ಉಡುಪಿ:-ಅಲೆವೂರು ಡಂಪಿಂಗ್ ಯಾರ್ಡ್ನಲ್ಲಿ ಅಗ್ನಿ ಅವಘಡ
ಅಲೆವೂರು ಡಂಪಿಂಗ್ ಯಾರ್ಡ್ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಿಂದಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.ಉಡುಪಿ ನಗರಸಭೆಗೆ ಸೇರಿದ ಡಂಪಿಂಗ್ ಯಾರ್ಡ್ನಲ್ಲಿ ಈ ದುರಂತ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದ ಸ್ಥಳಕ್ಕಾಗಮಿಸಿದ ಉಡುಪಿ ಅಗ್ನಿಶಾಮಕದಳದಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ. ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸುವ ಕಾರ್ಯ ನಡೆದಿದೆ.ಉಡುಪಿ ನಗರದ ಕಸ ಸಂಗ್ರಹಿಸಿ ಸಂಸ್ಕರಿಸುವ ಡಂಪಿಂಗ್ ಯಾರ್ಡ್ ಇದಾಗಿದೆ. ಬೆಂ*ಕಿಯ ಕೆನ್ನಾಲಿಗೆಗೆ ಅಲ್ಲಿದ್ದ ಬಹುತೇಕ ಸೊತ್ತುಗಳು ಆಹುತಿಯಾಗಿವೆ.
Post a Comment