಅಂದಾಜಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.

Powered by Blogger.