".

Header Ads

ಹರೀಶ್ ಪಾಂಡು ಶೆಟ್ಟಿ ಆಡಳಿತದ ಫಾರ್ಮ್‌ಹೌಸ್ ಸಮೂಹ ಹೋಟೇಲಿಗೆ ಇಕೋನೋಮಿಕ್ ಟೈಮ್ಸ್ ಮತ್ತು ಎಫ್ ಬಿ ಲೀಡರ್ಸ್ ಅವಾರ್ಡ್‌


ಮುಂಬಯಿ : ವಸಯಿ ತಾಲೂಕಿನಲ್ಲಿ ಹೋಟೆಲ್ ಉದ್ಯಮ ಮತ್ತು ಸಮಾಜ ಸೇವೆಯಲ್ಲಿ ಭಾರಿ ಜನಪ್ರಿಯತೆಯನ್ನು ಪಡೆದಿರುವ ಪಾಂಡು ಎಲ್. ಶೆಟ್ಟಿ ಯವರ ಸುಪುತ್ರರಾದ ಹರೀಶ್ ಪಾಂಡು ಶೆಟ್ಟಿ ಮತ್ತು ಭರತ್ ಶೆಟ್ಟಿ ಯವರ ಫಾರ್ಮ್‌ಹೌಸ್ ಸಮೂಹ ಹೋಟೇಲಿಗೆ  ಇಕೋನೋಮಿಕ್ ಟೈಮ್ಸ್ ಮತ್ತು ಎಫ್ ಬಿ ಲೀಡರ್ಸ್ ಅವಾರ್ಡ್‌ ಲಭಿಸಿದೆ. 

ಪ್ರಶಸ್ತಿಯನ್ನು ನಗರದ ರಾಡಿಸನ್ ಬ್ಲೂ ಇಂಟರ್ನ್ಯಾಶನಲ್ ಹೋಟೇಲಿನಲ್ಲಿ ಜರಗಿದ ಸಮಾರಂಭದಲ್ಲಿ ಪಾಂಡು ಎಲ್ ಶೆಟ್ಟಿ  ಮತ್ತು ಹೋಟೇಲಿನ ನಿರ್ದೇಶಕ  ಹರೀಶ್ ಶೆಟ್ಟಿ ಪಾಂಡು ಶೆಟ್ಟಿ ಮತ್ತು ಭರತ್ ಶೆಟ್ಟಿಯವರು  ಚಿತ್ರ ನಟಿ ಮುಗ್ಧ ಗೋಡ್ಸೆ ಯವರಿಂದ ಸ್ವೀಕರಿಸಿದರು.

2011 ರಲ್ಲಿ ಸ್ಥಾಪಿತವಾದ, ಫಾರ್ಮ್‌ಹೌಸ್ ಗ್ರೂಪ ಹೋಟೆಲ್ ಅಂಡ್ ರೆಸ್ಟೋರೆಂಟ್  ವಸಯಿ ಪರಿಸರದಲ್ಲಿ  ಉದ್ಯಮವನ್ನು ನಡೆಸಿ ಹಂತ ಹಂತವಾಗಿ ಅಲ್ಪಾವಧಿಯಲ್ಲಿ ತನ್ನ ಉದ್ಯಮವನ್ನು ದೇಶ ವಿದೇಶಗಳಲ್ಲಿ ನಡೆಸುತ್ತಾ ರುಚಿ ಸುಚಿಕರವಾದ ಆಹಾರದಿಂದ ಗ್ರಾಹಕರ ಗಮನ ಸೆಳೆದಿದೆ.  ರೆಸ್ಟೋರೆಂಟ್ ಬ್ರಾಂಡ್ 'ಫಾರ್ಮ್‌ಹೌಸ್' ಉನ್ನತ ಮಟ್ಟಕ್ಕೆರಿ ಮುನ್ನಡೆಯುತ್ತಾ ಗ್ರಾಹಕರನ್ನು ಆತ್ಮೀಯವಾಗಿ ಸ್ವಾಗತಿಸುತ್ತದೆ. ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು  ಅಥವಾ ಉತ್ತಮ ಭೋಜನವನ್ನು ಆನಂದಿಸಲು  ಫಾರ್ಮ್‌ಹೌಸ್ ಸರಿಯಾದ ಸ್ಥಳವಾಗಿದೆ.ವಸಯಿ. ಬೋರಿವಳಿ, ಮಲಾಡ್. ದುಬೈಯಲ್ಲಿ ಹೋಟೆಲ್ ವ್ಯವಹಾರವನ್ನು ನಡೆಸುತ್ತದೆ.
Powered by Blogger.