".

Header Ads

ಸ.ಹಿ.ಪ್ರಾಶಾಲೆ ಕೂಡಬೆಟ್ಟು ಮಾಳ:ನಾವು ಗಳಿಸಿದ್ದರಲ್ಲಿ ಒಂದಂಶ ಸಮಾಜಕ್ಕೆ ಕೊಟ್ಟರೆ ನಮ್ಮ ಬದುಕು ಸಾರ್ಥಕ:- ಶ್ರೀ ಮಧುಸೂದನ ಜೋಶಿ ಅಭಿಮತ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂಡಬೆಟ್ಟು ಮಾಳ


ನಮ್ಮ ಸಂಪಾದನೆಯಲ್ಲಿ ಒಂದಂಶವನ್ನು ನಾವು ನಮ್ಮ ಸಮಾಜಕ್ಕೆ ಕೊಟ್ಟರೆ ನಮ್ಮ ಬದುಕು ಸಾರ್ಥಕವಾಗುತ್ತದೆ.ಒಳ್ಳೆಯದು ಮಾಡಿದರೆ ಒಳ್ಳೆಯದೇ ಬರುತ್ತದೆ.,ಕೆಟ್ಟದ್ದು ಮಾಡಿದರೆ ಕೆಟ್ಟದ್ದೇ ಬರುತ್ತದೆ.ಹಾಗಾಗಿ ಒಳ್ಳೆಯದನ್ನೇ ಮಾಡೋಣ ಎಂದು ಕಂದಾಯ ಇಲಾಖೆಯ ನಿವೃತ್ತ ನೌಕರ ಶ್ರೀ ಮಧುಸೂದನ ಜೋಶಿ ಅಭಿಮತ ವ್ಯಕ್ತಪಡಿಸಿದರು.

ಪಿಎಂಶ್ರೀ ಶಾಲೆಯಾಗಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂಡಬೆಟ್ಟು ಮಾಳ ಇಲ್ಲಿಗೆ ಅವರ ಸುಪುತ್ರರಾಗಿರುವ ಶ್ರೀ ಧೀರಜ್ ಜೋಶಿ ಮತ್ತು ಶ್ರೀ ಸೂರಜ್ ಜೋಶಿ ಅವರು ನೀಡಲ್ಪಟ್ಟ ಉಚಿತ ಸಮವಸ್ತ್ರ ಹಸ್ತಾಂತರ ಮಾಡಿ ಶುಭ ಕೋರಿದರು.

 ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಶ್ರೀ.ಕೆ.ಶಶಿಧರ್ ಭಟ್,ಉಪಾಧ್ಯಕ್ಷೆ ಶ್ರೀಮತಿ ವಿಜಯಾ ಬಾಲಕೃಷ್ಣ ಹೆಗ್ಡೆ,ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪ್ರಭಾವತಿ,ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಕೃಷ್ಣ ಮೊಯ್ಲಿ,ಶ್ರೀಮತಿ ರೇವತಿ ಮಧುಸೂದನ ಜೋಶಿ,ಶಾಲೆಯ ಶಿಕ್ಷಕರು ವೇದಿಕೆಯಲ್ಲಿ ಆಸೀನರಾಗಿದ್ದರು.

ಶಾಲೆಯ ಹಿರಿಯ ಶಿಕ್ಷಕ ಶ್ರೀ ರಾಧಾಕೃಷ್ಣ ಜೋಶಿ ನಿರೂಪಿಸಿ ವಂದಿಸಿದರು,ಶ್ರೀಮತಿ ಪ್ರಭಾವತಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ದಾನಿಗಳನ್ನು ಸಾಂಕೇತಿಕವಾಗಿ ಗೌರವಿಸಲಾಯಿತು.

ಶಾಲೆಯ ಶಿಕ್ಷಕ ವೃಂದ,ಪಾಲಕರು,ಮಕ್ಕಳು ಹಾಜರಿದ್ದರು.

Powered by Blogger.