ಉಡುಪಿ ನಗರದಲ್ಲಿ ಹುಚ್ಚು ನಾಯಿ ಕಾಟ, ಹಲವಾರು ಮಂದಿಗೆ ಕಚ್ಚಿ ಗಾಯ..!
ಹುಚ್ಚು ನಾಯಿಯೊಂದು ಎಂಟು ಮಂದಿಗೆ ಕಚ್ಚಿ ಗಾಯಗೊಳಿಸಿರುವ ಘಟನೆ ಉಡುಪಿ ನಗರ ಮಾರುತಿ ವಿಥಿಕಾದಲ್ಲಿ ನಡೆದಿದೆ. ತೀರಾ ಬಸವಳಿದ ಸ್ಥಿತಿಯಲ್ಲಿದ್ದ ಈ ನಾಯಿಯು ರಸ್ತೆಯಲ್ಲಿ ಹೋಗುವಾಗ ಎದುರಿಗೆ ಸಿಕ್ಕಿದವರೆಲ್ಲರಿಗೂ ಕಚ್ಚಿಕೊಂಡು ಹೋಗಿದೆ.
ಕೆಲವರ ಕಾಲಿನ ಮಾಂಸ ಕೂಡ ಕಚ್ಚಿ ತಿಂದಿದೆ ಎನ್ನಲಾಗಿದೆ. ಗಾಯಗೊಂಡ ಎಲ್ಲರು ಉಡುಪಿ ಜಿಲ್ಲಾಸ್ಪತ್ರೆಗೆ ತೆರಳಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸ್ಥಳೀಯವಲ್ಲದ ಎಲ್ಲಿಂದಲೋ ಬಂದ ಈ ನಾಯಿಗೆ ಹುಚ್ಚು ಹಿಡಿದಿ ರುವುದನ್ನು ಸ್ಥಳೀಯರು ಗಮನಿಸಿದ್ದಾರೆ.ಹಲವು ಮಂದಿಗೆ ಕಚ್ಚಿ ಕಚ್ಚಿ ತೀರಾ ಸುಸ್ತಾದ ಈ ನಾಯಿಯು ಉಡುಪಿಯ ನಾರ್ತ್ ಶಾಲೆಯ ಆವರಣದಲ್ಲಿ ಬಂದು ಬಿದ್ದಿರುವುದನ್ನು ಸಾರ್ವಜನಿಕರು ಗುರುತಿಸಿದರು. ಈ ಕುರಿತು ಕೂಡಲೇ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದರು. ನಿತ್ಯಾನಂದ ಒಳಕಾಡು ತಕ್ಷಣ ನಗರಸಭೆ ಪೌರಾಯುಕ್ತ ರಾಯಪ್ಪ ಹಾಗೂ ಪ್ರಾಣಿ ದಯಾ ಸಂಘದವರಿಗೆ ಈ ವಿಚಾರವನ್ನು ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತರು ಹಾಗೂ ಪ್ರಾಣಿದಯಾ ಸಂಘದ ಮಂಜುಳಾ ಹಾಗೂ ಪೃಥ್ವಿ ಪರಿಶೀಲನೆ ನಡೆಸಿದರು. ಪಶು ವೈದ್ಯರನ್ನು ಕರೆಸಿ ನಾಯಿಗೆ ಚಚ್ಚುಮದ್ದು ನೀಡಲಾಯಿತು.
Post a Comment