".

Header Ads

ಮೂಡುಬಿದಿರೆ : ತರಗತಿಗೆ ನುಗ್ಗಿ ವಿದ್ಯಾರ್ಥಿನಿಗೆ ಕತ್ತರಿಯಿಂದ ಚುಚ್ಚಿದ ಯುವಕ

ಯುವಕನೋರ್ವ  ತರಗತಿಗೆ ನುಗ್ಗಿ ವಿದ್ಯಾರ್ಥಿನಿಗೆ ಕತ್ತರಿಯಿಂದ ಇರಿದು ಹ*ಲ್ಲೆಗೈದಿರುವ  ಘಟನೆ ಮೂಡುಬಿದಿರೆಯ ಖಾಸಗಿ ಕಾಲೇಜಿನಲ್ಲಿ ಸೋಮವಾರ(ಆ.13) ನಡೆದಿದೆ. ಆರೋಪಿ ಮಂಜುನಾಥ್ ನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಮೂಲದವರಾದ ಮಂಜುನಾಥ್ ಹಾಗೂ ವಿದ್ಯಾರ್ಥಿನಿ ಪಿಯುಸಿ ವರೆಗೆ ಜೊತೆಯಾಗಿ ವಿದ್ಯಾಭ್ಯಾಸ ನಡೆಸಿದ್ದರು ಎನ್ನಲಾಗಿದೆ. ಈ ನಡುವೆ ಯುವಕ ಕಾಲೇಜು ತೊರೆದಿದ್ದು, ಹುಡುಗಿ ಶಿಕ್ಷಣ ಮುಂದುವರಿಸಿದ್ದಳು. ಪಿಯುಸಿವರೆಗೆ ಜೊತೆಯಾಗಿದ್ದ ಇವರ ನಡುವೆ ಪ್ರೇಮವಿತ್ತು ಎನ್ನಲಾಗಿದೆ. ಈ ವಿಚಾರವಾಗಿ ಗೊತ್ತಾಗಿ ಹುಡುಗಿ ಮನೆಯವರು ಆಕೆಯ ಬಳಿಯಿದ್ದ ಮೊಬೈಲ್ ವಾಪಸ್ ಪಡೆದಿದ್ದರು. ಅಲ್ಲದೆ ಆತನಿಂದ ದೂರವಿದ್ದು, ಕಲಿಕೆಯತ್ತ ಗಮನ ಕೊಡು ಎಂದು ಎಚ್ಚರಿಸಿದ್ದರು. ಇದರಿಂದ ವಿದ್ಯಾರ್ಥಿನಿ ಮೊಬೈಲ್‌ನಿಂದ ದೂರವಿದ್ದು, ಆತನನ್ನು ನಿರ್ಲಕ್ಷ್ಯಿಸ ತೊಡಗಿದ್ದಳು.

ಆದರೆ ಇದರಿಂದ ಕುಪಿತನಾದ ಆರೋಪಿ ಎರಡು ದಿನಗಳ ಹಿಂದಷ್ಟೇ ಮೂಡುಬಿದಿರೆಗೆ‌ ಆಗಮಿಸಿ ಲಾಡ್ಜ್ ನಲ್ಲಿ ತಂಗಿದ್ದು, ಆಕೆಯ ಭೇಟಿಗೆ ಮುಂದಾಗಿದ್ದಾನೆ. ಅದು ಸಾಧ್ಯವಾಗದೇ ಹೋದಾಗ ಸೋಮವಾರ ಬೆಳಗ್ಗೆ ಕಾಲೇಜಿಗೆ ತೆರಳಿ ಹುಡುಗಿ ಇದ್ದ ತರಗತಿಗೆ ಏಕಾಏಕಿ ನುಗ್ಗಿ ತಾನು ಹಿಡಿದುಕೊಂಡು ಬಂದಿದ್ದ ಕತ್ತರಿಯಿಂದ ಇರಿದಿದ್ದಾನೆ.ಕೂಡಲೇ ಅಲ್ಲಿದ್ದ ಇತರೆ ವಿದ್ಯಾರ್ಥಿಗಳು ಆತನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಆರೋಪಿ ವಿರುದ್ಧ ಮೂಡುಬಿದಿರೆ ಠಾಣೆಯಲ್ಲಿ ಕೊ*ಲೆ ಯತ್ನ ಪ್ರಕರಣ ದಾಖಲಾಗಿದೆ. ಗಂಭೀ*ರ ಗಾಯಗೊಂಡ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ವಿದ್ಯಾರ್ಥಿನಿಗೆ ಕಾಲೇಜಿನಿಂದ ಟಿಸಿ ಕೊಡಲಾಗಿದೆ ಎಂದು ತಿಳಿದುಬಂದಿದೆ.

Powered by Blogger.