ಕುಂಟಾಡಿ ಜಾತ್ರಾ ಮಹೋತ್ಸವ ,ನಾಳೆ ಶ್ರೀ ರಕ್ತೇಶ್ವರಿ ಮತ್ತು ವ್ಯಾಘ್ರ ಚಾಮುಂಡಿ ದೈವಗಳ ಕಾಲಾವಧಿ ನೇಮೋತ್ಸವ
ದೇವಾಲಯಗಳ ನಗರಿ ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಅನಾದಿ ಕಾಲದಿಂದಲೂ ಆಸ್ತಿಕರ ಶ್ರದ್ಧಾ ಭಕ್ತಿಯ ಕೇಂದ್ರವಾಗಿರುವ ಭಕ್ತರ ಸಕಲ ಇಷ್ಟಾರ್ಥಗಳು ಈಡೇರುತ್ತಿವ ಸಾವಿರಾರು ವರ್ಷಗಳ ಐತಿಹಾಸಿಕ ಹಿನ್ನೆಲೆಯಿರುವ ಶ್ರೀ ರಕ್ತೇಶ್ವರಿ ಮತ್ತು ವ್ಯಾಘ್ರ ಚಾಮುಂಡಿ ದೈವಗಳ ಕಾಲಾವಧಿ ನೇಮೋತ್ಸವ
ದಿನಾಂಕ: 13-04-2025 ಭಾನುವಾರ ಕುಂಟಾಡಿ 'ಶ್ರೀ ರಕ್ತೇಶ್ವರಿ ಮತ್ತು ವ್ಯಾಘ್ರ ಚಾಮುಂಡಿ ದೈವಗಳ ” ಕಾಲಾವಧಿ ನೇಮೋತ್ಸವ" ಹಾಗೂ ದಿನಾಂಕ: 17-04-2025 ನೇ ಗುರುವಾರ ‘ಮಹಾ ರಥೋತ್ಸವ’ವು ಜರಗಲಿರುವುದು.
ಸನ್ನಿಧಾನದಲ್ಲಿ ಕಾರ್ಯಕ್ರಮದ ವಿವರ:-
⭕ ದಿನಾಂಕ: 08-04-2025ನೇ ಮಂಗಳವಾರದಿಂದ ದಿನಾಂಕ: 12-04-2025ನೇ ಶನಿವಾರದವರೆಗೆ ಪ್ರತಿ ದಿನ ಸಂಜೆ ಗಂಟೆ 5.00ಕ್ಕೆ ಚೆಂಡು

⭕ದಿನಾಂಕ: 10-04-2025ನೇ ಗುರುವಾರ ಸಂಜೆ 6.00ಕ್ಕೆ ತೋರಣ ಮೂಹೂರ್ತ"
⭕ದಿನಾಂಕ: 11-04-2025ನೇ ಶುಕ್ರವಾರ ಬೆಳಿಗ್ಗೆ ಗಂಟೆ 9.30ಕ್ಕೆ ಬೆರ್ಮನಬೆಟ್ಟು ನಾಗಬನದಲ್ಲಿ ತಂಬಿಲ ಸೇವೆ,
ಶ್ರೀ ದೈವಗಳ ಭಂಡಾರ ತೀರ್ಥಬೆಟ್ಟುಗುತ್ತಿವಿನಿಂದ ಸಂಜೆ ಗಂಟೆ 4.00ಕ್ಕೆ ಹೊರಟು , ಗಂಟೆ 4.30ಕ್ಕೆ ಶ್ರೀ ರಕೇಶ್ವರಿ ದೈವಸ್ಥಾನಕ್ಕೆ ಭಂಡಾರ ಆಗಮನ
⭕ದಿನಾಂಕ: 12-04-2025ನೇ ಶನಿವಾರ ಬೆಳಿಗ್ಗೆ ಗಂಟೆ 8.00ಕ್ಕೆ ಚಂಡಿಕಾಯಾಗ ಪ್ರಾರಂಭ , ಮಧ್ಯಾಹ್ನ ಗಂಟೆ 12..30 ರಿಂದ ಅನ್ನಸಂತರ್ಪಣೆ . ಗಂಟೆ 11.00ಕ್ಕೆ ಪ್ರತಿಷ್ಠಾ ವರ್ಧಂತಿಯ ಪ್ರಯುಕ್ತ ಕಲಾಶಾಭಿಷೇಕ, ನಾಗಬ್ರಹ್ಮರಿಗೆ ಪೂಜೆ ಮಧ್ಯಾಹ್ನ 11.30ಕ್ಕೆ ಚಂಡಿಕಾಯಾಗ ಪೂರ್ಣಾಹುತಿ. ಗಂಟೆ 12.00ಕ್ಕೆ ಮಹಾಪೂಜೆ ಗಂಟೆ 12.30ಕ್ಕೆ "ಪ್ರಸಾದ ವಿತರಣೆ" ಸಂಜೆ ಗಂಟೆ 7.00ಕ್ಕೆ ಧ್ವಜಾರೋಹಣ ಸಂಜೆ ಗಂಟೆ 7.30ಕ್ಕೆ ರಂಗಪೂಜೆ

⭕ದಿನಾಂಕ: 13-04-2025ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 11.00ಕ್ಕೆ ಶ್ರೀ ದೈವಗಳಿಗೆ ನವಕ ಪ್ರಧಾನ ಕಲಶಾಭಿಷೇಕ ಗಂಟೆ 11.30ಕ್ಕೆ ಅಶ್ವಥ ಕಟ್ಟೆಯಲ್ಲಿ ಕಟ್ಟೆ ಪೂಜೆ , ಗಂಟೆ 12.00ಕ್ಕೆ ನಂದಿಗೋಣ ನೇಮ ಪ್ರಾರಂಭ,
ಮಧ್ಯಾಹ್ನ ಗಂಟೆ 1.00ರಿಂದ ಮಹಾ ಅನ್ನಸಂತರ್ಪಣೆ .

ರಾತ್ರಿ ಗಂಟೆ 8.30ಕ್ಕೆ ಶ್ರೀ ದೈವಗಳಿಗೆ ಮಹಾಪೂಜೆ ಗಂಟೆ 9.00ಕ್ಕೆ “ಶ್ರೀ ರಕೇಶ್ವರಿ ಹಾಗೂ ವ್ಯಾಘ್ರ ಚಾಮುಂಡಿ ದೈವಗಳ ನೇಮೋತ್ಸವ” ಪ್ರಾರಂಭ


⭕ದಿನಾಂಕ: 14-04-2025ನೇ ಸೋಮವಾರ ರಾತ್ರಿ ಗಂಟೆ 7.00 ರಿಂದ ರಂಗಪೂಜೆ
⭕ ದಿನಾಂಕ: 15-04-2025ನೇ ಮಂಗಳವಾರ ಬೆಳಿಗ್ಗೆ ಗಂಟೆ 9.00ಕ್ಕೆ “ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ” ಪ್ರಾರಂಭ" , ಗಂಟೆ 12.00ಕ್ಕೆ ಮಹಾಪೂಜೆ, ಮಧ್ಯಾಹ್ನ ಗಂಟೆ 12..30 ರಿಂದ ಅನ್ನಸಂತರ್ಪಣೆ .

⭕ದಿನಾಂಕ: 16-04-2025ನೇ ಬುಧವಾರ ರಾತ್ರಿ ಗಂಟೆ 7.00ರಿಂದ ರಂಗಪೂಜೆ
⭕ದಿನಾಂಕ: 17-04-2025ನೇ ಗುರುವಾರ ಬೆಳಿಗ್ಗೆ 11.00ಕ್ಕೆ ಶ್ರೀ ದೈವಗಳಿಗೆ ನವಕ ಪ್ರಧಾನ ಕಲಾಶಾಭಿಷೇಕ, ಗಂಟೆ 11.15ಕ್ಕೆ ಮಹಾಪೂಜೆ, ಬಲಿ, ಗಂಟೆ 12.05ಕ್ಕೆ ರಥಾರೋಹಣ, ಮಧ್ಯಾಹ್ನ ಗಂಟೆ 1.00 ರಿಂದ ಅನ್ನಸಂತರ್ಪಣೆ, ಸಾಯಂಕಾಲ ಗಂಟೆ 8.30ಕ್ಕೆ “ಮಹಾ ರಥೋತ್ಸವ ” ನಡೆಯಲಿರುವುದು.

ಬೆಳಿಗ್ಗೆ 7.00 ರಿಂದ ರಾತ್ರಿ ಗಂಟೆ 7.00 ಗಂಟೆಯವರೆಗೆ ಶ್ರೀ ರಕೇಶ್ವರಿ ಭಜನಾ ಮಂಡಳಿ ಕುಂಟಾಡಿ ವತಿಯಿಂದ ಹಾಗೂ ಆಹ್ವಾನಿತ ಭಜನಾ ಮಂಡಳಿಗಳಿಂದ ಕುಣಿತ ಭಜನೆ ಕಾರ್ಯಕ್ರಮ,

ರಾತ್ರಿ ಗಂಟೆ 10.00 ರಿಂದ “ಡೆನ್ನಾನ”ಕಲಾವಿದರಿಂದ ಡೆನ್ನಾನ ಒಂಜಿ ಇಲ್ಲದ ಕಥೆ ತುಳು ನಾಟಕ
⭕ದಿನಾಂಕ: 18-04-2025ನೇ ಶುಕ್ರವಾರ ಬೆಳಿಗ್ಗೆ ಗಂಟೆ 9.00ಕ್ಕೆ "ತುಲಾಭಾರ ಸೇವೆ" ರಾತ್ರಿ ಗಂಟೆ 7.00ಕ್ಕೆ ರಂಗಪೂಜೆ ರಾತ್ರಿ ಗಂಟೆ 8.00ಕ್ಕೆ ಕಟ್ಟೆಪೂಜೆ, ಅವಭೃತ ಸ್ನಾನ, ಧ್ವಜಾವರೋಹಣ
⭕ದಿನಾಂಕ: 20-04-2025ನೇ ಆದಿತ್ಯವಾರ ಸಾಯಂ.ಗಂಟೆ 4.00ಕ್ಕೆ ಮಹಾಪೂಜೆ ಗಂಟೆ 5.00ಕ್ಕೆ ಶ್ರೀ ದೈವಗಳ ಭಂಡಾರ ನಿರ್ಗಮನ
⭕ದಿನಾಂಕ: 21-04-2025ನೇ ಸೋಮವಾರ ಹೊಳೆ ಪೂಜೆ ನಡೆದಿರುವುದು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಗದ್ಭಕ್ತರು ಆಗಮಿಸಿ ಶ್ರೀ ದೈವಗಳ ಸಿರಿಮುಡಿ ಗಂಧ- ಪ್ರಸಾದವನ್ನು ಸ್ವೀಕರಿಸಿ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಕೇಳಿಕೊಳ್ಳುವ-
ಆಡಳಿತ ಮಂಡಳಿ ಶ್ರೀ ರಕ್ತೇಶ್ವರಿ ದೈವಸ್ಥಾನ ಕುಂಟಾಡಿ ಹಾಗೂ ಗ್ರಾಮಸ್ಥರು-ಕುಂಟಾಡಿ .




Post a Comment