".

Header Ads

ಈ ಬಾರಿ ಎಷ್ಟನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ? 78 ಅಥವಾ 79 ಎಂಬ ಗೊಂದಲ ಬೇಡ, ಸರಿಯಾದ ಇಸವಿ ಇಲ್ಲಿ ತಿಳಿದುಕೊಳ್ಳಿ


1947ರ ಆಗಸ್ಟ್ 15 ಭಾರತೀಯರ ಐತಿಹಾಸಿಕ ದಿನವಾಗಿದ್ದು, ಬ್ರಿಟೀಷರ ಕಪಿ ಮುಷ್ಠಿಯಿಂದ ನಮಗೆ ಸ್ವಾತಂತ್ರ್ಯ ದೊರೆತ ದಿನ. ಭಾರತದ ಸ್ವಾತಂತ್ರ್ಯಕ್ಕಾಗಿ ಅಸಂಖ್ಯಾತ ಹೋರಾಟಗಾರರು ಬಲಿದಾನಗೈದಿದ್ದಾರೆ. ಅವರ ನೆತ್ತರ ಹನಿಗಳಿಂದಾಗಿ ನಾವಿಂದು ನೆಮ್ಮದಿಯಾಗಿ ಉಸಿರಾಡುವಂತಾಗಿದೆ.

ಪ್ರತಿ ವರ್ಷ ಆಗಸ್ಟ್ 15ರಂದು ದೇಶದ ನಾಗರಿಕರು ಸ್ವಾತಂತ್ರ್ಯಕ್ಕೆ ಹೋರಾಡಿದ ವೀರರನ್ನು ನೆನಪಿಸಿಕೊಳ್ಳುತ್ತೇವೆ. 200 ವರ್ಷಗಳ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತವಾದ ಭಾರತ ಪ್ರಜಾಸತ್ತಾತ್ಮಕ ಸಾರ್ವಭೌಮ ರಾಷ್ಟ್ರವಾಯಿತು.

ಆಗಸ್ಟ್ 15ರಂದು ದೊರಕಿದ ಸ್ವಾತಂತ್ರ್ಯ ದಿನವನ್ನು ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ. ಈ ದಿನದಂದು ನಮಗಾಗಿ ಹೋರಾಡಿದ ವೀರರ ನೆನಪು ಮಾಡಿಕೊಳ್ಳುವುದು ಕೂಡ ನಮ್ಮ ಕರ್ತವ್ಯ. ಈ ದಿನದಂದು, ತ್ರಿವರ್ಣ ಧ್ವಜವನ್ನು ದೇಶದಾದ್ಯಂತ, ಮನೆಗಳು ಮತ್ತು ವಾಣಿಜ್ಯ ಸ್ಥಳಗಳಲ್ಲಿ ಹಾರಿಸಲಾಗುತ್ತದೆ. ರಾಷ್ಟ್ರಗೀತೆಯನ್ನು ಮೊಳಗಿಸಲಾಗುತ್ತದೆ.

ಭಾರತ ಸ್ವಾತಂತ್ರ್ಯೋತ್ಸವದ ಪ್ರಧಾನ ಸಮಾರಂಭವು ದೆಹಲಿಯ ಕೆಂಪು ಕೋಟೆಯಲ್ಲಿ ನೆರವೇರುತ್ತದೆ. ಪ್ರಧಾನಿ ಧ್ವಜಾರೋಹಣ ನೆರವೇರಿಸಿ, ದೇಶದ ನಾಗರಿಕರನ್ನುದ್ದೇಶಿಸಿ ಭಾಷಣ ಮಾಡುತ್ತಾರೆ. ದೇಶದ ಪ್ರಗತಿ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡುತ್ತಾರೆ. ಅಲ್ಲದೆ, ದೇಶಾದ್ಯಂತ ಜನರು ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ತೇಲುತ್ತಾರೆ.

ವಸಾಹತುಶಾಹಿ ಆಳ್ವಿಕೆಯಿಂದ ಮುಕ್ತವಾದ ಭಾರತ ಸ್ವತಂತ್ರ ರಾಷ್ಟ್ರವಾಗಿ ಪ್ರಯಾಣಿಸುತ್ತಿದ್ದು, 75 ವರ್ಷಗಳನ್ನು ಕಳೆದಿವೆ. ಆದರೆ, ಇದು ಸಾಕಷ್ಟು ಜನರಿಗೆ ಗೊಂದಲಗಳಿವೆ. ಭಾರತವು ಈ ಬಾರಿ ಅಂದರೆ 2024ರಂದು 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆಯೇ ಅಥವಾ 78ನೇ ಯದ್ದೋ ಎಂಬುದು ಹಲವರಿಗಿರುವ ಪ್ರಶ್ನೆ. ಈ ಗೊಂದಲ ಅಥವಾ ಪ್ರಶ್ನೆಗೆ ಇಲ್ಲಿದೆ ಉತ್ತರ:

ಈ ವರ್ಷ ಆಚರಿಸುವುದು 77ನೇ ಸ್ವಾತಂತ್ರ್ಯವೋ, 78ನೇ ಯದ್ದೋ?

2024ರ ಈ ವರ್ಷವನ್ನು ಭಾರತೀಯ ಸ್ವಾತಂತ್ರ್ಯದ 77ನೇ ವಾರ್ಷಿಕೋತ್ಸವವೆಂದು ಪರಿಗಣಿಸಬಹುದು. ಏಕೆಂದರೆ ಸ್ವಾತಂತ್ರ್ಯೋತ್ಸವದ ಮೊದಲ ವಾರ್ಷಿಕೋತ್ಸವವನ್ನು ನಿಜವಾದ ದಿನಾಂಕದಿಂದ ಒಂದು ವರ್ಷ, ಅಂದರೆ 1948 ರಿಂದ ಗುರುತಿಸಲಾಗಿದೆ. ಆದ್ದರಿಂದ, ಭಾರತವು 2024ರಲ್ಲಿ ತನ್ನ 78ನೇ ಸ್ವಾತಂತ್ರ್ಯ ದಿನ ಮತ್ತು 77ನೇ ಸ್ವಾತಂತ್ರ್ಯ ದಿನದ ವಾರ್ಷಿಕೋತ್ಸವವನ್ನು ಆಚರಿಸುತ್ತದೆ.

Powered by Blogger.