".

Header Ads

ಕಾಲೇಜು ತಪ್ಪಿಸಬೇಡ, ಚೆನ್ನಾಗಿ ಓದು ಬುದ್ದಿವಾದ ಹೇಳಿದ್ದ ಪೋಷಕರು : ಅಪ್ಪಾ , ಪ್ರೀತ್ಸೋದ್ ತಪ್ಪಾ? -ಡೆತ್ ನೋಟ್ ಬರೆದು ನೇಣಿಗೆ ಶರಣಾದ ಯುವತಿ!

 


ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳಿಗೆ ಬುದ್ದಿವಾದ ಹೇಳುವುದು ತಪ್ಪು ಎನ್ನುವ ರೀತಿ ಆಗಿದೆ. ಇದೀಗ ಚೆನ್ನಾಗಿ ಓದಬೇಕು, ಕಾಲೇಜು ತಪ್ಪಿಸಬಾರದು ಎಂದು ಮನೆಯಲ್ಲಿ ಬುದ್ದಿ ಹೇಳಿದ ಕಾರಣಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿನಿ ಒಬ್ಬಳು ಕೆರೆಗೆ  ಬಿದ್ದು ಆತ್ಮಹತ್ಯೆ  ಮಾಡಿಕೊಂಡಿರುವ ಘಟನೆ ಗದಗ   ಜಿಲ್ಲೆಯಲ್ಲಿ ನಡೆದಿದೆ.

 
ಗದಗ ಜಿಲ್ಲೆಯ ಮುಖ್ಯ ಭಾಗದಲ್ಲಿ ಇರುವ ಭೀಷ್ಮ ಕೆರೆಯಲ್ಲಿ ವಿದ್ಯಾರ್ಥಿನಿ ಮುಳುಗಿ ಜೀವ ಕಳೆದುಕೊಂಡಿದ್ದು, ಮೃತ ವಿದ್ಯಾರ್ಥಿನಿಯನ್ನ 21 ವರ್ಷದ ಚಂದ್ರಿಕಾ ನಡುವಿನಮನಿ ಎಂದು ಗುರುತಿಸಲಾಗಿದೆ. ಚಂದ್ರಿಕಾ ಗದಗ ನಗರದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಫೈನಲ್ ಇಯರ್ ವಿದ್ಯಾರ್ಥಿನಿ ಎನ್ನಲಾಗಿದೆ.

 

ಇನ್ನು ಮಾಹಿತಿಗಳ ಪ್ರಕಾರ, ಚಂದ್ರಿಕಾ ಮೂಲತಃ ಬಾಗಲಕೋಟೆ ಜಿಲ್ಲೆಯ ಶಿರೂರು ಗ್ರಾಮದ ನಿವಾಸಿ ಆಗಿದ್ದು, ಆಕೆ ನಗರದ ಸಂಭಾಪೂರ ರಸ್ತೆಯ ಲಕ್ಷ್ಮೀ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ಗೆಳತಿಯರ ಜೊತೆ ವಾಸ ಮಾಡುತ್ತಿದ್ದಳು. ಫ್ರೆಂಡ್ಸ್ ಜೊತೆ ಟ್ರಿಪ್‌ ಹೋಗಿದ್ದಳು. ಆದರೆ ಟ್ರಿಪ್‌ ಹೋಗಿರುವ ವಿಚಾರ ಮನೆಯಲ್ಲಿ ಯಾರಿಗೂ ಹೇಳಿರಲಿಲ್ಲ. ಆದರೆ ಆ ವಿಚಾರ ಮನೆಯಲ್ಲಿ ಗೊತ್ತಾಗಿದೆ. ಅವರು ಕರೆ ಮಾಡಿ ಓದುವುದ ಬಿಟ್ಟು, ಕಾಲೇಜಿಗೂ ಹೋಗದೇ, ಮನೆಯಲ್ಲಿ ಕೂಡ ಹೇಳದೇ ಯಾಕೆ ಟೂರ್‌ ಹೋಗಿದ್ದು ಎಂದು ಚೆನ್ನಾಗಿ ಬೈದು ಬುದ್ದಿವಾದ ಹೇಳಿದ್ದಾರೆ. ಇದರಿಂದ ಚಂದ್ರಿಕಾ ಮನಸ್ಸಿಗೆ ತುಂಬಾ ನೋವಾಗಿದೆ. ಶನಿವಾರ ರಾತ್ರಿ 1:30 ರ ಸುಮಾರಿಗೆ ರೂಮ್‌ ನಿಂದ ಹೊರಗೆ ಹೋಗಿ ಭೀಷ್ಮ ಕೆರೆಗೆ ಜಿಗಿದು ಸಾವನ್ನಪ್ಪಿದ್ದಾಳೆ. ಇಂದು ಆಕೆ ಶವವಾಗಿ ಪತ್ತೆ ಆಗಿದ್ದಾಳೆ.

ಸ್ಥಳಕ್ಕೆ ಗದಗ ಶಹರ ಪೊಲೀಸ್ ಠಾಣೆ ಸಿಪಿಐ ಎಲ್.ಕೆ ಜೂಲಕಟ್ಟಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಸದ್ಯ ವಿದ್ಯಾರ್ಥಿನಿಯ ಮೃತ ದೇಹವನ್ನು ಗದಗ ಜಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಅಪ್ಪಾ , ಪ್ರೀತ್ಸೋದ್ ತಪ್ಪಾ? -ಡೆತ್ ನೋಟ್ ಬರೆದು ನೇಣಿಗೆ ಶರಣಾದ ಯುವತಿ!

ಬೆಂಗಳೂರಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ವಾಸವಾಗಿದ್ದ ಪಿಜಿಯಲ್ಲೇ ನೇಣಿಗೆ ಕೊರಳೊಡ್ಡಿದ್ದಾಳೆ.

ಹೆಸರುಘಟ್ಟ ರಸ್ತೆಯ ಖಾಸಗಿ ಕಾಲೇಜು ವಿಧ್ಯಾರ್ಥಿನಿ ಸೋಲದೇವನಹಳ್ಳಿಯ ಪಿಜಿಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ. ಮೃತಳನ್ನು ಹಾಸನ  ಮೂಲದ ವತ್ಸಲಾ (19) ಎಂದು ಗುರುತಿಸಲಾಗಿದೆ. ಈಕೆ ಅಂತಿಮ ವರ್ಷದ ಬಿ ಫಾರ್ಮ್ ವ್ಯಾಸಾಂಗ ಮಾಡುತ್ತಿದ್ದಳು.

ಪಿಜಿಯಲ್ಲಿದ್ದು ಬೆಳಿಗ್ಗೆಯಿಂದ 8 ಪುಟಗಳ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ
ಡೆತ್ ನೋಟ್‌ನಲ್ಲಿ ನನಗೆ ನಿಮ್ಮ ಪ್ರೀತಿಗೆ ಅರ್ಹಳಲ್ಲ ಅಪ್ಪ. ನೀವು ಕೊಟ್ಟಿರುವ ಪ್ರೀತಿ ಇನ್ಯಾರಿಂದಲೂ ಕೊಡಲು ಸಾಧ್ಯವಿಲ್ಲ.ಕೇಳಿದ್ದನ್ನೆಲ್ಲಾ ಕೊಡಿಸಿದ್ದೀರಿ. ಅಪ್ಪ ನಿಮ್ಮ ಮರ್ಯಾದೆ ತೆಗೆಯುವ ಕೆಲಸ ನಾನು ಮಾಡಿಲ್ಲ. ಅಪ್ಪ ನಿಮ್ಮ ಪ್ರೀತಿ ಉಳಿಸಿಕೊಳ್ಳುವ ಭಾಗ್ಯ ನನಗಿಲ್ಲ ಎಂದು ಬರೆದಿದ್ದಾಳೆ.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೋಷಕರಿಗೂ ವಿಷಯ ಮುಟ್ಟಿಸಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಹಸ್ತಾಂತರ ಮಾಡೋಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Powered by Blogger.