ಮುಂಬೈ :- ದೇವರಲ್ಲಿ ಕ್ಷಮೆಯಾಚಿಸಿ ಬೆಳ್ಳಿ ಕಿರೀಟವನ್ನೇ ಎಗರಿಸಿದ ಕಳ್ಳ..!!
ದೇವಸ್ಥಾನಕ್ಕೆ ಹೋಗಿ ದೇವರಿಗೆ ನಮಸ್ಕರಿಸಿ ಬಳಿಕ ದೇವರ ಬೆಳ್ಳಿ ಕಿರೀಟವನ್ನೇ ಕದ್ದೊಯ್ದ ಘಟನೆ ಮುಂಬೈನ ಬೊರಿವಲಿಯಲ್ಲಿ ನಡೆದಿದೆ.
ದೇವಸ್ಥಾನಕ್ಕೆ ಪ್ರವೇಶಿಸಿದ ಕಳ್ಳ ಮೊದಲು ದೇವರಿಗೆ ಕೈ ಮುಗಿದು ಕ್ಷಮೆಯಾಚಿಸಿ ಬಳಿಕ ದೇವರ ತಲೆ ಮೇಲೆ ಇದ್ದ ಬೆಳ್ಳಿ ಕಿರೀಟವನ್ನು ಕಳ್ಳ ಎಗರಿಸಿದ್ದಾನೆ.
ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಳ್ಳನ ಈ ಕೃತ್ಯ ಬೆಳಕಿಗೆ ಬಂದಿದೆ.ಮುಂಬೈನ ಬೊರಿವಲಿಯಲ್ಲರುವ ವಿಠ್ಠಲ ದೇವಸ್ಥಾನಕ್ಕೆ ಕಳ್ಳ ಬುಧವಾರ ಸಂಜೆ ಸುಮಾರು 5.10 ಗಂಟೆ ವೇಳೆ ಭೇಟಿ ನೀಡಿದ್ದಾನೆ.
ಈತ ಮೊದಲಿಗೆ ದೇವರಿಗೆ ನಮಸ್ಕರಿಸಿ ಬಳಿಕೆ ದೇವರ ಬೆಳ್ಳಿ ಕಿರೀಟವನ್ನು ಕದ್ದಿದ್ದಾನೆ.ಈ ಕುರಿತು ದೇವಸ್ಥಾನದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು ಈ ಬಗ್ಗೆ ಪೊಲೀಸರು ಆತನ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Post a Comment