ಉಡುಪಿ ನಗರದಲ್ಲಿ ಅಕ್ಷರಸಃ ಹಬ್ಬದ ವಾತಾವರಣ : ಎಲ್ಲರಿಗೂ ನಮಸ್ಕಾರ …ಜೈ ಶ್ರೀಕೃಷ್ಣ … ಪ್ರಧಾನಿ ಮೋದಿ
ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರ ವಿಶ್ವ ಗೀತಾ ಪರ್ಯಾಯದ ಭಾಗವಾಗಿ, ಆಯೋಜಿಸಲಾಗಿದ್ದ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ, ಬೃಹತ್ ಪ್ರಧಾನಿ ರೋಡ್ ಶೋ ನಡೆಸಿದ್ದರು.
ಪ್ರಧಾನಿ ಮೋದಿ ಮಾತಿಗೆ ಮುನ್ನ ಆಶೀರ್ವಚನವನ್ನು ನೀಡಿ ಮಾತನಾಡಿದ ಸುಗುಣೇಂದ್ರ ತೀರ್ಥರು, ಪ್ರಧಾನಿ ಮೋದಿಗೆ ವಿಶೇಷ ಮನವಿಯೊಂದನ್ನು ಸಲ್ಲಿಸಿದರು. ಅದು, ಕೃಷ್ಣ ಕಾರಿಡಾರ್ ಯೋಜನೆಗೆ ಪ್ರಸ್ತಾವನೆಯನ್ನು ಶ್ರೀಗಳು ಸಲ್ಲಿಸಿದರು. ಶ್ರೀಗಳು, ಸಂಸ್ಕೃತದಲ್ಲಿ ಭಾಷಣವನ್ನು ಮಾಡಿದರು.
ಉಡುಪಿ ಪುತ್ತಿಗೆ ಮಠದ ಶ್ರೀಗಳು, ಪ್ರಧಾನಿಗೆ ಪೇಟ ತೊಡಿಸಿ, ಶಾಲು ಮತ್ತು ತುಳಸಿಮಣಿ ಸರವನ್ನು ಹಾಕಿ, ಕೃಷ್ಣನ ನವಿಲು ಇರುವ ಕಿರೀಟ, ಬೆಳ್ಳಿಯ ಕಡಗೋಲು ಅನ್ನು ನೀಡಿದರು. ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಎಲ್ಲರಿಗೂ ನಮಸ್ಕಾರ… ಎಂಬುದಾಗಿ ಕನ್ನಡದಲ್ಲಿ ಮಾತು ಆರಂಭಿಸಿದರು. ಜೈ ಶ್ರೀಕೃಷ್ಣ ಎಂದು ಮೂರು ಬಾರಿ ಉದ್ಘರಿಸಿದರು.
ವಿಶೇಷ ಅಂದ್ರೆ, ತಮ್ಮ ಭಾವಚಿತ್ರ ಹಿಡಿದು ನಿಂತಿದ್ದ ಮಕ್ಕಳಿಂದ ಅವುಗಳನ್ನು ಪಡೆದುಕೊಳ್ಳುವಂತೆ ಎಸ್‌ಪಿಜಿ ಅವರಿಗೆ ಮೋದಿ ಸೂಚಿಸಿದರು. ಹಿಂಬದಿಯಲ್ಲಿ ವಿಳಾಸ ಬರೆಯಿರಿ. ನಾನು ಅಭಿನಂದನಾ ಪತ್ರ ಕಳಿಸುವೆ ಎಂದರು.
ಬಳಿಕ ಮಾತು ಆರಂಭಿಸಿದ ಅವರು, ಉಡುಪಿ ಶ್ರೀ ಕೃಷ್ಣರ ದಿವ್ಯ ದರ್ಶನದಿಂದ ಆತ್ಮೀಯ ಆಧ್ಯಾತ್ಮಿಕ ಆನಂದ ಸಿಕ್ಕಿದೆ. ಒಂದು ಲಕ್ಷ ಜನರು ಒಂದೆಡೆ ಸೇರಿ ಭಗವದ್ಗೀತೆ ಪಠಿಸುವ ಮೂಲಕ ಭಗವಂತನ ದಿವ್ಯ ಅನುಭೂತಿ ಪಡೆದಂತಾಗಿದೆ. ಹಾಗೇ ಇಷ್ಟೊಂದು ಮಂದಿ, ಗುರುಗಳ ಉಪಸ್ಥಿತಿ ನನ್ನ ಸೌಭಾಗ್ಯ. ನನಗೆ ಇಷ್ಟು ಆಶೀರ್ವಾದ ಸಿಕ್ಕಿರುವುದಕ್ಕೆ ನಾನು ಯೋಗ್ಯನಾಗಲಿ, ಇನ್ನಷ್ಟು ಕೆಲಸ ಮಾಡುವ, ನನ್ನ ಮೇಲಿರುವ ವಿಶ್ವಾಸ ಪೂರ್ಣಗೊಳಿಸುವ ಶಕ್ತಿ ಸಿಗಲಿ ಎಂದರು.
ನನ್ನ ಜನ್ಮ ಗುಜರಾತ್ ನಲ್ಲಿ ಆಯಿತು. ಗುಜರಾತ್ ಮತ್ತು ಉಡುಪಿ ನಡುವೆ ವಿಶೇಷ ಸಂಬಂಧವಿದೆ. ಇಲ್ಲಿ ಸ್ಥಾಪನೆ ಮಾಡಿರುವ ಕೃಷ್ಣನ ಮೂರ್ತಿಯ ಪೂಜೆ ಮೊದಲು ದ್ವಾರಕದಲ್ಲಿ ರುಕ್ಮಿಣಿ ಮಾಡುತ್ತಿದ್ದರು. ಮತ್ತೆ ಮಧ್ವಾಚಾರ್ಯರು ಇಲ್ಲಿ ಸ್ಥಾಪನೆ ಮಾಡಿದ್ದರು. ಈ ವಿಗ್ರಹದ ದರ್ಶನದಿಂದ ಆತ್ಮೀಯ ಆಧ್ಯಾತ್ಮಿಕ ಆನಂದ ನೀಡಿದೆ ಎಂದು ಪ್ರಧಾನಿ ಹೇಳಿದರು.ಮತ್ತೊಂದು ವಿಚಾರದಲ್ಲಿ ಉಡುಪಿಗೆ ಬರುವುದು ನನಗೆ ವಿಶೇಷವಾಗಿದೆ. ಉಡುಪಿ ಜನಸಂಘ ಮತ್ತು ಬಿಜೆಪಿಯ ಕರ್ಮಭೂಮಿಯಾಗಿದೆ. 1968 ರಲ್ಲಿ, ಉಡುಪಿಯ ಜನರು ಜನಸಂಘದ ವಿ.ಎಸ್. ಆಚಾರ್ಯ ಅವರನ್ನು ಉಡುಪಿ ನಗರಸಭೆಗೆ ಆಯ್ಕೆ ಮಾಡಿದರು. ಇದರೊಂದಿಗೆ, ಉಡುಪಿ ಹೊಸ ಆಡಳಿತ ಮಾದರಿಗೆ ಅಡಿಪಾಯ ಹಾಕಿತು. ಇಂದು ನಾವು ಸ್ವಚ್ಛತಾದ ಯಾವ ಅಭಿಯಾನವನ್ನು ರಾಷ್ಟ್ರೀಯ ರೂಪದಲ್ಲಿ ನೋಡುತ್ತಿದ್ದೇವೋ ಅದನ್ನು ಉಡುಪಿ ಐದು ದಶಕಗಳ ಹಿಂದೆಯೇ ತನ್ನದಾಗಿಸಿಕೊಂಡಿತ್ತು ಎಂದು ದಿವಂಗತ ವಿ ಎಸ್ ಆಚಾರ್ಯರನ್ನು ಸ್ಮರಿಸಿದರು.ರಾಮಚರಿತ ಮಾನಸದ ಉಲ್ಲೇಖ ಮಾಡಿದ ಅವರು, ಕಲಿಯುಗದಲ್ಲಿ ಗೀತೆಯ ಕೀರ್ತನೆಯಿಂದ ಸಾಧನೆ ಸಾಧ್ಯ. ಈ ಮಂತ್ರ ಪಠಣದಿಂದ ಮುಕ್ತಿ ಸಾಧ್ಯ ಎಂದರು. ಪರಮಪೂಜ್ಯ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಲಕ್ಷ ಕಂಠ ಗೀತೆಯನ್ನು ದಿವ್ಯರೂಪದಿಂದ ಸಾಕಾರ ಮಾಡಿದ್ದಾರೆ. ಕೋಟಿ ಗೀತಾ ಲೇಖನ ಯಜ್ಞದಿಂದ ಜನರಿಗೆ ಗೀತೆ ಬರೆಯುವ ಅವಕಾಶ ನೀಡಿದ್ದಾರೆ. ಇದು ಸನಾತನ ಪರಂಪರೆಯ ಜನಾಂದೋಲನವಾಗಿದೆ. ಭಗವದ್ಗೀತೆಯೊಂದಿಗೆ ನವಪೀಳಿಗೆಯನ್ನು ಜೋಡಿಸುವ ಸತ್ಕಾರ್ಯ ಇದು ಎಂದರು.ಅಯೋಧ್ಯೆಯ ರಾಮ ಮಂದಿರದಲ್ಲಿ ಧರ್ಮ ಧ್ವಜ ಸ್ಥಾಪನೆಯಾಗಿದೆ. ಅಯೋಧ್ಯೆಯಿಂದ ಉಡುಪಿ ವರೆಗೆ ರಾಮಭಕ್ತರಿದ್ದಾರೆ. ರಾಮ ಮಂದಿರ ಆಂದೋಲನದಲ್ಲಿ ಉಡುಪಿಯ ಕೊಡುಗೆ ಲೋಕಕ್ಕೆ ಗೊತ್ತು. ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ಉಡುಪಿಯ ಶ್ರೀವಿಶ್ವೇಶತೀರ್ಥರು ಹೊಸ ದಿಕ್ಕನ್ನು ತೋರಿಸಿ ಕೊಟ್ಟಿದ್ದರು. ಮತ್ತೊಂದು ವಿಶೇಷ ಎಂದರೆ ಹೊಸ ರಾಮ ಮಂದಿರಲ್ಲಿ ಮಧ್ವಾಚಾರ್ಯರ ಹೆಸರಿನಲ್ಲಿ ವಿಶಾಲ ದ್ವಾರವು ಇದೆ ಎಂದರು.
" ಇದು ವಿಶ್ವ ಗೀತಾ ಪರ್ಯಾಯ, ಈ ಪರ್ಯಾಯಕ್ಕೆ ವಿಶ್ವ ನಾಯಕ ಬಂದಿರುವುದು ನಮಗೆ ಸಂತಸ : ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಗಳು
" ಇದು ವಿಶ್ವ ಗೀತಾ ಪರ್ಯಾಯ, ಈ ಪರ್ಯಾಯಕ್ಕೆ ವಿಶ್ವ ನಾಯಕ ಬಂದಿರುವುದು ನಮಗೆ ಸಂತಸ ತಂದಿದೆ. ಮೋದಿಯವರಿಂದ ಧರ್ಮದ ರಕ್ಷಣೆ ನಡೆಯಲಿ. ಮೋದಿ ರಕ್ಷಿತಃ ರಕ್ಷಿತ, ಶ್ರೀಕೃಷ್ಣಾನುಗ್ರಹ ರೂಪದಲ್ಲಿ ಈ ದಿನ ನಾವು, 'ಭಾರತ ಭಾಗ್ಯವಿದಾತ' ಎನ್ನುವ ಬಿರುದನ್ನು ಅವರಿಗೆ ನೀಡುತ್ತಿದ್ದೇವೆ. ವಾರಣಾಸಿ ಕಾರಿಡಾರ್ ನಂತೆ, ಉಡುಪಿಯಲ್ಲಿ ಶ್ರೀಕೃಷ್ಣ ಕಾರಿಡಾರ್ ನಿರ್ಮಿಸಬೇಕು ಎನ್ನುವುದು ನಮ್ಮ ಆಶಯ" ಎಂದು ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಶ್ರೀಗಳು ಹೇಳಿದ್ದಾರೆ.

Post a Comment