".

Header Ads

ಉಡುಪಿ:ಹೊಟೇಲ್ ನೌಕರ ಮೃತ್ಯು- ಸಾವಿನಲ್ಲಿ ಸಂಶಯ

 

ಮಣಿಪಾಲದಲ್ಲಿ ಹೊಟೇಲ್ ನೌಕರರೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ರಾತ್ರಿ ವೇಳೆ ನಡೆದಿದೆ.

ಮೃತನನ್ನು ಮಣಿಪಾಲದ ಯುವರ್ ಚಾಯ್ಸ್ ಎಂಬ ಹೋಟೆಲಿನಲ್ಲಿ ಕೆಲಸ ಮಾಡಿಕೊಂಡಿದ್ದ ಉಳ್ತೂರು ಗ್ರಾಮದ ನಿವಾಸಿ ಉದಯ (43) ಎಂದು ಗುರುತಿಸಲಾಗಿದೆ. ಹೋಟೆಲ್ ನಲ್ಲಿ ಅಸೌಖ್ಯದಿಂದ ಬಿದ್ದು ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರು, ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆದರೆ ಇವರ ಮರಣದಲ್ಲಿ ಸಂಶಯ ಇದೆ ಎಂದು ಮೃತರ ಸಹೋದರ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Powered by Blogger.