".

Header Ads

ಕರ್ನಾಟಕದ ಈ ಜಿಲ್ಲೆಗಳಲ್ಲಿ 48 ಗಂಟೆ ಚಂಡಮಾರುತ ಮಳೆ ಎಚ್ಚರಿಕೆ, ಉಡುಪಿ ಜಿಲ್ಲೆ ಯೆಲ್ಲೋ ಅಲರ್ಟ್

 

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹಲವು ದಿನಗಳಿಂದ ಸುರಿಯುತ್ತಿದ್ದ ಮಳೆಯು ಮುಂದಿನ ಎರಡರಿಂದ ಐದು ದಿನಗಳ ಕಾಲ ಮತ್ತೆ ಅಬ್ಬರಿಸಲಿದೆ. ಮೊಂಥಾ ಚಂಡಮಾರುತ ಇಂದು ಮಂಗಳವಾರ ಆಂಧ್ರಪ್ರದೇಶ ಕರಾವಳಿ ಭಾಗಕ್ಕೆ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

 

ಕರಾವಳಿ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಬರುವ ಕಾರಣಕ್ಕೆ ಇಂದು ಆರೆಂಜ್ ಅಲರ್ಟ್ ಹಾಗೂ ನಾಳೆ ಬುಧವಾರ ಇದೇ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಮಂಗಳೂರು, ಉಡುಪಿ ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ಭಾಗದ ಶಾಲೆ, ಕಾಲೇಜುಗಳಿಗೆ   ನಾಳೆ ರಜೆ ಘೋಷಣೆ ಆಗುವ ಸಾಧ್ಯತೆ ಇದೆ.

ಅದೇ ರೀತಿ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಿಕ್ಕಬಳ್ಳಾಪುರ, ಕೊಡಗು, ಕೋಲಾರ, ಮೈಸೂರು ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಇಲ್ಲಿ ಕನಿಷ್ಠ 65 ಮಿಲಿ ಮೀಟರ್‌ನಿಂದ 115ಮಿಲಿ ಮೀಟರ್‌ವರೆಗೆ ಭಾರೀ ಮಳೆ ಆಗಲಿದ್ದು, ಒಂದು ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ. ಮಳೆ ನಿರೀಕ್ಷಿತ ಪ್ರದೇಶಗಳಲ್ಲಿ ಮಬ್ಬು ವಾತಾವರಣ, ಚಳಿ ಎದುರಾಗಿದೆ.

ಹಿಂಗಾರು ಮಳೆ ಒಳನಾಡಿನ ಜಿಲ್ಲೆಗಳಲ್ಲಿ ಕಳೆದ 10 ದಿನಗಳಿಂದ ಅಬ್ಬರ ಶುರುವಿಟ್ಟುಕೊಂಡಿದೆ. ಆಗಾಗ ಬಿಸಿಲು ಮರೆಯಾಗುತ್ತಿದ್ದಂತೆ ಜಿಟಿ ಜಿಟಿ ರೂಪದಲ್ಲಿ ಆರಂಭವಾಗುವ ಮಳೆ, ಕೆಲವೆಡೆ ಗಂಟೆಗಳ ಕಾಲ ಸುರಿದಿದೆ. ಅನೇಕ ಜಿಲ್ಲೆಗಳು ಕಳೆದ ಒಂದೇ ವಾರದಲ್ಲಿ ಉತ್ತಮ ಹಿಂಗಾರು ಮಳೆ ಕಂಡಿವೆ.

Powered by Blogger.