".

Header Ads

ಪಬ್ಲಿಸಿಟಿಗಾಗಿ ,ರೀಲ್ಸ್ ಹುಚ್ಚು 7 ಯುವಕರು ಸಾವು

ಈ ಸೋಶಿಯಲ್ ಮೀಡಿಯಾ, ಪಬ್ಲಿಸಿಟಿ ಹುಚ್ಚು,  ಪ್ರತಿನಿತ್ಯ ರೀಲ್ಸ್ ಮಾಡೋದೇನೂ, ಅದಕ್ಕಾಗಿ ಸರ್ಕಸ್ ಮಾಡೋದೇನೂ ಅಬ್ಬಬ್ಬಾ! ಈ ಬಗ್ಗೆ ಏನು ಹೇಳೋದು. ಅಲ್ಲದೇ, ಈ ಹುಚ್ಚಾಟಕ್ಕೆ ಇತ್ತೀಚಿಗೆ ಜೀವಗಳೇ ಬಲಿಯಾಗುತ್ತಿವೆ. ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಂಡು ಜೀವ ಕಳೆದುಕೊಂಡವರಿದ್ದಾರೆ. ಇದೀಗ ರಾಜಸ್ಥಾನದಲ್ಲಿ ಅಂಥಹುದೇ ಘಟನೆ ನಡೆದಿದ್ದು, ಇಲ್ಲಿ ಒಂದೇ ಹಳ್ಳಿಯ 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಈ ದುರ್ಘಟನೆ ಸಂಭವಿಸಿರೋದು ಭರತ್ ಪುರ ಜಿಲ್ಲೆಯಲ್ಲಿ.  ತುಂಬಿ ಹರಿಯುತ್ತಿದ್ದ ನದಿಯಲ್ಲಿ ಈಜಾಡಿ, ರೀಲ್ಸ್ ಮಾಡಲು ಹೋದ ಒಂದೇ  ಹಳ್ಳಿಯ 7 ಯುವಕರು ಇಹಲೋಕ ತ್ಯಜಿಸಿದ್ದಾರೆ.

ಶ್ರೀನಗರ ಎಂಬ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಉಕ್ಕಿ ಹರಿಯುತ್ತಿರೋ ಬಣಗಂಗಾ ನದಿಯಲ್ಲಿ ಯುವಕರು ರೀಲ್ಸ್ ಸಾಹಸ ಮಾಡಿದ್ದು, ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅವರೊಂದಿಗೆ ತೆರಳಿದ್ದ ಒಬ್ಬ ಯುವಕ ಬದುಕುಳಿದಿದ್ದಾನೆ.

Powered by Blogger.