".

Header Ads

ಮಂಗಳೂರು:- Facebook ​ನಲ್ಲಿ 1.5 ಕೋಟಿ ರೂ. ಕಳೆದುಕೊಂಡ ವ್ಯಕ್ತಿ ಕಂಗಾಲು!

 


ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ರೀತಿ ಹಣ ಕಳೆದುಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.  ಇದೀಗ ಮಂಗಳೂರಿನ ವ್ಯಕ್ತಿಯೊಬ್ಬರು ಈ ಮೋಸಕ್ಕೆ ತುತ್ತಾಗಿದ್ದು, ಬರೋಬ್ಬರಿ 1.5 ಕೋಟಿ ರೂ. ಕಳೆದುಕೊಂಡಿದ್ದಾರೆ.

ಫೇಸ್‌ಬುಕ್‌ನಲ್ಲಿ 'ಜೆಫರೀಸ್ ವೆಲ್ತ್ ಮಲ್ಟಿಪ್ಲಿಕೇಶನ್ ಪ್ಲಾನ್' ಎಂಬ ಜಾಹೀರಾತನ್ನು ಕ್ಲಿಕ್ ಮಾಡಿದ ವ್ಯಕ್ತಿ 1.5 ಕೋಟಿ ರೂ. ಹಣವನ್ನು ನಿಮಿಷಗಳಲ್ಲಿ ಕಳೆದುಕೊಂಡಿದ್ದಾರೆ.

ಫೇಸ್​ಬುಕ್​ನಲ್ಲಿ ಈ ಜಾಹೀರಾತು ಪೋಸ್ಟ್​ ನೋಡಿದ ಅವರು, ಹೂಡಿಕೆ ಮಾಡುವುದರಿಂದ ದೊಡ್ಡ ಆದಾಯ ಸಿಗಲಿದೆ ಎಂಬ ಭರವಸೆಯಿಂದ ಲಿಂಕ್ ಕ್ಲಿಕ್ ಮಾಡಿ ಇದೀಗ ವಂಚನೆಗೆ ಬಲಿಯಾಗಿದ್ದಾರೆ. ಪೋಸ್ಟರ್​ನಲ್ಲಿ ನೀಡಲಾಗಿದ್ದ ಹಂತಗಳನ್ನು ಅನುಸರಿಸಿದ ವ್ಯಕ್ತಿ, ಕೇಳಲಾದ ಪ್ರಶ್ನೆಗಳಿಗೆಲ್ಲಾ ಉತ್ತರ ನೀಡಿದ್ದಾರೆ.

ಇದಾದ ಬಳಿಕ ವ್ಯಕ್ತಿಯ ದೂರವಾಣಿ ಸಂಖ್ಯೆ ಪಡೆದ ವಂಚಕರು, 'ಜೆಫರೀಸ್ ವೆಲ್ತ್ ಮಲ್ಟಿಪ್ಲಿಕೇಶನ್ ಪ್ಲಾನ್' ಎಂಬ ಸೋಷಿಯಲ್ ಮೀಡಿಯಾ ಗ್ರೂಪ್​ಗೆ ಸೇರಿಸಿದ್ದಾರೆ. ಗ್ರೂಪ್​ನಲ್ಲಿ ಅದ್ಭುತ ರಿಟರ್ನ್ಸ್​ ಪಡೆದಿರುವ ಸ್ಕ್ರೀನ್​ಶಾಟ್​ಗಳನ್ನು ಹಂಚಿಕೊಳ್ಳುವ ಮೂಲಕ ವ್ಯಕ್ತಿಯ ಗಮನಸೆಳೆದಿದ್ದಾರೆ. ಇದನ್ನೆಲ್ಲಾ ನೋಡಿದ ಬಳಿಕ ತನಗೂ ಹಣ ಹೂಡಿಕೆ ಮಾಡುವ ಆಸೆಯಿದೆ ಎಂದು ಆತ ಹೇಳಿದ ಬೆನ್ನಲ್ಲೇ ಟ್ರೇಡಿಂಗ್ ಅಕೌಂಟ್ ಓಪನ್ ಮಾಡುವಂತೆ ಒಂದು ಲಿಂಕ್ ಕಳುಹಿಸಿದ್ದಾರೆ.

ಸಂತ್ರಸ್ತ ಯುವಕ ತನ್ನ ಬ್ಯಾಂಕ್ ಖಾತೆಗಳಿಂದ ಎರಡು ಪ್ರತ್ಯೇಕ ವಹಿವಾಟಿನಲ್ಲಿ 73 ಲಕ್ಷ ಮತ್ತು 77 ಲಕ್ಷ ರೂ.ಗಳನ್ನು ಆನ್​ಲೈನ್​ನಲ್ಲಿ ಪೇಮೆಂಟ್ ಮಾಡಿದ್ದಾರೆ. ಒಟ್ಟು 1.5 ಕೋಟಿ ರೂ. ಹಣವನ್ನು ವರ್ಗಾಯಿಸಿದ್ದಾರೆ. ಕೆಲವು ದಿನಗಳ ಬಳಿಕ ತನಗೆ ಇಷ್ಟು ಮೊತ್ತ ಪಾವತಿ ಮಾಡಿ ಎಂದಿದ್ದವರಿಂದ ಯಾವುದೇ ಕರೆ, ಸಂದೇಶವಿಲ್ಲ ಎಂದಾಗ ತಾನು ಮೋಸ ಹೋಗಿದ್ದೇನೆ ಎಂಬುದು ಸ್ಪಷ್ಟವಾಗಿದೆ. ತಕ್ಷಣವೇ ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (ಎನ್‌ಸಿಆರ್‌ಪಿ) ಮೂಲಕ ದೂರು ದಾಖಲಿಸಿದ್ದಾರೆ. ಈ ಕೇಸ್​ಗೆ ಸಂಬಂಧಿಸಿದಂತೆ ಮಂಗಳೂರು ಸೈಬರ್ ಎಕನಾಮಿಕ್ ಅಂಡ್ ನಾರ್ಕೋಟಿಕ್ಸ್ (ಸಿಇಎನ್) ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Powered by Blogger.