Home
>
Unlabelled
>
ಬೈಲೂರು:- ಬಸ್ರಿ ಸಮೀಪದ ಅರಣ್ಯ ಅಂಚು ಪ್ರದೇಶದಲ್ಲಿ ಅನಾಗರಿಕರು ಎಸೆಯುವ ಪ್ಲಾಸ್ಟಿಕ್ ಬಾಟಲುಗಳು, ಮದ್ಯದ ಬಾಟಲುಗಳು:ಸಂಬಂಧಪಟ್ಟ ಇಲಾಖೆ ಕ್ರಮವಹಿಸಬೇಕು ಎಂದು ಆಕ್ರೋಶ
ಬೈಲೂರು:- ಬಸ್ರಿ ಸಮೀಪದ ಅರಣ್ಯ ಅಂಚು ಪ್ರದೇಶದಲ್ಲಿ ಅನಾಗರಿಕರು ಎಸೆಯುವ ಪ್ಲಾಸ್ಟಿಕ್ ಬಾಟಲುಗಳು, ಮದ್ಯದ ಬಾಟಲುಗಳು:ಸಂಬಂಧಪಟ್ಟ ಇಲಾಖೆ ಕ್ರಮವಹಿಸಬೇಕು ಎಂದು ಆಕ್ರೋಶ
ಪ್ರಕೃತಿಯ ಸೌಂದರ್ಯಕ್ಕೆ ಹೆಸರುವಾಸಿಯಾದ ಈ ಅರಣ್ಯ ಮಾರ್ಗವು ಪ್ರಾಣಿ, ಪಕ್ಷಿ,ಜಾನುವಾರುಗಳ ಆಶ್ರಯ ಸ್ಥಳವಾಗಿದ್ದು, ಅರಣ್ಯ ಜೀವಿಗಳಿಗೆ ನೀರಿನ ಮೂಲವೂ ಆಗಿದೆ. ಆದರೆ ಪ್ಲಾಸ್ಟಿಕ್ ಹಾಗೂ ಗಾಜಿನ ಬಾಟಲುಗಳು ಅರಣ್ಯದಲ್ಲಿನ ಮಣ್ಣಿನ ಗುಣಮಟ್ಟ ಹಾಳುಮಾಡುವ ಜೊತೆಗೆ ಕಾಡುಪ್ರಾಣಿಗಳಿಗೆ ಅಪಾಯವ ಉಂಟು ಮಾಡುವ ಸಾಧ್ಯತೆ ಇದೆ.
ಸ್ಥಳೀಯ ನಿವಾಸಿಗಳು ಪ್ರತಿ ವಾರವೂ ಹೊಸ ತ್ಯಾಜ್ಯ ಕಾಣುತ್ತಿದೆ. ರಾತ್ರಿ ಸಮಯದಲ್ಲಿ ವಾಹನಗಳಲ್ಲಿ ಬಂದು ಪಾರ್ಟಿ ಮಾಡುವವರ ಕೃತ್ಯ ಇದು. ಸಂಬಂಧಪಟ್ಟ ಇಲಾಖೆ ಕ್ರಮವಹಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತ್ಯಾಜ್ಯ ಎಸೆಯುವ ಕೃತ್ಯ ಕಾರ್ಕಳ-ಮಾಳ, ಕಾರ್ಕಳ-ಹೊಸ್ಮಾರು, ಬೈಲೂರು-ಹಿರಿಯಡಕ ರಸ್ತೆ ಅರಣ್ಯ ಭಾಗದಲ್ಲಿ ಪ್ರವಾಸಿಗರು, ಕೆಲವು ಸ್ಥಳೀಯರು ವ್ಯಾಪಕವಾಗಿ ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವ ಪ್ರವೃತ್ತಿ ಹೆಚ್ಚುತ್ತಿದೆ. ಈ ಕೃತ್ಯದ ವಿರುದ್ದ ಅರಣ್ಯ ಇಲಾಖೆ, ಸ್ಥಳೀಯ ಗ್ರಾ. ಪಂ. ಸೂಕ್ತ ಕ್ರಮ ಜರಗಿಸಬೇಕು ಎಂದು ಪರಿಸರ ತಜ್ಞರು, ಹೋರಾಟಗಾರರು ಆಗ್ರಹಿಸಿದ್ದಾರೆ.

Post a Comment