".

Header Ads

ನಿಟ್ಟೆ: ಪತಿ- ಪತ್ನಿ ಜಗಳ- ಪತ್ನಿಗೆ ಹಲ್ಲೆ ನಡೆಸಿ ಪತಿ ಆತ್ಮಹತ್ಯೆ

 

ತಾಲೂಕಿನ ನಿಟ್ಟೆ ಯಲ್ಲಿ ಪತಿ ಹಾಗೂ ಪತ್ನಿ ನಡುವೆ ಜಗಳ ನಡೆದು, ಪತ್ನಿಗೆ ಹಲ್ಲೆ ನಡೆಸಿದ ಬಳಿಕ ಪತಿ ನೇಣಿಗೆ ಶರಣಾಗಿದ್ದಾರೆ.

ಡಿ.1 ರಂದು ನಿಟ್ಟೆಯ ಸಾಯಿಕಿರಣ್ ಅವರು ಸ್ನೇಹಿತನ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದಾಗ ಅವರ ಮನೆಗೆ ಪೋಸ್ಟ್ ಕೊಡಲು ಹೋಗಿದ್ದ ಪೋಸ್ಟ್ ಮ್ಯಾನ್ ನಿಮ್ಮ ತಾಯಿ ಗಾಯಗೊಂಡಿದ್ದಾರೆ ಎಂದು ಕರೆ ಮಾಡಿ ತಿಳಿಸಿದ್ದಾರೆ. ಅವರು ಕೂಡಲೇ ಮನೆಗೆ ಬಂದಾಗ ತಂದೆ ತಾಯಿಯ ನಡುವೆ ಜಗಳ ನಡೆದು ತಂದೆ ಹಲ್ಲೆ ನಡೆಸಿ ಕೋಣೆಯಲ್ಲಿ ಬಾಗಿಲು ಹಾಕಿಕೊಂಡಿದ್ದರು. ಮಗ ಕರೆದರೂ ಪ್ರತಿಕ್ರಿಯೆ ನೀಡದ ಕಾರಣ ಸಾಯಿಕಿರಣ್ ಅವರು ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಅದೇ ವೇಳೆ ತಂದೆ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪತ್ನಿಯ ಜೊತೆ ಜಗಳವಾಡಿ ಹಲ್ಲೆ ನಡೆಸಿದ್ದು, ಅದೇ ಭಯದಿಂದ ತಂದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸಾಯಿಕಿರಣ್ ಶೆಟ್ಟಿ ದೂರು ನೀಡಿದ್ದು, ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Powered by Blogger.