ಶಿರ್ವ: ಎಳೆನೀರು ಕೊಯ್ಯುವ ವೇಳೆ ವಿದ್ಯುತ್ ಶಾಕ್ ತಗುಲಿ ವ್ಯಕ್ತಿ ಸಾವು
ಎಳೆನೀರು ಕೊಯ್ಯುವ ವೇಳೆ ವಿದ್ಯುತ್ ಶಾ*ಕ್ ತಗುಲಿ ವ್ಯಕ್ತಿಯೊಬ್ಬರು ಮೃ*ತಪಟ್ಟ ಘಟನೆ ಇಲ್ಲಿನ ನಡೀಬೆಟ್ಟು ಎಂಬಲ್ಲಿ ಆ.8ರ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಶಿರ್ವ ನಡೀಬೆಟ್ಟು ಪನಿಮಾರ್ ಮನೆಯ ಕೆಲಸದಾಳು ಸುರೇಶ್ ಶೆಟ್ಟಿ(68) ಮೃತಪಟ್ಟವರು.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಸುರೇಶ್ ಕಬ್ಬಿಣದ ಸಲಾಕೆಯಿಂದ ಸೀಯಾಳ ತೆಗೆಯಲು ಹೋಗಿದ್ದು, ತೋಟದಲ್ಲಿರುವ ಹೈಟೆನ್ಷನ್ ವಯರ್ ತಗಲಿ ಈ ಅವಘಡ ಸಂಭವಿಸಿದೆ. ಮನೆಯ ಯಜಮಾನ ದೇವಸ್ಥಾನಕ್ಕೆ ಹೋಗಿದ್ದ ವೇಳೆ ಘಟನೆ ನಡೆದಿದೆ.
Post a Comment