".

Header Ads

ಉಡುಪಿ: ಬಬ್ಬು ಸ್ವಾಮಿ ,ಕೊರಗಜ್ಜನ ಗುಡಿಯ ಬೀಗ ಮುರಿದು ಹುಂಡಿ ಹಣ ಕಳವು

 


ಕಾಪು ಸಮೀಪ ಕಟಪಾಡಿ ಏಣಗುಡ್ಡೆಗ್ರಾಮದ ಫಾರೆಸ್ಟ್ ಗೇಟ್ ಬಬ್ಬು ಸ್ವಾಮಿ ದೈವಸ್ಥಾನಕ್ಕೆ ನುಗ್ಗಿದ ಕಳ್ಳರು ಕಾಣಿಕೆ ಡಬ್ಬಿಯನ್ನು ಕದ್ದೊಯ್ಘಟನೆ ನಡೆದಿದೆ ಮುಂಜಾನೆಯ ನಡುವೆ ದೈವಸ್ಥಾನಕ್ಕೆ ನುಗ್ಗಿದ ಕಳ್ಳರು ದೈವಸ್ಥಾನದ ಗರ್ಭಗುಡಿಯ ಬಾಗಿಲಿನ ಬೀಗವನ್ನು ಮುರಿದಿದ್ದು ಕಾಣಿಕೆ ಡಬ್ಬಿಯನ್ನು ಒಡೆದು ಅದರಲ್ಲಿದ್ದ 4 ಸಾವಿರ ರೂಪಾಯಿ ಹಾಗೂ ಆವರಣದಲ್ಲಿರುವ ಚಾಮುಂಡಿ ಗುಡಿ ಹಾಗೂ ಕೊರಗಜ್ಜನ ಗುಡಿಯ ಬೀಗವನ್ನು ಮುರಿದು ಹುಂಡಿ ಯಲ್ಲಿದ್ದ 1 ಸಾವಿರ ರೂ.ಗಳನ್ನು ಕಳವುಗೈದಿದ್ದಾರೆ.
ರಾತ್ರಿ 11.20ರ ವೇಳೆ ಗೆ ಕಳವು ನಡೆದಿರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ದೈವಸ್ಥಾನದ ಸದಸ್ಯ ಸುಂದರ ನೀಡಿರುವ ಮಾಹಿತಿಯಂತೆ ಅಧ್ಯಕ್ಷ ಸದಾನಂದ ನೀಡಿ ರುವ ದೂರಿನಂತೆ ಕಾಪು ಠಾಣೆಯಲ್ಲಿಪ್ರಕರಣ ದಾಖಲಾಗಿದೆ. 

Powered by Blogger.