ಮಹಾರಾಷ್ಟ್ರದಲ್ಲಿ ಚಂದ್ರಾಪುರ ಎಂಬ ಜಿಲ್ಲೆ ಇದೆ. ಅದೇ ಜಿಲೆಯ ಗ್ರಾಮವೊಂದರಲ್ಲಿ ಇಡೀ ದೇಶವೇ ಬೆಚ್ಚಿ ಬೀಳುವ ಘಟನೆ ನಡೆದಿದೆ. ಸಾಲ ಮರುಪಾವತಿಸಲು ಆಗುತ್ತಿಲ್ಲ ಅಂತ ರೈತನ ಕಿಡ್ನಿಯನ್ನೇ ಸಾಲ ಕೊಟ್ಟ ವ್ಯಕ್ತಿಗಳು ಮಾರಿದ್ದಾರೆ. ಈ ಸುದ್ದಿ ತಿಳಿದು ಇಡೀ ದೇಶ ಬೆಚ್ಚಿ ಬಿದ್ದಿದೆ.
ಚಂದ್ರಾಪುರ ಜಿಲ್ಲೆಯ ಯುವ ರೈತನೊಬ್ಬ ಸಾಲ ಮರುಪಾವತಿಸಲು ತನ್ನ ಕಿಡ್ನಿ ಮಾರಾಟ ಮಾಡಿದ್ದಾನೆ. ನಾಗಭಿಡ್ ತಾಲೂಕಿನ ಮಿಂಥೂರಿನಲ್ಲಿ ವಾಸಿಸುವ ರೈತ ರೋಷನ್ ಕುಡೆ ಜೀವನದಲ್ಲಿ ಈ ಘಟನೆ ನಡೆದಿದೆ.
1 ಲಕ್ಷ ಸಾಲ, 8 ಲಕ್ಷಕ್ಕೆ ಕಿಡ್ನಿ ಮಾರಾಟ: ಹಾಲಿನ ವ್ಯವಹಾರವನ್ನು ಪ್ರಾರಂಭಿಸಲು ರೋಷನ್ ಖಾಸಗಿ ಲೇವಾದೇವಿದಾರರಿಂದ ಒಂದು ಲಕ್ಷ ರೂಪಾಯಿ ಬಡ್ಡಿಗೆ ಸಾಲ ಪಡೆದಿದ್ದ. ಆದರೆ, ದುರದೃಷ್ಟವಶಾತ್, ರೋಷನ್ ಸಾಕಿದ್ದ ಜಾನುವಾರುಗಳು ಸತ್ತವು. ಇದೇ ಕಾರಣಕ್ಕೆ ರೋಷನ್ ಸಾಲ ನೀಡಿದವರಿಗೆ ಸಾಲವನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ. ಆಗಲೇ ಲೇವಾದೇವಿಗಾರರ ಕಿರುಕುಳ ಶುರುವಾಯಿತು.
ಅಸಲು ಮೊತ್ತ ಮತ್ತು ಬಡ್ಡಿ ಮೊತ್ತ ಸಿಕ್ಕಾಪಟ್ಟೆ ಹೆಚ್ಚಾಯಿತು. ಕೊನೆಗೆ, ಸಾಲ ನೀಡಿದವರು ರೈತನಿಗೆ ಕಿಡ್ನಿ ಮಾರಿ ಹಣವನ್ನು ಮರು ಪಾವತಿಸುವಂತೆ ಸಲಹೆ ನೀಡಿದ್ದ. ಆ ಸಾಲದಾತನ ಸಲಹೆಯ ಮೇರೆಗೆ ರೋಷನ್ ಕುಡೆ ಮೊದಲು ಕೋಲ್ಕತ್ತಾಗೆ ಮತ್ತು ನಂತರ ಕಾಂಬೋಡಿಯಾಕ್ಕೆ ಹೋಗಿ ತನ್ನ ಮೂತ್ರಪಿಂಡವನ್ನು 8 ಲಕ್ಷ ರೂಪಾಯಿಗಳಿಗೆ ಮಾರಿದ್ದಾನೆ.
ಈ ಬಾರಿ ಸಾಲದಾತರಿಂದಾಗಿ ನನಗೆ ಈ ಸ್ಥಿತಿ ಬಂದಿದೆ ಎಂದು ಗಂಭೀರ ಆರೋಪಗಳನ್ನು ಮಾಡಿದ ನೊಂದ ರೈತ, ಸಾಲದಾತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾನೆ.
ರೈತರ ಆತ್ಮಹ*ತ್ಯೆ ಪಟ್ಟಿಯಲ್ಲಿ ಕರ್ನಾಟಕ ನಂಬರ್ 2: ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಇಳಿಕೆ ಕಂಡಿವೆ. ಆದರೂ ಕರ್ನಾಟಕ ರೈತರ ಆತ್ಮಹತ್ಯೆ ಪಟ್ಟಿಯಲ್ಲಿ ದೇಶದಲ್ಲಿ 2ನೇ ಸ್ಥಾನ ಪಡೆದಿದೆ.
ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ 1254 ಪ್ರಕರಣಗಳು ನಡೆದಿವೆ. 2024-25 ನೇ ಸಾಲಿನಲ್ಲಿ 1178 ಪ್ರಕರಣಗಳು ವರದಿಯಾಗಿವೆ. ಇನ್ನು 2025-26 ನೇ ಸಾಲಿನಲ್ಲಿ 377 ಪ್ರಕರಣಗಳು ವರದಿಯಾಗಿದೆ. ಹಾಗಿದ್ದರೂ ಕೇಂದ್ರ ಸರ್ಕಾರದ ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ ವರದಿಯನ್ವಯ ಕರ್ನಾಟಕ ರೈತರ ಆತ್ಮಹತ್ಯೆಯಲ್ಲಿ ದೇಶಕ್ಕೆ ಎರಡನೇ ಸ್ಥಾನದಲ್ಲಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ 2025-26ನೇ ಸಾಲಿನಲ್ಲಿ 377 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಒಟ್ಟು 377 ಪ್ರಕರಣಗಳ ಪೈಕಿ 46 ತಿರಸ್ಕೃತಗೊಂಡಿದೆ. 331 ತೀರ್ಮಾನಿಸಬೇಕಾದ ಪ್ರಕರಣಗಳಿವೆ. ತೀರ್ಮಾನಿಸಬೇಕಾದ ಪ್ರಕರಣಗಳಲ್ಲಿ 310 ಅರ್ಹ ಪ್ರಕರಣಗಳಿವೆ.
ಮೈಸೂರು ಜಿಲ್ಲೆಯಲ್ಲಿ 32 ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 5 ತಿರಸ್ಕೃತಗೊಂಡಿವೆ. 27 ತೀರ್ಮಾನಿಸಬೇಕಾದ ಪ್ರಕರಣಗಳಿವೆ. ಇನ್ನು ಚಾಮರಾಜನಗರ ಜಿಲ್ಲೆಯಲ್ಲಿ 3 ಪ್ರಕರಣಗಳು ವರದಿಯಾಗಿವೆ. ಮಂಡ್ಯ ಜಿಲ್ಲೆಯಲ್ಲಿ 15 ಪ್ರಕರಣಗಳು ವರದಿಯಾಗಿದ್ದು, ಕೊಡಗು ಜಿಲ್ಲೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ.
Post a Comment