ಶಾಲೆಗಳಲ್ಲಿ ಇನ್ನು ಇಂದಿರಾ ಜನ್ಮದಿನಾಚರಣೆ ಇಲ್ಲ
ಇನ್ನು ಮುಂದೆ ರಾಜಸ್ಥಾನ ಶಾಲೆಗಳಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮದಿನ ಆಚರಣೆ ಇಲ್ಲ. ಆ ಕಾರ್ಯಕ್ರಮವನ್ನು ಶಾಲೆಗಳ ಕಾರ್ಯಕ್ರಮ ಪಟ್ಟಿಯಿಂದ ಕೈಬಿಡುವಂತೆ ರಾಜಸ್ಥಾನ ಶಿಕ್ಷಣ ಇಲಾಖೆ ಸೂಚಿಸಿದೆ.
ಹೀಗಾಗಿ ಇನ್ನು ಮುಂದೆ ಪ್ರತೀ ವರ್ಷ ನ.19ರಂದು ಇಂದಿರಾ ಗಾಂಧಿ ಜನ್ಮ ದಿನ ಪ್ರಯುಕ್ತ ಆಚರಿಸಲಾಗುತ್ತಿದ್ದ ಕಾರ್ಯಕ್ರಮ ನಡೆಯುವುದಿಲ್ಲ.
ಆದರೆ ಅ.31ರ ಇಂದಿರಾ ಗಾಂಧಿಯವರ ಪುಣ್ಯ ತಿಥಿಯನ್ನು “ಸಂಕಲ್ಪ ದಿನ’ವೆಂದು ಆಚರಿಸುವುದನ್ನು ಮುಂದುವರಿಸಲಾಗಿದೆ. ಜನ್ಮದಿನಾಚರಣೆ ಕಾರ್ಯಕ್ರಮ ಕೈಬಿಟ್ಟಿರುವುದಕ್ಕೆ ಕಾಂಗ್ರೆಸ್ ಟೀಕಿಸಿದ್ದು, ಇದು ಬಿಜೆಪಿಯ ಸಂಕುಚಿತ ಮನಸ್ಥಿತಿಯನ್ನು ತೋರಿಸುತ್ತದೆ ಎಂದಿದೆ.
Post a Comment