".

Header Ads

ಉಡುಪಿ:- ಎಕೆಎಂಎಸ್‌ ಬಸ್‌ ಮಾಲೀಕ ಸೈಫುದ್ದೀನ್‌ ಹತ್ಯೆ

 

 


ಕರಾವಳಿಯ ಖ್ಯಾತ ಎಕೆಎಂಎಸ್‌ ಸಾರಿಗೆ ಸಂಸ್ಥೆಯ ಮಾಲೀಕ, ಉಡುಪಿ ಆತ್ರಾಡಿಯ ಉದ್ಯಮಿ ಸೈಪುದ್ದೀನ್ ಅವರನ್ನು ಶನಿವಾರ (ಸೆ.27) ಬೆಳಗ್ಗೆ ಹತ್ಯೆ ಮಾಡಲಾಗಿದೆ.

ಮಲ್ಪೆ- ಕೊಡವೂರು ರಸ್ತೆ ಪ್ರದೇಶದಲ್ಲಿ ಘಟನೆ ನಡೆದಿದೆ. ಘಟನೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ.

ಕೊಡವೂರಿನಲ್ಲಿ ಸೈಫುದ್ದೀನ್‌ ಇತ್ತೀಚೆಗೆ ಮನೆ ಖರೀದಿ ಮಾಡಿದ್ದು, ಮನೆಗೆ ನುಗ್ಗಿದ ಆರೋಪಿಗಳು ಕಡಿದು ಕೊಂದಿದ್ದಾರೆ ಎಂದು ಮೂಲಗಳು ತಿಳಿಸಿದೆ. ಮನೆಯಲ್ಲಿ ರಕ್ತ ತುಂಬಿ ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಮೂಲಗಳು ಮಾಹಿತಿ ನೀಡಿವೆ.

ಸೈಫುದ್ದೀನ್‌ ಸಹಚರರೇ ಈ ಹತ್ಯೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಪೊಲೀಸರು ಇನ್ನಷ್ಟೇ ಖಚಿತಪಡಿಸಬೇಕಿದೆ.

ಸೈಫುದ್ದೀನ್‌ ವಿರುದ್ದ ಈ ಹಿಂದೆಯೂ ದಾಳಿ ನಡೆದಿತ್ತು. ಕೆಲ ವರ್ಷಗಳ ಹಿಂದೆ ಉಡುಪಿ-ಮಣಿಪಾಲ ರಸ್ತೆಯಲ್ಲಿ ಒಮ್ಮೆ ದಾಳಿ ನಡೆದಿತ್ತು.

Powered by Blogger.