ಮಾಳ ಹಳೆಪ್ಪಳ್ಳಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶದ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ.
ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಹಳೆಪ್ಪಳ್ಳಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶದ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ(ಪಿಎಂಶ್ರೀ)ಕೂಡಬೆಟ್ಟು ಮಾಳ ಇಲ್ಲಿಯ ಸಹ್ಯಾದ್ರಿ ಇಕೋ ಕ್ಲಬ್ ನ ಸದಸ್ಯರು,ಮತ್ತು ಸರ್ಕಾರಿ ಪ್ರೌಢಶಾಲೆ ಕೂಡಬೆಟ್ಟು ಮಾಳ ಇಲ್ಲಿನ ಮಕ್ಕಳು ಮತ್ತು ಶಿಕ್ಷಕರು,ಆಶಾ ಕಾರ್ಯಕರ್ತೆ ಶ್ರೀಮತಿ ಚಿತ್ರಾವತಿ,ಸ್ಥಳೀಯ ಪಂಚಾಯತ್ ಸದಸ್ಯರಾದ ಶ್ರೀಮತಿ ಸುಂದರಿ,ಶ್ರೀ ಸಂಜೀವ,ಮಾಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಶ್ರೀನಿವಾಸ್,ಮಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಉಮೇಶ್ ಪೂಜಾರಿ,SLRM ಘಟಕದ ಶ್ರೀಮತಿ ಸರಸ್ವತಿ ಹೆಗ್ಡೆ,ಪ್ರಾಥಮಿಕ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಶ್ರೀ ಕೆ ಶಶಿಧರ ಭಟ್,ಉಪಾಧ್ಯಕ್ಷೆ ಶ್ರೀಮತಿ ವಿಜಯಾ ಬಾಲಕೃಷ್ಣ ಹೆಗ್ಡೆ,ಪ್ರೌಢಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷ ಶ್ರೀ ವಸಂತ ಸೇರಿಗಾರ್,ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶ್ರೀ ಶಿಶುಪಾಲ್ ಜೈನ್ ,ಶಾಲಾ ಅಭಿಮಾನಿಗಳು,ಮಕ್ಕಳು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೂಡಬೆಟ್ಟು ಜಂಕ್ಷನ್ ನಿಂದ ಮುಳ್ಳೂರು ಗೇಟ್ ವರೆಗೆ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.
ಸ್ಥಳೀಯ ಹರೀಶ್ ನಾಯ್ಕ ಅವರು ಚಾಕಲೇಟ್ ಮತ್ತು ಪಾನೀಯ ನೀಡಿ ಸಹಕರಿಸಿದರು.ಗ್ರಾಮ ಪಂಚಾಯತ್ ವತಿಯಿಂದಲೂ ಪಾನೀಯ ವ್ಯವಸ್ಥೆ ಮಾಡಲಾಗಿತ್ತು.

Post a Comment