ಮನೆಗೆ ಬರುತ್ತೆ ಕೂಪನ್, ಸ್ಕ್ಯಾನ್ ಮಾಡಿದರೆ ನಿಮ್ಮ ಖಾತೆ ಹಣ ಮಾಯ
ಇತ್ತೀಚಿಗೆ ಕರ್ನಾಟಕದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ವರೆಗೆ ಆಧಾರ್ ಕಾರ್ಡ್ ಬಳಸಿಕೊಂಡು ಸಾರ್ವಜನಿಕರ ಹಣ ಲಪಟಾಯಿಸುವುದು, ವಿಡಿಯೋ ಕರೆ ಮಾಡಿ ,ಜನರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುವುದು, ಕೆಲಸದ ಹೆಸರಲ್ಲಿ ವಂಚಿಸಲಾಗುತ್ತಿತ್ತು . ಆದರೆ, ಇದೀಗ ಸೈಬರ್ ವಂಚಕರು ರಿಜಿಸ್ಟರ್ ಪೋಸ್ಟ್ ಮೂಲಕ ಜನರನ್ನು ವಂಚಿಸಲು ಮುಂದಾಗಿದ್ದಾರೆ. ಭಾರತೀಯ ಅಂಚೆಯ ಕೆಂಪು ಬಣ್ಣದ ರಿಜಿಸ್ಟರ್ ಕವರ್ ನಿಮ್ಮ ಮನೆಗೆ ಬರುತ್ತೆ. ಈ ಕವರ್ ತೆರೆದರೆ ಒಳಗೆ ಭಾರತ ಸರ್ಕಾರದ ಲಾಂಛನ ಇರುವ ರಿಜಿಸ್ಟರ್ ಕೂಪನ್ ಇರುತ್ತದೆ. ಮತ್ತು ಅಪ್ಲಿಕೇಶನ್ ಫಾರ್ಮ್ ಇರುತ್ತದೆ.
ಕೂಪನ್ ಮೇಲೆ ಸ್ಕ್ರ್ಯಾಚ್ ಮಾಡಿ ವಾಹನ ಗೆಲ್ಲಿ ಎಂದು ಇಂಗ್ಲಿಷ್ ಅಕ್ಷರಗಳಲ್ಲಿ ಬರೆದಿರುತ್ತದೆ. ನಂತರ ಸ್ಕ್ರ್ಯಾಚ್ ಮಾಡಿದರೆ, ನೀವು 12 ಲಕ್ಷದ 80 ಸಾವಿರ ಹಣ ಗೆದ್ದಿದ್ದೀರಿ. ಮತ್ತು ಅದರ ಕೆಳಗೆ ಒಂದು ಎಸ್ ಎಂಎಸ್ ಕೋಡ್ ಕೂಡ ಇರುತ್ತದೆ.
ವಂಚಕರು ಅದೇ ಕಾರ್ಡಲ್ಲಿ ಸ್ಕ್ಯಾನರ್ ಅಳವಡಿಸಿದ್ದಾರೆ. ಅದನ್ನು ಸ್ಕ್ಯಾನ್ ಮಾಡಿದರೆ ಅಥವಾ ಹೆಲ್ಫ್ ಲೈನ್ ನಂಬರ್ಗೆ ಕರೆ ಮಾಡಿದರೂ ಕೂಡ ನಿಮ್ಮ ಖಾತೆಯಲ್ಲಿನ ಹಣ ವಂಚಕರ ಪಾಲಾಗುತ್ತದೆ. ಹೀಗೆ ಸೈಬರ್ ವಂಚಕರು ಹೊಸ ವಂಚನೆಯ ವಿಧಾನವನ್ನ ಕಂಡುಕೊಂಡಿದ್ದಾರೆ.
Post a Comment