".

Header Ads

ಗಾಯಕಿ ಅಖಿಲ ಪಜಿಮಣ್ಣು ದಾಂಪತ್ಯದಲ್ಲಿ ಬಿರುಕು; ಪುತ್ತೂರು ಕೋರ್ಟ್‌ನಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಕೆ

 


ಗಾಯಕಿ ಹಾಗೂ ನಿರೂಪಕಿ ಅಖಿಲಾ ಪಜಿಮಣ್ಣು ಸಂಸಾರ ಮುರಿದುಬಿದ್ದಿದೆ. ಕನ್ನಡ ಕೋಗಿಲೆ ಸೀಸನ್​ 1 ಹಾಗೂ ಸೀಸನ್​ 2 ರನ್ನರ್​ ಅಪ್​ ಆಗಿದ್ದ ಅಖಿಲಾ ತಮ್ಮ ಸುಮಧುರ ಕಂಠದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದರು.ಪುತ್ತೂರಿನವರಾದ ಅಖಿಲಾ, 2011 ರಲ್ಲಿ ಸರಿಗಮಪ ಲಿಟಲ್ ಚಾಂಪ್ಸ್‌ನಲ್ಲಿ ಕಾಣಿಸಿಕೊಂಡ ನಂತರ ಖ್ಯಾತಿಗೆ ಏರಿದ್ದರು. ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಅಮೆರಿಕದಲ್ಲಿ ವಾಸವಿದ್ದ ಧನಂಜಯ್‌ ಶರ್ಮ ಅವರನ್ನು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. 

ಧನಂಜಯ್‌ ಶರ್ಮ ಮೂಲತಃ ಮೈಸೂರಿನವರಾಗಿದ್ದು, ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಮೆರಿಕದ ಖಾಸಗಿ ಕಂಪನಿಯೊಂದರಲ್ಲಿ ಫರ್ಮ್‌ವೇರ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು.
ಇತ್ತೀಚೆಗೆ ಟೆಸ್ಲಾ ಕಾರು ಖರೀದಿ ಮಾಡಿಯೂ ಸುದ್ದಿಯಾಗಿದ್ದರು. ಟೆಸ್ಲಾ ಕಾರ್‌ನಲ್ಲಿ ಪತ್ನಿಯ ಜೊತೆಗೆ ಟ್ರಿಪ್‌ಗೆ ಹೋಗುವ ಚಿತ್ರಗಳನ್ನೂ ಅವರು ಹಂಚಿಕೊಂಡಿದ್ದರು. ಇದೀಗ ಇಬ್ಬರೂ ಒಪ್ಪಿಗೆಯಿಂದ ಈ ನಿರ್ಧಾರಕ್ಕೆ ಬಂದಿದ್ದು, ವಿಚ್ಛೇದನದ ಬಗ್ಗೆ ಅಧಿಕೃತವಾಗಿ ಕೋರ್ಟ್‌ನ ದಾಖಲೆಗಳೂ ಸಿಕ್ಕಿದ್ದು, ಜೂನ್‌ 12 ರಂದು ಇವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

Powered by Blogger.