".

Header Ads

ಮದ್ಯದ ಅಮಲಿನಲ್ಲಿ ತನ್ನದೇ ಮನೆಗೆ ಬೆಂಕಿ ಇಟ್ಟ ಭೂಪ

 


ಮದ್ಯದ ಅಮಲಿನಲ್ಲಿ ತನ್ನದೇ ಮನೆಗೆ ಬೆಂಕಿ ಹಚ್ಚಿರುವ ಘಟನೆ ನಗರದ ಹೊರವಲಯದ ಚಿಟ್ಟಾಡಿಯಲ್ಲಿ  ನಡೆದಿದೆ.ಕುಡುಕನ ರಂಪಾಟವನ್ನು ಎದುರಿಸಲು, ಬೆಂಕಿ ನಂದಿಸಲು ಅಸಹಾಯಕರಾದ ಮನೆಯವರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಲ್ಲಿ ನೆರವಿಗೆ ಬರುವಂತೆ ಕೇಳಿಕೊಂಡಿದ್ದಾರೆ.

ತಕ್ಷಣವೇ ಸ್ಥಳಕ್ಕೆ ಧಾವಿಸಿದ ಒಳಕಾಡುರವರು ಅಗ್ನಿಶಾಮಕ ದಳದವರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಘಟನಾ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಾಸ್ವಿಯಾಗಿದ್ದಾರೆ.

ತಕ್ಷಣವೇ ಸ್ಥಳಕ್ಕಾಗಮಿಸಿ ಸಹಾಯ ಮಾಡಿದ ಒಳಕಾಡುರವರ ಸಮಯಪ್ರಜ್ಞೆಯಿಂದ ದೊಡ್ಡ ಪ್ರಮಾಣದಲ್ಲಿ ಆಗಬಹುದಾದ ದುರಂತ ತಪ್ಪಿದಂತಾಗಿದೆ. ಇನ್ನು, ಸಮಾಜಸೇವಕ ಒಳಕಾಡುವರು ಕುಡುಕನ‌‌ ಮೊನವೊಲಿಸಿ ಮದ್ಯವರ್ಜನ‌ ಕೇಂದ್ರಕ್ಕೆ ದಾಖಲುಪಡಿಸಿದ್ದಾರೆ.

Powered by Blogger.