".

Header Ads

ಹೋಂ ವರ್ಕ್ ಮಾಡುತ್ತಿದ್ದಾಗ ತಲೆಗೆ ಪೆನ್ ಚುಚ್ಚಿ ಯುಕೆಜಿ ಮಗು ಸಾವು!


 ಪುಟ್ಟ ಮಗುವಿನ ಪ್ರಾಣ ತೆಗೆದಿದೆ, ಪೆನ್ ರೂಪದಲ್ಲಿ ಬಂದ ಯಮ ಪುಟ್ಟ ಕಂದಮ್ಮನನ್ನು ಅಪ್ಪಿಕೊಂಡಿದೆ.

ಈ ಘಟನೆ ನಡೆದಿರೋದು ತೆಲಂಗಾಣದ ಭದ್ರಾಚಲಂ‌ ನಗರದಲ್ಲಿ. ಭದ್ರಾಚಲಂನ ಯುಕೆಜಿ ವಿದ್ಯಾರ್ಥಿನಿ ರಿಯಂಶಿಕಾ ಪೆನ್‌ಗೆ ಬಲಿಯಾದ ಕಂದಮ್ಮ.

 ಭದ್ರಾಚಲಂ ಖಾಸಗಿ ಸ್ಕೂಲ್‌ನಲ್ಲಿ ಯುಕೆಜಿಯಲ್ಲಿ ರಿಯಂಶಿಕಾ ವ್ಯಾಸಂಗ ಮಾಡುತ್ತಿದ್ದಳು. ಶಾಲೆಯಿಂದ ಬಂದು ಮನೆಯಲ್ಲಿ ಹೋಂ ವರ್ಕ್ ಬರೆಯುತ್ತಿದ್ದಳು.‌ ಮಂಚದ ಮೇಲೆ ಕೂತು ಹೋಂವರ್ಕ್ ಬರೆಯುತ್ತಿದ್ದ ರಿಯಂಶಿಕಾ ತುಂಟಾಟವಾಡುತ್ತ ಮಂಚದಿಂದ ಕೆಳಕ್ಕೆ‌ ಬಿದ್ದಿದ್ದಾಳೆ. ಈ ವೇಳೆ ಕೈಯಲ್ಲಿದ್ದ ಪೆನ್ ಆಕೆಯ ತಲೆಗೆ ಚುಚ್ಚಿದೆ.

ರಿಯಂಶಿಕಾ ಕೈಯಲ್ಲಿ ಹಿಡಿದ ಪೆನ್ ಸಮೇತ ಮಂಚದಿಂದ ರಭಸವಾಗಿ ಕೆಳಕ್ಕೆ ಬಿದ್ದ ಪರಿಣಾಮ, ಆಕೆಯ ಕೈಯಲ್ಲಿದ್ದ ಪೆನ್ ಬಲವಾಗಿ ಆಕೆಯ ಕಪಾಲದ ಭಾಗದಿಂದ ತೂರಿಕೊಂಡು ತಲೆಯೊಳಕ್ಕೆ ಪ್ರವೇಶಿಸಿದೆ ಎನ್ನಲಾಗಿದೆ.

Powered by Blogger.