ಉಗ್ರರೂಪ ತಾಳಿದ ಪಡುಬಿದ್ರಿ ಟೋಲ್ ಹೋರಾಟ - ಗುತ್ತಿಗೆದಾರರನ್ನು ಒದ್ದೋಡಿಸಿದ ಸಾರ್ವಜನಿಕರು.!!
ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿ ೧ರ ಕಂಚಿನಡ್ಕದಲ್ಲಿ ನಿರ್ಮಿಸಲುದ್ದೇಶಿಸಿರುವ ಟೋಲ್‌ಗೇಟ್ ಪರಿಶೀಲನೆಗೆ ಬಂದಿದ್ದ ಅಧಿಕಾರಿಗಳ ಜೊತೆ ಬಂದು ಗೂಂಡಾಗಳಂತೆ ಪೊಸ್ ನೀಡಿದ ಗುತ್ತಿಗೆ ಕಂಪನಿಯ ಯುವಕರನ್ನು ಟೋಲ್ ವಿರೋಧಿ ಹೋರಾಟ ಸಮಿತಿಯ ಪ್ರಮುಖರು ಒದ್ದೋಡಿಸಿದ್ದು ಮಾತ್ರವಲ್ಲ ಸ್ಥಳಕ್ಕೆ ಬಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆದಿದೆ.
ರಾಜ್ಯ ಹೆದ್ದಾರಿಯಲ್ಲಿ ಟೋಲ್ ನಿರ್ಮಾಣದ ಸ್ಥಳ ಪರಿಶೀಲನೆಗಾಗಿ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಎಕ್ಸಿಕ್ಯೂಟಿವ್ ಎಂಜಿನಿಯರ್ ರಘು ಎಲ್ ಹಾಗೂ ಸಹಾಯಕ ಇಂಜಿನಿಯರ್ ಹೇಮಂತ್ ಕುಮಾರ್ ಆಗಮಿಸಿದ್ದರು. ಅಧಿಕಾರಗಳು ಸ್ಥಳ್ಕಕೆ ಬರುವ ಸುದ್ದಿ ತಿಳಿದು ಸ್ಥಳದಲ್ಲಿ ಟೋಲ್ ವಿರೋಧಿ ಹೋರಾಟಗಾರರು ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದರು.
ಸ್ಥಳಕ್ಕೆ ಬಂದ ಅಧಿಕಾರಿಗಳು ಟೋಲ್‌ವಿರೋಧಿ ಮುಖಂಡರಿಗೆ ಟೋಲ್‌ಗೇಟ್ ಬಗೆಗಿನ ವಿವರವನ್ನು ನೀಡಿದರು. ಈ ವೇಳೆ ಯಾವುದೇ ಕಾರಣಕ್ಕೂ ಇಲ್ಲಿ ಟೋಲ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂಬುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಟೋಲ್‌ಗುತ್ತಿಗೆ ವಹಿಸಿಕೊಂಡ ಕಂಪೆನಿಯ ಸಿಬ್ಬಂದಿಗಳು ಅಧಿಕಾರಿಗಳ ಹಿಂಭಾಗದಲ್ಲಿ ಬಾಡಿಗಾರ್ಡ್ ಗಳಂತೆ ಟೋಲ್‌ವಿರೋಧಿ ಹೋರಾಟಗಾರನ್ನು ಅಣಕಿಸುವಂತೆ ಪೊಸ್ ನೀಡಿದಾಗ ಆಕ್ರೋಶಗೊಂಡ ಹೋರಾಟಗಾರರು, ಈ ಮೊದಲು ಶಿಲಾನ್ಯಾಸ ಎಂಬುದಾಗಿ ಸ್ಥಳಕ್ಕೆ ಬಂದು ಗೂಂಡಾಗಳಂತೆ ವರ್ತಿಸಿ ಇದೀಗ ಮತ್ತೆ ಬಂದ ಅವರನ್ನು ... ಸ್ಥಳದಿಂದ ಅಟ್ಟಾಡಿಸಿ ಓಡಿಸಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಮಧ್ಯ ಪ್ರವೇಶಿಸಿ ಅವರನ್ನು ಕಾರಿನಲ್ಲಿ ಅಲ್ಲಿಂದ ತೆರಳುವಂತೆ ಸೂಚಿಸಿದರು.
ಟೋಲ್ ವಿರೋಧಿಗಳ ಅಕ್ರೋಶಕ್ಕೆ ಬೆದರಿದ ಅಧಿಕಾರಿಗಳು ಸ್ಥಳದಿಂದ ಪಲಾಯನ ಮಾಡಿದ್ದು, ಹೋರಾಟಗಾರರ ಆಕ್ರೋಶ ಕಡಿಮೆಯಾಗುತ್ತಿದಂತೆ ಮತ್ತೆ ಪೊಲೀಸರ ಸೂಚನೆಯಂತೆ ಸ್ಥಳಕ್ಕೆ ಬಂದ ಅಧಿಕಾರಿಗಳಲ್ಲಿ ಟೋಲ್ ವಿರೋಧಿ ಹೋರಾಟಗಾರರು ಯಾವುದೇ ಕಾರಣಕ್ಕೂ ಇಲ್ಲಿ ಟೋಲ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟುಹಿಡಿದರು.
ಟೋಲ್ ವಿರೋಧ ಹೋರಾಟ ಸಮಿತಿಯ ಸುಹಾಸ್ ಹೆಗ್ಡೆ ಮಾತನಾಡಿ ಟೋಲ್‌ನಿರ್ಮಾಣ ಪ್ರಸ್ತಾವನೆ ಇಲ್ಲಿಗೆ ಕೈಬಿಡಬೇಕು ಎಂದು ಒತ್ತಾಯಿಸಿ ಐದು ದಿನಗಳ ಒಳಗೆ ಬೃಹತ್ ಮಟ್ಟದ ಪ್ರತಿಭಟನೆಯನ್ನು ಆಯೋಜಿಸಲಾಗುವುದು, ಅಧಿಕಾರಿಗಳು ಗುತ್ತಿಗೆದಾರರ ಪರವಾಗಿರದೆ ಹೋರಾಟಗಾರರೊಂದಿಗೆ ಇರ ಬೇಕೆಂಬುದಾಗಿ ಮನವಿ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಅಧಿಕಾರಿಗಳು ಸರ್ಕಾರಿ ನೌಕರರಾಗಿರುವ ನಾವು ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಿಳಿಸಿ ಮರಳಿದ್ದಾರೆ.

Post a Comment