ಕಾರ್ಕಳ:- ಕುಂಟಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳ್ಮಣ್ ವೃತ್ತ ಮಟ್ಟದ ಖೋ ಖೋ ಪಂದ್ಯಾಟ
ದಿನಾಂಕ 22/08/2024 ರಂದು ಕುಂಟಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳ್ಮಣ್ ವೃತ್ತ ಮಟ್ಟದ ಖೋ ಖೋ ಪಂದ್ಯಾಟ ಪಂದ್ಯಾಟವು ಅದ್ದೂರಿಯಾಗಿ ಜರುಗಿತು.


ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕೃಷ್ಣರಾಜ ರೈ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಕಲ್ಯಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪೂಜಾ, ಉಪಾಧ್ಯಕ್ಷರಾದ ಹರಿಜೀವನ್ , ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಆನಂದ ಸಾಲಿಯನ್, ಕೋಶಾಧಿಕಾರಿ ಸುಕೇಶ್ ಶೆಟ್ಟಿ, ಕಲ್ಯಾ ಗ್ರಾಮ ಪಂಚಾಯತ್ ಸದಸ್ಯರಾದ ಸುಪ್ರಿಯ, ಜಗದೀಶ್, ಪ್ರೇಮ, ಬಿಲ್ಲವರ ಸಂಘದ ಅಧ್ಯಕ್ಷರಾದ ಶರತ್ ಸುವರ್ಣ, CRP ಶಿವಾನಂದ್, ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುಂದರ ಪೂಜಾರಿ ಮತ್ತು ಉಪಾಧ್ಯಕ್ಷರಾದ ಸುಚಿತ, ಶಾಲಾ ಮುಖ್ಯ ಶಿಕ್ಷಕಿಯವರಾದ ಕೆ. ಮಂಜುಳಾ ವೇದಿಕೆಯಲ್ಲಿ ಎಲ್ಲರೂ ಉಪಸ್ಥಿತರಿದ್ದರು.

ಎಲ್ಲಾ ಗಣ್ಯ ವ್ಯಕ್ತಿಗಳು ಕ್ರೀಡಾಕೂಟಕ್ಕೆ ಶುಭ ಹಾರೈಸಿದರು ಹಾಗೂ ಎಲ್ಲರಿಗೂ ಗೌರವ ಸ್ಮರಣಿಕೆ ನೀಡಿ ಗೌರವಿಸಲಾಯಿತು.
.jpeg)
ನಂತರ ಖೋ ಖೋ ಪಂದ್ಯಾಟ ಆರಂಭಗೊಂಡಿತು.
ಈ ನಡೆದ ಕೋಕೋ ಪಂದ್ಯದಲ್ಲಿ ಬಾಲಕರ ವಿಭಾಗದಲ್ಲಿ ಸ. ಮಾ.ಹಿ.ಪ್ರಾ. ಶಾಲೆ ಕಲ್ಯಾ ಪ್ರಥಮ ಸ್ಥಾನ ಪಡೆದಿದ್ದು,
ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಾಂತಾವರ ದ್ವಿತೀಯ ಸ್ಥಾನವನ್ನು
ಗಳಿಸಿದೆ. .jpeg)
ಹಾಗೂ ಬಾಲಕಿರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಾಂತವರ
ಹಾಗೂ ಎರಡನೇ ಸ್ಥಾನವನ್ನು ಸ.ಮಾ.ಹಿ.ಪ್ರಾ. ಶಾಲೆ ಕಲ್ಯಾ
ದ್ವಿತೀಯ ಸ್ಥಾನವನ್ನು ಪಡೆದಿದೆ. .jpeg)
ಬೆಸ್ಟ್ ರನ್ನರ್ ಹಾಗೂ ಬೆಸ್ಟ್ ಚೇಸರ್ ಗುರುತಿಸಿ ವೈಯಕ್ತಿಕವಾಗಿ ಪ್ರಥಮ ಹಾಗೂ ದ್ವಿತೀಯ ಬಹುಮಾನವನ್ನು ನೀಡಲಾಗಿತ್ತು . ಅಂತಿಮವಾಗಿ ನಡೆದ ಸಮಾರಂಭದಲ್ಲಿ ವಿಜೇತರಿಗೆ ಟ್ರೋಪಿಯನ್ನು ನೀಡಲಾಯಿತು.

.jpeg)
.jpeg)
.jpeg)
.jpeg)














.jpeg)


Post a Comment