ಬೆಂಗಳೂರಲ್ಲಿ ಕಾರ್ನಲ್ಲಿ ಸಿಂಗಲ್ ಡ್ರೈವಿಂಗ್ಗೆ ದಂಡ! ಡಿಕೆ ಶಿವಕುಮಾರ್ - ಏನಿದು ವಿವಾದ?
ಖಾಸಗಿ ಕಾರುಗಳಲ್ಲಿ ಏಕಾಂಗಿಯಾಗಿ ಪ್ರಯಾಣ ಮಾಡಿದರೆ ಇನ್ಮುಂದೆ ದಂಡ ವಿಧಿಸಲು ಅವಕಾಶ
ಖಾಸಗಿ ಕಾರುಗಳಲ್ಲಿ ಏಕಾಂಗಿಯಾಗಿ ಪ್ರಯಾಣ ಮಾಡಿದರೆ ಇನ್ಮುಂದೆ ದಂಡ ವಿಧಿಸಲು ಅವಕಾಶ ಇದೆ ಎಂಬ ವಿಚಾರ ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು. ಕೆಲವು ಉದ್ಯಮಿಗಳು ಕೊಟ್ಟ ಸಲಹೆಯನ್ನು ಸರ್ಕಾರ ಜಾರಿಗೆ ತರಲಿದೆ ಎಂಬ ಚರ್ಚೆಗಳು ಶುರುವಾಗಿದ್ದವು. ಪ್ರತಿಪಕ್ಷದ ನಾಯಕ ಆರ್ ಅಶೋಕ್ ಕೂಡಾ ಇದಕ್ಕೆ ಪ್ರತಿಕ್ರಿಯೆ ನೀಡಿ, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಇದಕ್ಕೆ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಟ್ರಾಫಿಕ್ ಸಮಸ್ಯೆಯನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಕಾರಿನಲ್ಲಿ ಒಬ್ಬರೆ ಪ್ರಯಾಣ ಮಾಡಿದರೆ ದಂಡ
ಟ್ರಾಫಿಕ್ ಸಮಸ್ಯೆಯನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಕಾರಿನಲ್ಲಿ ಒಬ್ಬರೆ ಪ್ರಯಾಣ ಮಾಡಿದರೆ ದಂಡ ವಿಧಿಸಲು ಸರ್ಕಾರ ಮುಂದಾಗಿದೆ ಎಂಬ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿದ್ದವು. ನಗರದ ಅತ್ಯಂತ ಹೆಚ್ಚು ದಟ್ಟಣೆ ಇರುವ ಪ್ರದೇಶಗಳಲ್ಲಿ ಇದನ್ನು ಸರ್ಕಾರ ಜಾರಿಗೆ ತರಲಿದೆ ಎಂದು ಹೇಳಲಾಗಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು.ಸ್ಪಷ್ಟನೆ ಕೊಟ್ಟ ಡಿಕೆಶಿ ಶಿವಕುಮಾರ್
ಏಕಾಂಗಿಯಾಗಿ ಕಾರಿನಲ್ಲಿ ಪ್ರಯಾಣ ಮಾಡಿದರೆ ದಂಡ ವಿಧಿಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ "ಅವೆಲ್ಲಾ ಸುಳ್ಳು, ಯಾವ ಟ್ಯಾಕ್ಸ್ ಇಲ್ಲ, ಯಾವ ಸಿಂಗಲ್ ಇಲ್ಲ. ಕೆಲ ಉದ್ಯಮಿಗಳು ಸಲಹೆ ಕೊಟ್ಟಿದ್ದಾರೆ ಅಷ್ಟೇ. ಅದು ನನ್ನ ಮಟ್ಟಕ್ಕೇನು ಬಂದಿಲ್ಲ, ಪರಿಶೀಲನೆ ಮಾಡ್ತೇವೆ" ಎಂದು ಸ್ಪಷ್ಟಪಡಿಸಿದ್ದಾರೆ.ಖಾಸಗಿ ಕಾರುಗಳು ಸಂಖ್ಯೆ ಏರಿಕೆ
ಬೆಂಗಳೂರಿನಲ್ಲಿ ಖಾಸಗಿ ಕಾರುಗಳು ಸಂಖ್ಯೆ ಏರಿಕೆಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ವಾಹನ ಖರೀದಿ ಮಾಡುತ್ತಿದ್ದಾರೆ. ದೆಹಲಿ ಈ ಹಿಂದೆ ನಂಬರ್ 1 ಇತ್ತು. ಆದರೆ ಇದೀಗ ಬೆಂಗಳೂರು ಕಾರುಗಳ ಖರೀದಿಯಲ್ಲಿ ನಂಬರ್ ಒನ್ ಆಗಿದೆ. ವಾಹನಗಳ ಸಂಖ್ಯೆಯಲ್ಲಿ ವಿಪರೀತ ಏರಿಕೆ ಆಗುತ್ತಿರುವುದು ಮಾಲಿನ್ಯ ಹೆಚ್ಚಳಕ್ಕೆ ಕಾರಣ ಆಗಬಹುದು ಎಂಬ ಆತಂಕವನ್ನು ಸೃಷ್ಟಿಸಿದೆ.
Post a Comment