12 ಗಂಟೆಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಮೋದಿ ಭೇಟಿ, ಬೆಳಿಗ್ಗೆ 11:00 ಗಂಟೆಯಿಂದ ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ - ಡ್ರೋನ್ ಹಾರಾಟ ನಿಷೇಧ, ಸಂಚಾರ ಮಾರ್ಗ ಬದಲಾವಣೆ
ಶ್ರೀಕೃಷ್ಣ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಅವರನ್ನು ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಧ್ಯಾಹ್ನ 12 ಗಂಟೆಗೆ ಪ್ರಧಾನಿಯವರು ಕೃಷ್ಣಮಠಕ್ಕೆ ಬರಲಿದ್ದು, ಮೊದಲು ಕನಕದಾಸರಿಗೆ ಪುಷ್ಪಾರ್ಚನೆ ಮಾಡುವರು ಬಳಿಕ ಕನಕನ ಕಿಂಡಿಗೆ ಹೊದಿಸಿರುವ ಚಿನ್ನದ ಕವಚ, ಸುವರ್ಣ ತೀರ್ಥ ಮಂಟಪವನ್ನು ಅನಾವರಣಗೊಳಿಸಲಿದ್ದಾರೆ.
ಪೂರ್ಣಕುಂಭ ಸ್ವಾಗತದೊಂದಿಗೆ ಪ್ರಧಾನಿಯವರನ್ನು ಬರಮಾಡಿಕೊಳ್ಳಲಿದ್ದು ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಹಾಗೂ ಸುವರ್ಣ ಪಾದುಕೆಯ ದರ್ಶನ ಮಾಡಲಿದ್ದಾರೆ. ಬಳಿಕ ಅವರಿಗೆ ದೇವರ ಪ್ರಸಾದ ನೀಡಲಾಗುವುದು ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಸರ್ವಜ್ಞ ಪೀಠ, ಗೋಶಾಲೆ ದರ್ಶನ ಮಾಡಿದ ಬಳಿಕ ಅವರು ಗೀತಾಮಂದಿರಕ್ಕೆ ಭೇಟಿ ನೀಡುವರು. ಅಲ್ಲಿ ಲಘು ಉಪಾಹಾರ ಸೇವಿಸುವರು. ಬಳಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಲಕ್ಷ ಕಂಠ ಗೀತಾ ಕಾರ್ಯಕ್ರಮದ ಅಂಗವಾಗಿ ಭಗವದ್ಗೀತೆಯ 18ನೇ ಅಧ್ಯಾಯದ ಕೊನೆಯ ಕೆಲವು ಶ್ಲೋಕಗಳನ್ನು ಪಠಿಸುವರು.ಶ್ಲೋಕಗಳ ಪಾರಾಯಣದ ಬಳಿಕ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಮೋದಿ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ. ಮೋದಿಯವರು ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆಯನ್ನೂ ಪಡೆಯುವರು ಎಂದು ತಿಳಿಸಿದರು.
ಮೋದಿ ಸಂಚರಿಸುವ ಮಾರ್ಗದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ - ಡ್ರೋನ್ ಹಾರಾಟ ನಿಷೇಧ
ಹೆಲಿಪ್ಯಾಡ್ ವಠಾರ, ಶ್ರೀ ಕೃಷ್ಣ ಮಠ ವಠಾರ, ಪ್ರವಾಸಿ ಮಂದಿರದ ಸುತ್ತಮುತ್ತ ಹಾಗೂ ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಅಂಗಡಿ ಮುಂಗಟ್ಟುಗಳನ್ನ ಮುಚ್ಚಲು ಆದೇಶದಲ್ಲಿ ಸೂಚಿಸಿದ್ದಾರೆ. ಅಲ್ಲದೇ ನವೆಂಬರ್ 28ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಬಂದ್ ಇರಬೇಕು. ನವಂಬರ್ 28 ಸಂಜೆ 6 ಗಂಟೆಯವರೆಗೆ ನಗರದ 5 ಕಿ.ಮೀ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟ ನಿಷೇಧಿಸಿದ್ದು, ಉಡುಪಿಯನ್ನ ನೋ ಫ್ಲೈ ಝೋನ್ ಎಂದು ಘೋಷಿಸಲಾಗಿದೆ.
ಭದ್ರತಾ ವ್ಯವಸ್ಥೆಗೆ 3000ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ. 10 ಎಸ್‌ಪಿ, 27 ಡಿವೈಎಸ್‌ಪಿ, 49 ಇನ್ಸ್ಪೆಕ್ಟರ್ಸ್, 127 ಎಸ್ಐ, 232 ಎಎಸ್ಐ, 1608 ಪಿಸಿ, 39 ಡಬ್ಲ್ಯೂ ಪಿ ಸಿ ಗಳ ಜೊತೆಗೆ 48 ಬಿಡಿಡಿಎಸ್ ಟೀಂ, ಆರು ಕೆಎಸ್‌ಆರ್‌ಪಿ, ಆರು ಕ್ಯೂಆರ್‌ಟಿ ಟೀಮ್ ನಿಯೋಜನೆ ಮಾಡಲಾಗಿದೆ.ದಕ್ಷಿಣ ಕನ್ನಡ, ಉತ್ತರ ಕನ್ನಡ, ದಾವಣಗೆರೆ, ಮೈಸೂರು, ಬೆಂಗಳೂರು ಶಿವಮೊಗ್ಗದಿಂದ ಪೊಲೀಸರನ್ನು ಇಲ್ಲಿ ನೇಮಿಸಿದ್ದು, ರೋಡ್ ಶೋ ಮಾರ್ಗದಲ್ಲಿ ಕಟ್ಟೆಚ್ಚರ ವಹಿಸಲಿದ್ದಾರೆ. ರೋಡ್ ಶೋ ಮಾರ್ಗದುದ್ದಕ್ಕೂ ಪೊಲೀಸರಿಂದ ನಿರಂತರ ತಪಾಸಣೆ ನಡೆಯಲಿದ್ದು, ನಗರದ ಎಲ್ಲಾ ಕಡೆ ಬಾಂಬ್ ಸ್ಕ್ವ್ಯಾಡ್ ಗಳು ತಪಾಸಣೆ ನಡೆಸಿದ್ದಾರೆ.ಪ್ರಧಾನಿ ಮೋದಿ ಅವರು ಬಂದು ಇಳಿಯುವ ಹೆಲಿಪ್ಯಾಡ್, ರೋಡ್ ಶೋ ನಡೆಸುವ ಮಾರ್ಗ, ಕೃಷ್ಣಮಠ ಮತ್ತು ಸಮಾವೇಶ ಸ್ಥಳದ ಭೇಟಿಯ ರಿಹರ್ಸಲ್ ಇಂದು ನಡೆಸಲಾಯಿತು. ಮೋದಿ ಸಾಗುವ ರೂಟ್‌ನಲ್ಲಿ ಮತ್ತು ಕಾರ್ಯಕ್ರಮ ನಡೆಯುವ ವೇದಿಕೆಯ ಬಗ್ಗೆ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಭದ್ರತೆಯ ದೃಷ್ಟಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಾರ್ವಜನಿಕರು ಜಮಾಯಿಸುವ ಪ್ರಮುಖ ಜಂಕ್ಷನ್‌ನಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಇಂದು ಅಣಕು ಡ್ರಿಲ್ ಕಾರ್ಯಾಚರಣೆ ನಡೆಯಿತು.
ಸಂಚಾರ ಸಲಹೆಗಳು:-
1.ಸನ್ಮಾನ್ಯ ಪ್ರಧಾನ ಮಂತ್ರಿಗಳ ರೋಡ್ ಶೋ ಹಾಗೂ ಕಾರ್ಯಕ್ರಮದ ರಸ್ತೆಯಲ್ಲಿ ಸಂಚಾರ ನಿರ್ಭಂದಿಸಲಾಗಿದೆ.
2.ಮಂಗಳೂರಿನಿಂದ ಕುಂದಾಪುರದ ಕಡೆಗೆ ಚಲಿಸುವ ಲಘು ವಾಹನಗಳು ಉದ್ಯಾವರ - ಮಲ್ಪೆ - ಕೊಡವೂರು -ಆಶೀರ್ವಾದ್ ಜಂಕ್ಷನ್ ಮಾರ್ಗ ವಾಗಿ ಸಂಚರಿಸುವುದು
3. ಕುಂದಾಪುರದಿಂದ ಮಂಗಳೂರಿನ ಕಡೆಗೆ ಚಲಿಸುವ ಲಘು ವಾಹನಗಳು ಅಂಬಾಗಿಲು - ಪೆರಂಪಳ್ಳಿ - ಮಣಿಪಾಲ-ರಾಂಪುರ - ಅಲೆವೂರು - ಕಟಪಾಡಿ ಮಾರ್ಗವಾಗಿ ಸಂಚರಿಸುವುದು.
4. ಮಲ್ಪೆಯಿಂದ ಮಂಗಳೂರಿನ ಕಡೆಗೆ ಚಲಿಸುವ ಲಘು ವಾಹನಗಳು ಮಲ್ಪೆ - ಕಲ್ಮಾಡಿ - ಕಿದಿಯೂರು - ಕಡೆಕಾರ್ -ಉದ್ಯಾವರ - ಕಟಪಾಡಿ ಮಾರ್ಗವಾಗಿ ಸಂಚರಿಸುವುದು. ಅಥವಾ ಮಲ್ಪೆ - ಪಡುಕೆರೆ -ಮಟ್ಟು- ಕಾಪು ಮಾರ್ಗವಾಗಿ ಸಂಚರಿಸುವುದು.
5. ಮಲ್ಪೆಯಿಂದ ಕುಂದಾಪುರದ ಕಡೆಗೆ ಚಲಿಸುವ ಲಘು ವಾಹನಗಳು ಮಲ್ಪೆ- ಕೊಡವೂರು - ಆಶೀರ್ವಾದ ಜಂಕ್ಷನ್-ರೋಬೊಸಾಫ್ಟ್. ಮಾರ್ಗವಾಗಿ ಅಥವಾ ನೇಜಾರು - ಸಂತೆಕಟ್ಟೆ ಮಾರ್ಗವಾಗಿ ಸಂಚರಿಸುವುದು.
6. ಮಂಗಳೂರು ಕಡೆಯಿಂದ ಘನ ವಾಹನಗಳು ಕಟಪಾಡಿಯಿಂದ ಹಿಂದೆ ಸರ್ವೀಸ್ ರಸ್ತೆಯಲ್ಲಿ ನಿಲುಗಡೆ ಮಾಡುವುದು.
7. ಕುಂದಾಪುರ ಕಡೆಯಿಂದ ಘನ ವಾಹನಗಳು ಸಂತೆಕಟ್ಟೆಯಿಂದ ಹಿಂದೆ ಸರ್ವೀಸ್ ರಸ್ತೆಯಲ್ಲಿ ನಿಲುಗಡೆ ಮಾಡುವುದು.
ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳ ಸಂಚಾರ ಹಾಗೂ ಪಾರ್ಕಿಂಗ್ ಸಲಹೆಗಳು
1. ಕುಂದಾಪುರ ಕಡೆಯಿಂದ ರೋಡ್ ಶೋ ಗೆ ಆಗಮಿಸುವ ವಾಹನಗಳು ಅಂಬಾಗಿಲು ಮಾರ್ಗವಾಗಿ ನಿಟ್ಟೂರು ಬಳಿ ಜನರನ್ನು ಇಳಿಸಿ ಸಿಲಾಸ್ ಶಾಲಾ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು ಅಥವಾ ಜನರನ್ನು ರಸಿಕ ಬಾರ್ ಬಳಿ ಇಳಿಸಿ ಎಂ.ಜಿ.ಎಂ ಬಳಿ ಪಾರ್ಕಿಂಗ್ ಮಾಡುವುದು.
2. ಕುಂದಾಪುರ ಕಡೆಯಿಂದ ಲಕ್ಷಕಂಠ ಗೀತೊತ್ಸವಕ್ಕೆ ಆಗಮಿಸುವ ವಾಹನಗಳು ಅಂಬಾಗಿಲು ಪೆರಂಪಳ್ಳಿ-ದೊಡ್ಡನಗುಡ್ಡೆ ಮಾರ್ಗವಾಗಿ ಎಂ.ಜಿ.ಎಂ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು.
3.ಹೆಬ್ರಿ, ಹಿರಿಯಡಕ ಕಡೆಯಿಂದ ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳು ಮಣಿಪಾಲ ಮಾರ್ಗವಾಗಿ ಶಾರದಾ ಕಲ್ಯಾಣ ಮಂಟಪದ ಬಳಿ ಎಡಕ್ಕೆ ತಿರುಗಿ ಬೀಡನಗುಡ್ಡೆ ಸ್ಟೇಡಿಯಂನಲ್ಲಿ ಪಾರ್ಕಿಂಗ್ ಮಾಡುವುದು.
4. ಕಾರ್ಕಳ ಮೂಡುಬೆಳ್ಳೆ ಮಾರ್ಗವಾಗಿ ಲಕ್ಷಕಂಠ ಗೀತೊತ್ಸವಕ್ಕೆ ಆಗಮಿಸುವ ವಾಹನಗಳು ಅಲೆವೂರು - ಕುಕ್ಕಿಕಟ್ಟೆ ಮಾರ್ಗವಾಗಿ ಬೀಡನಗುಡ್ಡೆ ಪ್ರದರ್ಶನ ಕ್ರೀಡಾಂಗಣದಲ್ಲಿ ಪಾರ್ಕಿಂಗ್ ಮಾಡುವುದು.
5. ಕಾರ್ಕಳ ಕಡೆಯಿಂದ ರೋಡ್ ಶೋ ಗೆ ಆಗಮಿಸುವ ವಾಹನಗಳು ಮಣಿಪಾಲ ಮಾರ್ಗವಾಗಿ ಶಾರದಾ ಕಲ್ಯಾಣ ಮಂಟಪದ ಬಳಿ ಜನರನ್ನು ಇಳಸಿ ಬೀಡನಗುಡ್ಡೆ ಸ್ಟೇಡಿಯಂನಲ್ಲಿ ಪಾರ್ಕಿಂಗ್ ಮಾಡುವುದು.
5.ಮಂಗಳೂರು ಕಡೆಯಿಂದ ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳು, ಕಟಪಾಡಿ ಬೈಲೂರು ಮುದ್ದಣ್ಣ ಎಸ್ಟೇಟ್ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು. ಉದ್ಯಾವರ ಮಾರ್ಗವಾಗಿ-
6. ಮಲ್ಪೆ ಕಡೆಯಿಂದ ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳು ಅಂಬಲಪಾಡಿ ಮಾರ್ಗವಾಗಿ ಶಾಮಿಲಿ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು.

Post a Comment