".

Header Ads

ಹಿಂದೂ ವಿದ್ಯಾರ್ಥಿನಿಯನ್ನು ಮತಾಂತರಗೊಳಿಸಿ ವಿವಾಹ

 


ನಗರದಲ್ಲಿ ಸಂಚಲನ ಮೂಡಿಸಿದ್ದ ಲವ್ ಜಿಹಾದ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.  ಕೇರಳದ ನಟೋರಿಯಸ್ ಕ್ರಿಮಿನಲ್ ಇದೀಗ ಹಿಂದೂ ವಿದ್ಯಾರ್ಥಿನಿಯನ್ನು ಮತಾಂತರಗೊಳಿಸಿ ವಿವಾಹವಾಗಿದ್ದಾನೆ ಎಂದು ವಿಚಾರ ಬೆಳಕಿಗೆ ಬಂದಿದೆ.

ಕೇರಳದ ಕಾಸರಗೋಡಿನ ವಿದ್ಯಾನಗರ ನಿವಾಸಿ ವಿಸ್ಮಯಾಳನ್ನು ಅಶ್ಪಕ್ ಎಂಬ ನಟೋರಿಯಸ್ ಕ್ರಿಮಿನಲ್ ಪ್ರೀತಿಯ ಬಲೆಗೆ ಬೀಳಿಸಿದ್ದ. ಕೇವಲ ಎರಡೇ ತಿಂಗಳಲ್ಲಿ ಆತ ಪ್ರೀತಿಯ ಖೆಡ್ಡಾಕ್ಕೆ ಬೀಳಿಸಿದ್ದ ಎಂದು ಆರೋಪಿಸಲಾಗಿದೆ.

ಮಂಗಳೂರಿನ ಉಳ್ಳಾಲದ ಅತ್ತೆ ಮನೆಯಲ್ಲಿದ್ದುಕೊಂಡು ಬಿಸಿಎ ಶಿಕ್ಷಣ ಪಡೆಯುತ್ತಿದ್ದ ವಿಸ್ಮಯಾಳನ್ನು ಜೂ.6ರಂದು ಅಲ್ಲಿಂದಲೇ ಕರೆದುಕೊಂಡು ಹೋಗಿದ್ದ ಅಶ್ಪಕ್. ಬಳಿಕ ವಿದ್ಯಾನಗರ ಠಾಣೆ ಪೊಲೀಸರು ಆಕೆಯನ್ನು ಪತ್ತೆಹಚ್ಚಿ ಮಂಗಳೂರಿನ ಕೌನ್ಸಿಲಿಂಗ್ ಕೇಂದ್ರದಲ್ಲಿರಿಸಿದ್ದರು. ಆದರೆ ಅಷ್ಪಕ್ ನೊಂದಿಗೆ ತೆರಳುವುದಾಗಿ ಹೇಳಿದ್ದಳು.  ವಿಸ್ಮಯಳನ್ನು ಮತಾಂತರ ನಡೆಸಿರುವುದಾಗಿ ಆಕೆಯ ತಂದೆ ಆರೋಪಿಸಿದ್ದರು.

ಬಳಿಕ ಮಂಗಳೂರಿನ ವಿಎಚ್‌ಪಿ ನಾಯಕರನ್ನು ಭೇಟಿಯಾಗಿ ವಿಸ್ಮಯಾ ತಂದೆ ಮಗಳನ್ನು ಉಳಿಸಿಕೊಡಿ ಎಂದು ಕಣ್ಣೀರು ಹಾಕಿದ್ದರು. ಕೊನೆಗೂ ಆಕೆ ತಂದೆಯ ಕೈಗೆ ಸಿಗದೇ ಅಶ್ಪಕ್ ನನ್ನು ವಿಸ್ಮಯಾ ಮುಸ್ಲಿಂ ಪದ್ಧತಿ ಪ್ರಕಾರ ವಿವಾಹವಾಗಿದ್ದಾಳೆ. ಈತ ಕೇರಳ ಹೈಕೋರ್ಟ್‌ಗೆ ಹೆಬಿಯಾಸ್ ಕಾರ್ಪಸ್ ಅರ್ಜಿ ಹಾಕಿದ್ದ. ಇದೀಗ ಕೇರಳ ಹೈಕೋರ್ಟ್ ಆದೇಶದಂತೆ ವಿಸ್ಮಯಾಳನ್ನು ಮದುವೆಯಾಗಿದ್ದಾನೆ ಎನ್ನಲಾಗಿದೆ.

ಇದೀಗ ಆಕೆ ಮದುವೆಯಾಗಿರುವ ಫೋಟೊವನ್ನು ಫೇಸ್‌ಬುಕ್‌ಗೆ ಅಪ್ಲೋಡ್ ಮಾಡಿರುವ ವಿಶ್ವಹಿಂದೂ ಪರಿಷತ್‌ ಮುಖಂಡ ಶರಣ್ ಪಂಪ್ ವೆಲ್ ಅವರು, ‘ಕ್ಷಮಿಸಿ ವಿನೋದ್‌ರವರೇ, ನಿಮ್ಮ ಮಗಳನ್ನು ಉಳಿಸಲು ನಮ್ಮಿಂದ ಸಾಧ್ಯವಾಗಿಲ್ಲ’ ವಿಸ್ಮಯಾಳ ತಂದೆಯ ಬಳಿ ಕ್ಷಮೆ ಕೋರಿದ್ದಾರೆ ಎಂದು ತಿಳಿಯಲಾಗಿದೆ.

Powered by Blogger.