ಕೌಡೂರು :- ರಸ್ತೆ ದುರಸ್ತಿ, ಸ್ಥಳೀಯರಿಂದ ಪ್ರತಿಭಟನೆ
ಕೌಡೂರು ಗ್ರಾಮದ ರಂಗನಪಲೈ ಶೇಡಿಗುಡ್ಡೆ ಕರಿಕುಮೆರಿ ಪಾತಾವು ಸಂಪರ್ಕಿಸುವ ಡಾ. ಬಿ. ಆರ್. ಅಂಬೇಡ್ಕರ್ ರಸ್ತೆ ದುರಸ್ತಿಗಾಗಿ ಆಗ್ರಹಿಸಿ ಫೆ. 4ರ ಸಂಜೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಈ ರಸ್ತೆಯು ತೀರ ಹದಗೆಟ್ಟಿದೆ. ಸ್ಥಳೀಯಡಳಿತವಾಗಿರುವ ಬೈಲೂರು ಗ್ರಾಮ ಪಂಚಾಯತ್ ಸದಸ್ಯರು ಈ ಬಗ್ಗೆ ಗಮನಹರಿಸದಿರುವುದು ಬೇಸರದ ಸಂಗತಿಯೆಂದರು. ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರಿಗೆ ಕರೆ ಮಾಡಿ ರಸ್ತೆಯ ಪರಿಸ್ಥಿತಿ ಬಗ್ಗೆ ತಿಳಿಸಿ ಅನುದಾನ ಒದಗಿಸುವಂತೆ ಮನವಿ ಮಾಡಿಕೊಂಡರು. ಮಂಜುನಾಥ ಭಂಡಾರಿಯವರು ರಸ್ತೆಯನ್ನು ಸರಿಪಡಿಸುವ ಬಗ್ಗೆ ಆಶ್ವಾಸನೆ ನೀಡಿದರು ಎನ್ನಲಾಗಿದೆ.
ಶೀಘ್ರದಲ್ಲೇ ರಸ್ತೆ ದುರಸ್ತಿಯಾಗದಿದ್ದಲ್ಲಿ ಬೈಲೂರು ಪಂಚಾಯತ್ ಕಚೇರಿಯದುರು ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಬೈಲೂರು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಉದಯ ಶೆಟ್ಟಿ, ಬೈಲೂರು ಹಾಗೂ ಬೈಲೂರು, ಕಣಜಾರು, ಕೌಡೂರು ಬ್ಲಾಕ್ ಅಧ್ಯಕ್ಷರು, ಅಂತೊನಿ ಮಿರ೦ಂದಾ, ಕು. ಪ್ರಿಯಾ ಎಲ್. ಜಿ, ರಾಧಾ, ಜೆನೆವಿವ್ ಡಿ'ಸೊಜಾ, ಟ್ರೆಸ್ಸಿ ಮಿರಂದಾ, ಪ್ರಿಯಾ ಕ್ವಾಡ್ರಾಸ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

Post a Comment