ಹಣ ಕೊಡದಿದ್ದರೆ ನಗ್ನ ಫೋಟೋ ವೈರಲ್ ಮಾಡ್ತೀವಿ! ಸೈಬರ್ ಕಿರುಕುಳಕ್ಕೆ ವೃದ್ಧ ಜೀವಗಳು ಬಲಿ!
ನಿವೃತ್ತ ರೈಲ್ವೆ ಉದ್ಯೋಗಿ, 83 ವರ್ಷದ ಡಿಯಾಗೋ ನಜರತ್ ಹಾಗೂ ಅವರ ಪತ್ನಿ, 79 ವರ್ಷದ ಪಾವಿಯಾ ನಜರತ್ ಆತ್ಮಹತ್ಯೆ ಮಾಡಿಕೊಂಡ ವೃದ್ಧ ದಂಪತಿ. ಸೈಬರ್ ವಂಚಕರು ಈ ದಂಪತಿಗೆ ಪದೇ ಪದೇ ವಿಡಿಯೋ ಕಾಲ್ ಮಾಡಿ, ನಿಮ್ಮ ನಗ್ನ ಫೋಟೋಗಳಿವೆ. ಹಣ ಕೊಡದಿದ್ದರೆ ವೈರಲ್ ಮಾಡ್ತೀವಿ ಅಂತ ಬೆದರಿಕೆ ಹಾಕುತ್ತಿದ್ದರಂತೆ. ಕೊನೆಗೆ ಸೈಬರ್ ವಂಚಕರ ಕಿರುಕುಳ ತಾಳಲಾರದೇ ಪತ್ನಿ ಪಾವಿಯಾ ಜನರತ್ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಅವರ ಪತಿ ಚಾಕುವಿನಿಂದ ಕತ್ತು ಕುಯ್ದುಕೊಂಡು, ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಳಗಾವಿಯ ಖಾನಾಪುರ ತಾಲೂಕಿನ ಬಿಡಿ ಗ್ರಾಮದಲ್ಲಿ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪಾವಿಯಾ ಜನರತ್ ಎಂಬುವರು ನಿದ್ದೆ ಮಾತ್ರೆ ಸೇವಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಿಕ ಅದನ್ನು ನೋಡಿದ ಅವರ ಪತಿ ಡಿಯಾಗೋ ನಜರತ್, ಡೆತ್ ನೋಟ್ ಬರೆದಿಟ್ಟು, ತಮ್ಮ ಕತ್ತು ಕುಯ್ದುಕೊಂಡು ಸಾವಿಗೆ ಶರಣಾಗಿದ್ದಾರೆ.
ಹಣ ಕೊಡಿ, ಇಲ್ಲದಿದ್ದರೆ ನಗ್ನ ಫೋಟೋ ವೈರಲ್ ಮಾಡ್ತೀವಿ
ಈ ವೃದ್ಧ ದಂಪತಿ ಆತ್ಮಹತ್ಯೆಗೆ ಸೈಬರ್ ವಂಚಕರೇ ಕಾರಣ ಎನ್ನಲಾಗಿದೆ. ಕಳೆದ 1 ತಿಂಗಳ ಹಿಂದೆ ಈ ವೃದ್ಧ ದಂಪತಿ ಬೆನ್ನು ಬಿದ್ದ ಸೈಬರ್ ವಂಚಕರು, ನಗ್ನ ಫೋಟೋ ಇದೆ ಅಂತ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರಂತೆ!
ವೃದ್ಧ ದಂಪತಿ ಮೊಬೈಲ್‌ಗೆ ಪದೇ ಪದೇ ವಿಡಿಯೋ ಕಾಲ್ ಮಾಡುತ್ತಿದ್ದ ವಂಚಕರು, ತಾವು ಪೊಲೀಸರು ಅಂತ ಹೆದರಿಸುತ್ತಿದ್ದರಂತೆ. ನಮ್ಮ ಬಳಿ ನಿಮ್ಮ ನಗ್ನ ಚಿತ್ರಗಳಿವೆ. ನೀವು ಹಣ ಕೊಡದಿದ್ದರೆ ಅದನ್ನು ನಾವು ವೈರಲ್ ಮಾಡುತ್ತೇವೆ ಅಂತ ಬೆದರಿಕೆ ಹಾಕುತ್ತಿದ್ದರಂತೆ. ಹೀಗೆ ಒಂದು ತಿಂಗಳಿನಿಂದ ಪದೇ ಪದೇ ಕಿರುಕುಳ ನೀಡಿದ್ದಾರಂತೆ.
ಕೇಳಿದಷ್ಟು ಹಣ ಕೊಡದಿದ್ದರೆ ನಗ್ನ ಚಿತ್ರಗಳನ್ನು ವೈರಲ್ ಮಾಡುವ ಬೆದರಿಕೆ ಹಾಕಿದ್ದರಂತೆ. ಹೀಗಾಗಿ ಹೆದರಿಕೊಂಡ ವೃದ್ಧ ದಂಪತಿ ಈಗಾಗಲೇ ಖದೀಮರ ಅಕೌಂಟ್‌ಗೆ ಒಟ್ಟು 6 ಲಕ್ಷ ರೂಪಾಯಿ ಹಣ ಟ್ರಾನ್ಸ್‌ಪರ್ ಮಾಡಿದ್ದರಂತೆ. ಹೀಗಿದ್ದರೂ ಖದೀಮರು ಮತ್ತಷ್ಟು ಹಣ ನೀಡುವಂತೆ ಪೀಡಿಸಲು ಶುರು ಮಾಡಿದ್ದರಂತೆ.
ಇನ್ನು ಖದೀಮರ ಕಿರಿಕಿರಿಗೆ ಬೇಸತ್ತ ಪತ್ನಿ ಪಾವಿಯಾ ನಜರತ್ ಅತಿಯಾದ ನಿದ್ರೆ ಮಾತ್ರೆ ಸೇವಿಸಿ, ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಳಿಕ ಪತ್ನಿ ಸಾವಿನಿಂದ ನೊಂದ ಪತಿ ಡಿಯಾಗೋ ನಜರತ್, ಡೆತ್ ನೋಟ್ ಬರೆದಿಟ್ಟಿದ್ದಾರೆ. ಬಳಿಕ ತಮ್ಮ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

Post a Comment