".

Header Ads

ತುಳು-ಕನ್ನಡಿಗರ ಒಡೆತನದ ಟೆಂಡರ್ ಫ್ರೆಶ್ ಐಸ್ಕ್ರೀಂಮ್ ಗೆ ಟೈಮ್ಸ್ ಆಫ್ ಇಂಡಿಯಾ ಪ್ರಶಸ್ತಿ.

ಮುಂಬಯಿ ಉಪನಗರದ ಸಾಂತಾಕ್ರೂಜ್ ನ ಕಲೀನಾದಲ್ಲಿರುವ ತುಳು-ಕನ್ನಡಿಗರ ಒಡೆತನದ ಟೆಂಡರ್ ಫ್ರೆಶ್ ಐಸ್ಕ್ರೀಮ್ ಗೆ ಟೈಮ್ಸ್ ಆಫ್ ಇಂಡಿಯಾದ ET ಪ್ರಶಸ್ತಿ ಲಭಿಸಿದೆ.

ಅತ್ಯುತ್ತಮ ಉತ್ಪನ್ನ ವಿಭಾಗದಲ್ಲಿ ಪಡೆದ ಈ ಗೌರವವನ್ನು ಟೆಂಡರ್ ಫ್ರೆಷ್ ಆಡಳಿತ ನಿರ್ದೇಶಕ  ವಿ. ಕೆ. ಶೆಟ್ಟಿ ಹಾಗೂ ನಿರ್ದೇಶಕರಾದ ಜಗದೀಶ್ ಎಸ್. ಕಾಮತ್, ಉಷಾ ವಿ. ಶೆಟ್ಟಿ ಯವರು ಖ್ಯಾತ ಚಿತ್ರ ನಟಿ ಮುಗ್ಧ ಗೋಡ್ಸೆ ಯವರಿಂದ ಸ್ವೀಕರಿಸಿದರು.

ಜುಲೈ 1ರಂದು ಅಂಧೇರಿ ಪೂರ್ವದ ಪಂಚತಾರ ಹೋಟೆಲ್ ರೆಡಿಸಾನ್ ಬ್ಲೂನಲ್ಲಿ ಜರಗಿತು. ಸುಮಾರು 16 ವರ್ಷಗಳ ಹಿಂದೆ ಸ್ಥಾಪನೆಗೊಂಡ ಟೆಂಡರ್ ಫ್ರೆಷ್ ಇದರ 20 ವಿಕ್ರಯ ಘಟಕಗಳು ಮುಂಬೈ ಉಪನಗರ, ಗುಜರಾತ್ ರಾಜ್ಯ, ಮಧ್ಯಪ್ರದೇಶದಲ್ಲಿ ವ್ಯವಹರಿಸುತ್ತಿವೆ.
Powered by Blogger.