ಶ್ರೀ "ರಕ್ತೇಶ್ವರಿ ದೈವಸ್ಥಾನ "ಕುಂಟಾಡಿ: ಶ್ರೀ ಕ್ಷೇತ್ರದಲ್ಲಿ 12-10-2024 ರಂದು ಚಂಡಿಕಾಯಾಗ ,ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆ
ಶಕ್ತಿಯ ಆರಾಧನೆಯ ವಿಜಯದಶಮಿ ಆರಂಭವಾಯಿತೆಂದರೆ ನಾಡೆಲ್ಲಾ ಹಬ್ಬದ ವಾತಾವರಣ. ಎಲ್ಲೆಲ್ಲೂ ಸಂಭ್ರಮ ಸಡಗರ , ಈ ಸಮಯದಲ್ಲಿ ಕುಂಟಾಡಿಯ ಶ್ರೀ ಕ್ಷೇತ್ರದಲ್ಲಿ ದೇವಿಯ ದೇವಸ್ಥಾನಕ್ಕೆ ಹರಿದು ಬರುವ ಭಕ್ತ ಸಾಗರ ಇತಿಹಾಸ ಪ್ರಸಿದ್ಧ, ವಿವಿಧ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ಈ ದೇವಸ್ಥಾನ ಕಾರ್ಕಳ ವ್ಯಾಪ್ತಿಯ ಶ್ರೀ "ರಕ್ತೇಶ್ವರಿ ದೈವಸ್ಥಾನ "ಕುಂಟಾಡಿ. ವಿಜಯದಶಮಿ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀದೇವಿಗೆ ಪೂಜೆ ಪುರಸ್ಕಾರಗಳು ನಡೆಯಲಿರುವುದು.
ಸನ್ನಿಧಾನದಲ್ಲಿ 12-10-2024 ಶನಿವಾರದಂದು ವಿಜಯದಶಮಿ ಪ್ರಯುಕ್ತ ಚಂಡಿಕಾಯಾಗ ಹಾಗೂ ಅನ್ನ ಸಂತರ್ಪಣೆ ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆಯು ಶ್ರೀ ಕ್ಷೇತ್ರದಲ್ಲಿ ನಡೆಯಲಿರುವುದು.
ಬೆಳಿಗ್ಗೆ 8.30 ಚಂಡಿಕಾಯಾಗ ಪ್ರಾರಂಭ , 11.30 ಗಂಟೆಗೆ ಪೂರ್ಣಾಹುತಿ ,ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ , ತದನಂತರ 1 ಗಂಟೆಗೆ ಅನ್ನಸಂತರ್ಪಣೆ ನಡೆಲಿರುವುದು.
ಅದೇ ದಿವಸ ಸಂಜೆ 6 ಗಂಟೆಗೆ ಸಾಮೂಹಿಕ ದುರ್ಗಾ ಪೂಜೆ ಆರಂಭಗೊಂಡು 8 ಗಂಟೆಗೆ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ವರಿಗೂ ಆದರದ ಸ್ವಾಗತ ಬಯಸುವವರು - ಕುಂಟಾಡಿ ಗ್ರಾಮಸ್ಥರು ,ಆಡಳಿತ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ (ಶ್ರೀ ರಕ್ತೇಶ್ವರಿ ದೇವಸ್ಥಾನ ಕುಂಟಾಡಿ)

Post a Comment