".

Header Ads

LPG ಸಿಲಿಂಡರ್‌ಗೂ ಶೀಘ್ರ ಕ್ಯುಆರ್‌ ಕೋಡ್‌!

 


ಅಡುಗೆ ಅನಿಲ ಸಿಲಿಂಡರ್‌ಗಳ ಕಳವು ತಡೆಯಲು, ಅವುಗಳ ದಾಸ್ತಾನು ನಿರ್ವಹಣೆಗೆ ಅನುಕೂಲ ವಾಗುವಂತೆ ಕ್ಯುಆರ್‌ ಕೋಡ್‌ಗಳನ್ನು ಅಭಿವೃದ್ದಿ ಪಡಿಸಲು ಕೇಂದ್ರ ಸರಕಾರ‌ ನಿರ್ಧರಿಸಿದೆ.

ಶೀಘ್ರವೇ ಕ್ಯುಆರ್‌ ಕೋಡ್‌ ಹೊಂದಿರುವ ಎಲ್‌ಪಿಜಿ ಸಿಲಿಂಡರ್‌ಗಳು ಲಭ್ಯವಾಗಲಿವೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ತಿಳಿಸಿದ್ದಾರೆ.

ಪೆಟ್ರೋಲಿ ಯಂ ಹಾಗೂ ಸ್ಫೋಟಕ ಸುರಕ್ಷತ ಸಂಸ್ಥೆ (ಪಿಇಎಸ್‌ಒ)ಯ ಎಲ್ಲ ಪಾಲುದಾರರೊಂದಿಗೆ ನಡೆಸಿದ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾವಿಸ ಲಾಗಿದೆ. ಸಿಲಿಂಡರ್‌ಗಳ ಟ್ರ್ಯಾಕಿಂಗ್‌, ಟ್ರೇಸಿಂಗ್‌ ಹಾಗೂ ನಿರ್ವಹಣೆಗೆ ಈ ಕ್ರಮ ಸಹಾಯಕಾರಿಯಾಗಿರಲಿದೆ ಎಂದು ಹೇಳಿದ್ದಾರೆ.

ಜನವಸತಿ ಬಳಿ ಪೆಟ್ರೋಲ್‌ ಪಂಪ್‌- ನಿಯಮ ರೂಪಿಸಲು ಸೂಚನೆ: ಜನವಸತಿಯ 35ರಿಂದ 50 ಮೀಟರ್‌ಗಳ ಅಂತರದಲ್ಲಿ ಪೆಟ್ರೋಲ್‌ ಪಂಪ್‌ಗಳನ್ನು ತೆರೆಯಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸುರಕ್ಷತ ಕ್ರಮಗಳ ಮಾದರಿಯನ್ನು ರೂಪಿಸುವಂತೆ ಸಚಿವ ಪಿಯೂಷ್‌ ಗೋಯಲ್‌ , ಪೆಟ್ರೋಲ್‌ ಮತ್ತು ಸ್ಫೋಟಕ ಸುರಕ್ಷತ ಸಂಸ್ಥೆಗೆ ಸೂಚಿಸಿದ್ದಾರೆ

Powered by Blogger.