16 ವರ್ಷದ ಬಾಲಕಿ, ಕೊಳೆತ ಕರುಳು ಕೊನೆಗೆ ಹೃದಯಾಘಾತ : ಪ್ರತಿಯೊಬ್ಬ ಪೋಷಕರು ಓದಲೇಬೇಕಾದ ಸುದ್ದಿಯಿದು!
ಮೊರಾದಾಬಾದ್'ನಲ್ಲಿ ಶಸ್ತ್ರಚಿಕಿತ್ಸೆಯ 20 ದಿನಗಳ ನಂತರ, ಆಕೆಯ ಆರೋಗ್ಯ ಮತ್ತೆ ಹದಗೆಟ್ಟಿದ್ದು, ನಂತ್ರ ದೆಹಲಿಯ ಏಮ್ಸ್‌ಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ಅಹಾನಾ ಭಾನುವಾರ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾಳೆ.
ಶಾಲೆಗಳ ಸುತ್ತಲೂ ಜಂಕ್ ಫುಡ್ ಬೆದರಿಕೆ.!
ನಗರದ ಶಾಲೆಗಳು ಮತ್ತು ಕಾಲೇಜುಗಳ ಬಳಿ ತೆರೆಯುತ್ತಿರುವ ಫಾಸ್ಟ್ ಫುಡ್ ಅಂಗಡಿಗಳು ಯುವಕರ ಆರೋಗ್ಯವನ್ನು ಅಪಾಯಕ್ಕೆ ಸಿಲುಕಿಸುತ್ತಿವೆ. ಚೌಮೈನ್, ಬರ್ಗರ್‌ಗಳು, ಮೊಮೊಗಳು, ಫ್ರೆಂಚ್ ಫ್ರೈಸ್, ಸಮೋಸಾಗಳು, ಪಿಜ್ಜಾ ಮತ್ತು ಕೂಲ್ ಡ್ರಿಂಕ್ಸ್ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ. ಇವುಗಳನ್ನು ಶಾಲಾ ಕ್ಯಾಂಟೀನ್'ಗಳಲ್ಲಿ ನಿಯಮಗಳಿಗೆ ವಿರುದ್ಧವಾಗಿ ಮಾರಾಟ ಮಾಡಲಾಗುತ್ತಿದೆ. ಪೋಷಕರು ಮನೆಯಿಂದ ಪೌಷ್ಟಿಕ ಆಹಾರವನ್ನು ಕಳುಹಿಸಿದರೂ, ಮಕ್ಕಳು ಹೊರಗೆ ಲಭ್ಯವಿರುವ ಅಗ್ಗದ ಮತ್ತು ರುಚಿಕರವಾದ ಜಂಕ್ ಫುಡ್'ಗೆ ವ್ಯಸನಿಯಾಗುತ್ತಿದ್ದಾರೆ.
ವೈದ್ಯರ ಎಚ್ಚರಿಕೆಗಳು.!
ಡಾ. ಅನುರಾಗ್ ಮೆಹ್ರೋತ್ರಾ (ಹೃದಯ ತಜ್ಞ): ಜಂಕ್ ಫುಡ್ ರಕ್ತದ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ ಮತ್ತು ಹೃದಯಾಘಾತದ ಅಪಾಯವನ್ನ ಹೆಚ್ಚಿಸುತ್ತದೆ. ಪೋಷಕಾಂಶಗಳಿಲ್ಲದ ಆಹಾರವು ಹೃದಯ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ ಎಂದರು.
ಡಾ. ಅಮಿಷಾ ಸಿಂಗ್ (ಡಯಟೀಷಿಯನ್) : ಮೈದಾ, ಕಡಿಮೆ ಗುಣಮಟ್ಟದ ತರಕಾರಿಗಳು ಮತ್ತು ವಿನೆಗರ್ ಸೇವನೆಯು ಯಕೃತ್ತು ಮತ್ತು ಕರುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜಂಕ್ ಫುಡ್ 'ಫೈಬರ್' ಅನ್ನು ಹೊಂದಿರುವುದಿಲ್ಲ. ಸಮೋಸಾಗಳಿಗೆ ಒಂದೇ ಎಣ್ಣೆಯನ್ನು ಪದೇ ಪದೇ ಬಳಸುವುದರಿಂದ ಅದು 'ಸ್ಲೋ ಪಾಯ್ಸನ್' ಆಗಿ ಬದಲಾಗುತ್ತದೆ.

Post a Comment